ಬಾಲಿವುಡ್‌ನ ಬ್ಯಾಡ್‌ಬಾಯ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್, ಬಹುಬೇಡಿಕೆ ಇರುವ ಮತ್ತು ತನ್ನದೇ ಸ್ಟೈಲ್ ಮೆಂಟೇನ್ ಮಾಡಿರುವ ನಟ. ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಿ, ಅದನ್ನ ರಂಜಾನ್ ದಿನ ರಿಲೀಸ್ ಮಾಡೋ ಸಲ್ಮಾನ್ ಖಾನ್, ಬಿಗ್‌ಬಾಸ್‌ನ ನಿರೂಪಕ ಕೂಡ ಹೌದು. ಹಾಗಾದ್ರೆ ಬಹುಬೇಡಿಕೆಯ ಈ ನಟನ ಆಸ್ತಿ ಎಷ್ಟು..? ಈತನ ಬಳಿ ಯಾವ ಯಾವ ಕಾರ್‌ಗಳಿದೆ..? ಈತ ಕಟ್ಟಿರುವ ಮನೆ ಎಷ್ಟು ಕೋಟಿ ಬೆಲೆ ಬಾಳುವಂಂಥದ್ದು ಅನ್ನೋ ಬಗ್ಗೆ ಫುಲ್ ಡಿಟೇಲ್ಸ್ ತಿಳಿಯೋಣ ಬನ್ನಿ..

ಬಾಲಿವುಡ್‌ನಲ್ಲಿ ಅತೀ ಹೆಚ್ಚಿನ ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಖಾನ್ ಟಾಪ್ ನಟ ಅಂತಾನೇ ಹೇಳಬಹುದು. ಇವರು ಒಂದು ಚಿತ್ರಕ್ಕೆ 50 ಕೋಟಿ ಸಂಭಾವನೆ ಪಡೆಯುತ್ತಾರೆ. ಇವರು ಮುಂಬೈನಲ್ಲಿ, ಬೆಂಗಳೂರಿನಲ್ಲಿ ಸೇರಿ ಇನ್ನು ಹಲವು ಕಡೆ ಫ್ಯಾಟ್ ಖರೀದಿಸಿದ್ದಾರೆ. ಬೆಂಗಳೂರಿನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಮನೆ ಖರೀದಿಸಿದ್ದು, ಇದರ ಬೆಲೆ 16 ಕೋಟಿಯಾಗಿದೆ. ಇಷ್ಟೇ ಅಲ್ಲದೇ, ಕಾರ್, ಬೈಕ್ ಮತ್ತು ಸೈಕಲ್ ಕ್ರೇಜ್ ಹೊಂದಿರುವ ಸಲ್ಮಾನ್ ಖಾನ್ ಬಳಿ, ವೆರೈಟಿ ವೆರೈಟಿ ಕಾರ್, ಬೈಕ್, ಸೈಕಲ್‌ಗಳಿದೆ.

ಇಷ್ಟೇ ಅಲ್ಲದೇ, ಸಲ್ಮಾನ್ ಹೆಸರಿನಲ್ಲಿ 150 ಎಕರೆಯ ಫಾರ್ಮ್‌ಹೌಸ್ ಇದೆ. ಇಲ್ಲಿ ಸಲ್ಮಾನ್ ಫ್ರೀ ಇದ್ದಾಗ, ತಮ್ಮ ಕುಟುಂಬ, ಗೆಳೆಯರ ಬಳಗದೊಂದಿಗೆ ಕಾಲ ಕಳೆಯುತ್ತಾರೆ. ಈ ಜಾಗದಲ್ಲಿ ಕುದುರೆಗಳು ಕೂಡ ಇದೆ. ಇನ್ನು ಈ ಫಾರ್ಮ್‌ಹೌಸ್‌ನ ಬೆಲೆ 80 ಕೋಟಿ ಇದೆ. ಇನ್ನು ಇವರ ಒಟ್ಟು ಆಸ್ತಿ 1,950 ಕೋಟಿ.


