ಸಾಮಾನ್ಯವಾಗಿ ಶಿವನಿಗೆ ಇಬ್ಬರು ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಬ್ರಮಣ್ಯ ಮತ್ತು ಗಣಪತಿ. ಶಿವನ ಅಂಶದಿಂದ ಹುಟ್ಟಿದ್ದು, ಸುಬ್ರಹ್ಮಣ್ಯನಾದರೆ, ಪಾರ್ವತಿಯ ಅಂಶದಿಂದ ಹುಟ್ಟಿದ್ದು ಗಣಪತಿ. ಆದ್ರೆ ಶಿವನಿಗೆ ಮೂವರು ಹೆಣ್ಣು ಮಕ್ಕಳು ಕೂಡ ಇದ್ದರೆಂಬುದರ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಆ ಬಗ್ಗೆ ಕೆಲ ಮಾಹಿತಿಗಳನ್ನ ತಿಳಿಯೋಣ ಬನ್ನಿ..
ಶಿವನ ಮೂರು ಪುತ್ರಿಯರ ಹೆಸರು, ಅಶೋಕ ಸುಂದರಿ, ಜ್ಯೋತಿ ಮತ್ತು ವಾಸುಕಿ. ತನ್ನ ಒಂಟಿತನವನ್ನು ದೂರ ಮಾಡಲು ಪಾರ್ವತಿ, ಅಶೋಕ ಸುಂದರಿಗೆ ಜನ್ಮ ನೀಡಿದಳು. ಆಕೆ ಪಾರ್ವತಿಯ ಶೋಕವನ್ನು ದೂರ ಮಾಡಲು ಬಂದಿದ್ದಳು. ಮತ್ತು ಆಕೆ ಸುಂದರವಾಗಿದ್ದಳು. ಕಾರಣ, ಆಕೆಗೆ ಅಶೋಕ ಸುಂದರಿ ಎಂದು ನಾಮಕರಣ ಮಾಡಲಾಯಿತು. ಗುಜರಾತ್‌ನ ದೇವಸ್ಥಾನವೊಂದರಲ್ಲಿ ಈಕೆಯನ್ನ ಪೂಜಿಸಲಾಗುತ್ತದೆ.
ಇನ್ನು ಎರಡನೇಯ ಪುತ್ರಿ ಜ್ಯೋತಿ. ಜ್ಯೋತಿ ದೇವಿಗೆ ಜ್ವಾಲಾಮುಖಿ ಅಂತಾನೂ ಕರಿಯಲಾಗುತ್ತದೆ. ಯಾಕಂದ್ರೆ ಮೊದಲ ಕಥೆಯ ಪ್ರಕಾರ ಈಕೆ, ಶಿವನ ತೇಜಸ್ಸಿನಿಂದ ಜನಿಸಿದವಳು. ಎರಡನೇಯ ಕಥೆಯ ಪ್ರಕಾರ, ಪಾರ್ವತಿಯ ನೆತ್ತಿಯ ಬಿಸಿಯಿಂದ ಜನಿಸಿದಳು. ಹಾಗಾಗಿ ಈ ದೇವಿಗೆ ಜ್ಯೋತಿ ಎಂದು ನಾಮಕರಣ ಮಾಡಲಾಯಿತು. ತಮಿಳುನಾಡಿನ ದೇವಸ್ಥಾನ ಒಂದರಲ್ಲಿ ಜ್ಯೋತಿ ಮಾತೆಯನ್ನ ಪೂಜಿಸಲಾಗುತ್ತದೆ.
ಇನ್ನು ಮೂರನೆಯವಳು ವಾಸುಕಿ. ಒಮ್ಮೆ ಕದ್ರಾದೇವಿಯ ಮೂರ್ತಿಯ ಮೇಲೆ ಶಿವನ ಬೆವರು ಬಿತ್ತಂತೆ. ಹೀಗಾಗಿ ವಾಸುಕಿ ಜನಿಸಿದಳು ಎಂದು ಹೇಳಲಾಗುತ್ತದೆ. ಈಕೆಯನ್ನ ಮನ್ಸಾದೇವಿ ಅಂತಾನೂ ಕರೆಯಲಾಗುತ್ತದೆ. ಬಂಗಾಲದ ಹಲವು ದೇವಸ್ಥಾನದಲ್ಲಿ ಈಕೆಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.