ಕರ್ನಾಟಕದಲ್ಲಿ ಹಲವಾರು ಗಣಪತಿ ದೇವಸ್ಥಾನಗಳಿದೆ. ಆ ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷತೆ ಇದೆ. ಅಂಥ ವಿಶೇಷ ಆದ್ಯತೆ ಹೊಂದಿರುವ ಗಣಪತಿ ಎಂದರೆ, ಸೌತಡ್ಕ ಮಹಾಗಣಪತಿ. ಈ ಗಣಪತಿಯ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಎಲ್ಲಾ ದೇವಸ್ಥಾನದಲ್ಲೂ ಗರ್ಭಗುಡಿ ಇರುತ್ತದೆ. ಗೋಪುರ ನಿರ್ಮಿಸಿ ದೇವಸ್ಥಾನವನ್ನ ಕೂಡ ನಿರ್ಮಿಸಲಾಗುತ್ತದೆ. ಆದ್ರೆ ಸೌತಡ್ಕ ಮಹಾಗಣಪತಿ ದೇವಸ್ಥಾನ ಮಾತ್ರ ಬಯಲಿನಲ್ಲೇ ಪೂಜಿಸಲ್ಪಡುತ್ತಾನೆ. ಅಷ್ಟು ಸರಳ ಇಲ್ಲಿನ ಮಹಾಗಣಪತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದಲ್ಲಿ ಈ ದೇವಸ್ಥಾನವಿದೆ.

ಇನ್ನು ಈ ಊರಿಗೆ ಸೌತಡ್ಕ ಅಂತಾ ಹೆಸರು ಬಂದಿದ್ದು ಹೇಗೆ..? ಗಣಪತಿಗೆ ಯಾಕೆ ಗೋಪುರದ ದೇವಸ್ಥಾನವಿಲ್ಲ ಅನ್ನೋ ಬಗ್ಗೆ ಇರೋ ಕಥೆಯ ಬಗ್ಗೆ ಹೇಳ್ತೀವಿ ಕೇಳಿ.
ಈ ಸ್ಥಳದಲ್ಲಿ ಗೋಪಾಲಕರು ಗೋವನ್ನು ಮೇಯಿಸಿ ಬರುವಾಗ, ಅವರಿಕೆ ಈ ಗಣಪತಿ ಮೂರ್ತಿ ಕಂಡಿತು. ಮೂರ್ತಿಯನ್ನ ಕಂಡ ಗೋಪಾಲಕರು ಆ ಸ್ಥಳವನ್ನು ಸ್ವಚ್ಛಗೊಳಿಸಿ, ಪೂಜೆ, ಭಜನೆ ಮಾಡಿ ತಾವು ಬೆಳೆದ ಸೌತೇಕಾಯಿಯನ್ನು ದೇವರಿಗೆ ನೈವೇದ್ಯ ಮಾಡುತ್ತಿದ್ದರು. ಆದ್ದರಿಂದ ಈ ಸ್ಥಳಕ್ಕೆ ಸೌತಡ್ಕ ಎಂಬ ಹೆಸರು ಬಂತು.

ಇನ್ನು ಈ ದೇವಸ್ಥಾನ ಬಯಲಲ್ಲಿರುವುದರಿಂದ ದೇವಸ್ಥಾನ ಎಂದಿಗೂ ತೆರೆದಿರುತ್ತದೆ. ಗಣಪತಿ ಜಾತಿ ಬೇಧ, ಬಡವ ಶ್ರೀಮಂತರೆನ್ನದೇ ಎಲ್ಲರಿಗೂ ದರ್ಶನ ನೀಡುತ್ತಾನೆ. ಇಲ್ಲಿ ದೇವಸ್ಥಾನ ಕಟ್ಟಲು ಹಲವರು ಪ್ರಯತ್ನಿಸಿದರು, ಅದು ಸಫಲವಾಗಲಿಲ್ಲ. ಹಾಗಾಗಿ ಇಲ್ಲಿ ದೇವಾಲಯ ನಿರ್ಮಿಸುವ ಆಲೋಚನೆ ಬಿಡಲಾಯಿತು.
ಇಲ್ಲಿ ಗಂಟೆ ಹರಕೆ, ಪಂಚಕಜ್ಜಾಯ ಹರಕೆ ಮುಖ್ಯವಾಗಿದೆ. ವಿವಾಹ ಸಮಸ್ಯೆ, ಸಂತಾನ ಸಮಸ್ಯೆ, ಸತಿ ಪತಿ ಕಲಹ ಇತ್ಯಾದಿ ಸಮಸ್ಯೆ ಇದ್ದರೆ ಹರಕೆ ಹೊತ್ತು, ಅದು ಈಡೇರಿದ ಮೇಲೆ ಇಲ್ಲಿ ಬಂದು ಗಂಟೆ ಕಟ್ಟಲಾಗುತ್ತದೆ. ಅಲ್ಲದೇ ಪಂಚಕಜ್ಜಾಯ ಮಾಡಿ, ದೇವರಿಗೆ ಅರ್ಪಿಸಿ, ಅಲ್ಲಿನ ಗೋಪಾಲಕರಿಗೆ ಹಂಚಿದರೆ, ಅಂದುಕೊಂಡ ಕೆಲಸ ಈಡೇರುತ್ತದೆ ಎಂಬ ನಂಬಿಕೆ ಇದೆ. ಸೌತಡ್ಕ ಗಣಪತಿಗೆ ಆರತಿ ಮಾಡುವಾಗ ಎಷ್ಟು ಜೋರಾಗಿ ಗಾಳಿ ಬೀಸಿದರೂ ಕೂಡ ಆರತಿ ಆರುವುದಿಲ್ಲ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754