Saturday, April 19, 2025

Latest Posts

ರಾಮನಾಮವನ್ನೇಕೆ ಬರೆಯಬೇಕು..? ಇದನ್ನು ಬರೆಯುವಾಗ ಯಾವ ನಿಯಮ ಅನುಸರಿಸಬೇಕು..?

- Advertisement -

ರಾಮನಾಮ ಜಪಕ್ಕಿಂತ ಅತ್ಯುತ್ತಮವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಹೇಳಿದ್ದಾನೆ. ಶತ್ರುಬಾಧೆ, ಜೀವಭಯ, ಮಾಟ ಮಂತ್ರ ಭಯ ಏನೇನ ಇದ್ದರೂ ಪ್ರತಿ ದಿನ 108 ಬಾರಿ ರಾಮನಾಮ ಜಪಿಸಿದರೆ ಎಲ್ಲ ಭಯಗಳೂ ಓಡಿಹೋಗುತ್ತದೆ. ಅಲ್ಲದೇ ಧೈರ್ಯ ಬರುತ್ತದೆ ಎಂಬ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಇಂದು ನಾವು ರಾಮ ನಾಮವನ್ನ ಬರೆಯುವುದೇಕೆ ಎನ್ನುವುದರ ಬಗ್ಗೆ ತಿಳಿಯೋಣ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಕೆಲವೆಡೆ ಹೋಮ ಹವನ ನಡೆಯುವ ವೇಳೆ ಪುಸ್ತಕವನ್ನ ಆ ಹೋಮಕ್ಕೆ ಹಾಕಲಾಗುತ್ತೆ. ಆ ಪುಸ್ತಕದಲ್ಲಿ ರಾಮನಾಮ ಜಪವನ್ನ ಬರೆಯಲಾಗುತ್ತದೆ. ಅದನ್ನ ರಾಮಕೋಟಿ ಎಂದು ಹೇಳಲಾಗುತ್ತದೆ. ಆಪುಸ್ತಕಗಳಲ್ಲಿ ರಾಮನಾಮವನ್ನು ಕೋಟಿ ಬಾರಿ ಬರೆಯಲಾಗುತ್ತದೆ. ಹೀಗೆ ಬರೆಯುವುದರಿಂದ ರಾಮನ ಕೃಪೆ ನಮ್ಮ ಮೇಲಿರುತ್ತದೆ.

ಹಾಗಾದ್ರೆ ಶ್ರೀರಾಮ ಜಯರಾಮ ಜಯ ಜಯ ರಾಮ ಜಪವನ್ನ ಕೋಟಿ ಬಾರಿ ಬರೆಯುವಾಗ ಅನುಸರಿಸಬೇಕಾದ ನಿಯಮಗಳೇನು ಅಂತಾ ನೋಡೋದಾದ್ರೆ, ಉತ್ತಮ ಮುಹೂರ್ತವನ್ನ ನೋಡಿ, ಬಿಳಿ ಹಾಳೆಯ ಪುಸ್ತಕ ಮತ್ತು ಹಸಿರು ಶಾಯಿಯ ಪೆನ್ನು ತಂದು, ದೇವರ ಮುಂದಿಟ್ಟು, ಅರಿಶಿನ ಕುಂಕುಮ, ಹೂವನ್ನಿಟ್ಟು ಪೂಜಿಸಬೇಕು. ನಂತರ ಉತ್ತಮ ಮುಹೂರ್ತದಲ್ಲಿ ರಾಮನಾಮ ಬರೆಯಬೇಕು.
ಅಲ್ಲದೇ, ರಾಮನಾಮ ಬರೆಯುವಾಗ ಯಾರೊಂದಿಗೂ ಮಾತನಾಡಬಾರದು. ಟಿವಿ ನೋಡುತ್ತ, ಮೊಬೈಲ್ ನೋಡುತ್ತ. ತಿಂಡಿ ತಿನ್ನುತ್ತ ರಾಮನಾಮ ಬರೆಯಬಾರದು. ಮನಸ್ಸಿಲ್ಲದಿದ್ದೂ ಏನೋ ಬರೆದು ಮುಗಿಸೋಣ ಎನ್ನುವ ಮನೋಭಾವನೆಯಿಂದ ಬರೆಯಬಾರದು. ರಾಮನಾಮ ಜಪ ಬರೆಯುವಾಗ, ಭಕ್ತಿ ಶ್ರದ್ಧೆಯಿಂದ ರಾಮನಾಮ ಬರೆಯಬೇಕು.

ಪ್ರತಿದಿನ ಸ್ನಾನ ಮಾಡಿದ ಬಳಿಕವೇ ರಾಮನಾಮ ಬರೆಯಬೇಕು. ಹೆಣ್ಣು ಮಕ್ಕಳು ಮುಟ್ಟಾದಾಗ ರಾಮನಾಮ ಬರೆಯಬಾರದು ಮತ್ತು ಆ ಪುಸ್ತಕವನ್ನ ಸಹ ಮುಟ್ಟಬಾರದು. ಅದಕ್ಕಾಗಿ ರಾಮನಾಮ ಬರೆದ ಪುಸ್ತಕವನ್ನ ದೇವರ ಕೋಣೆಯಲ್ಲೇ ಇರಿಸಿದರೆ ಉತ್ತಮ. ಇನ್ನು ಸೂತಕವಿದ್ದಾಗ ಕೂಡ ರಾಮನಾಮ ಪುಸ್ತಕ ಮುಟ್ಟಬಾರದು.
ರಾಮನಾಮ ಕೋಟಿ ಬಾರಿ ಬರೆದ ನಂತರ ಚಿಕ್ಕದಾಗಿ ಪೂಜೆ ಮಾಡಿ, ಬೆಲ್ಲವನ್ನ ಅಥವಾ ಯಾವುದಾದರೂ ಸಿಹಿ ತಿಂಡಿ ನೈವೇದ್ಯ ಮಾಡಿದರೆ ಉತ್ತಮ. ನಂತರ ಯಾವುದಾದರೂ ರಾಮನ ದೇವಸ್ಥಾನಕ್ಕೆ ಆ ಪುಸ್ತಕವನ್ನ ನೀಡಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss