ಶಿವ ಒಲಿಬೇಕೆಂದಲ್ಲಿ, ನೀವು ಭಕ್ಷ್ಯ, ಭೋಜನಗಳನ್ನು ನೈವೇದ್ಯ ಮಾಡುವುದು ಬೇಡ, ಚಿನ್ನಾಭರಣವನ್ನು ಹಾಕುವುದು ಬೇಡ, ತರಹ ತರಹದ ಹೂಗಳನ್ನು ಇಡುವುದು ಬೇಡ, ಪ್ರಾಣಿ ಬಲಿಯಂತೂ ಬೇಡವೇ ಬೇಡ. ಬರೀ ಒಮ್ಮೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಸಾಕು, ಶಿವ ಒಲಿದೇ ಬಿಡುತ್ತಾನೆ. ಶಂಭೋ ಎಂದರೆ ಬರುವ ಕರುಣಾಮಯಿ ಶಿವನಿಗೇಕೆ ಜಲಾಭಿಷೇಕ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಶಿವರಾತ್ರಿಯಂದು ಮತ್ತು ಶ್ರಾವಣ ಸೋಮವಾರದಂದು ಶಿವನಿಗೆ ಜಲಾಭಿಷೇಕ ಮಾಡಲಾಗುತ್ತದೆ. ಶ್ರಾವಣದ ಪಾವನ ತಿಂಗಳಲ್ಲಿ ಶಿವನಿಗೆ ಜಲಾಭಿಷೇಕ ಮಾಡಿದರೆ, ಶಿವ ಪ್ರಸನ್ನನಾಗುತ್ತಾನೆ. ಬೇಡಿದ್ದನ್ನು ಕರುಣಿಸುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಈ ಸಮಯದಲ್ಲಿ ಹೆಚ್ಚಿನ ಜನ ಜಲಾಭಿಷೇಕ ಮಾಡುತ್ತಾರೆ. ಈ ಜಲಾಭಿಷೇಕದ ಹಿಂದೆ ಒಂದು ಕಥೆ ಇದೆ.
ಸಮುದ್ರ ಮಂಥನದ ಸಮಯದಲ್ಲಿ ದೇವ ಮತ್ತು ದಾನವರ ನಡುವೆ ಅಮೃತಕ್ಕಾಗಿ ಜಟಾಪಟಿ ನಡೆಯುತ್ತಿತ್ತು. ಒಂದು ಹನಿ ಅಮೃತ ನೆಲಕ್ಕೆ ಬಿದ್ದರೂ, ಲೋಕಕ್ಕೆ ಕಂಠವಾಗುವ ಸಾಧ್ಯತೆ ಇತ್ತು. ಹಾಗಾಗಿ ಶಿವ ಸಮುದ್ರ ಮಂಥನದಲ್ಲಿ ಬಂದ ಹಾಲಾಹಲವನ್ನು ಕುಡಿದು ನೀಲ ಕಂಠನಾದ. ಅವನ ದೇಹ ಸುಡುವಷ್ಟು ಉಷ್ಟಗೊಂಡಿತ್ತು. ಅವನನ್ನು ತಂಪು ಮಾಡುವುದಕ್ಕೆ ದೇವಾನು ದೇವತೆಗಳು, ಶಿವನಿಗೆ ಜಲಾಭಿಷೇಕ ಮಾಡಿದರು.
ಆಗ ಶಿವನ ದೇಹ ತಣ್ಣಗಾಯಿತು. ಹಾಗಾಗಿ ಶಿವನ ಜೀವ ತಣ್ಣಗಾಗಲಿ, ಶಿವ ಪ್ರಸನ್ನನಾಗಲಿ ಎಂದು ಪ್ರಾರ್ಥಿಸಿ, ಭಕ್ತರು ಜಲಾಭಿಷೇಕ ಮಾಡುತ್ತಾರೆ. ಅಲ್ಲದೇ ಶ್ರಾವಣ ಮಾಸದ ಸೋಮವಾರದಂದು ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ, ಜಲಾಭಿಷೇಕ ಮಾಡುವುದರಿಂದ ಸಕಲ ಇಷ್ಚಾರ್ಥಗಳು ಸಿದ್ಧಿಸುತ್ತದೆ ಅನ್ನೋ ನಂಬಿಕೆ ಇದೆ.