Friday, November 22, 2024

Latest Posts

ಶ್ರೀರಂಗಪಟ್ಟಣ ಮಕ್ಕಳ ದಸರಾ ಮತ್ತು ಯುವ ದಸರಾ ಬಗ್ಗೆ ಸಂಪೂರ್ಣ ಮಾಹಿತಿ..

- Advertisement -

ಸೆ.30 ರಂದು ಶ್ರೀರಂಗಪಟ್ಟಣ ಮಕ್ಕಳ ದಸರಾ

ಮಂಡ್ಯ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀರಂಗಪಟ್ಟಣ ಮಕ್ಕಳ ದಸರಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 03  ಗಂಟೆಯವರೆಗೆ  ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದ ಶ್ರೀ ರಂಗ ವೇದಿಕೆಯಲ್ಲಿ  ನಡೆಯಲಿದೆ.

ಜಿಲ್ಲೆಯ 08 ತಾಲೂಕುಗಳ ಮಕ್ಕಳಿಂದ ಕವಿಗೋಷ್ಠಿ, ನಾಗಮಂಗಲ ತಾಲೂಕಿನ ಬೋಗಾದಿ ಸರ್ಕಾರಿ ಶಾಲಾ ಮಕ್ಕಳಿಂದ  ನಾಟಕ,  ಸುಸ್ಥಿರ  ಮೂಲ ವಿಜ್ಞಾನ ಅಭಿವೃದ್ಧಿಗಾಗಿ ಮೂಲ ವಿಜ್ಞಾನ ವಿಷಯ ಕುರಿತು ವಿಚಾರಗೋಷ್ಠಿ, ಕ್ರೀಡೆ ವಿಜ್ಞಾನ ಮತ್ತು ಶೈಕ್ಷಣಿಕ  ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನುರಿತ ಶಿಕ್ಷಣ ತಜ್ಞ ಎಸ್.ಬಿ. ಶಂಕರೇಗೌಡ  ಅವರಿಂದ  ಶೈಕ್ಷಣಿಕ ಮಾರ್ಗದರ್ಶನ ನಡೆಯಲಿದೆ.

ವಿವಿಧ ಶಾಲಾ ಮಕ್ಕಳಿಂದ ಜಾನಪದ ನೃತ್ಯ- ಸುಗ್ಗಿ ಕಾಲ, ರಂಗ ಕುಣಿತ,  ಸಮೂಹ ನೃತ್ಯ, ಪೂಜಾ ಕುಣಿತ, ಡೊಳ್ಳು ಕುಣಿತ, ಸಾಮೂಹಿಕ ನೃತ್ಯ,  ಭರತನಾಟ್ಯ  ಸಂಸ್ಕೃತಿಕ ಮನರಂಜನ ಕಾರ್ಯಕ್ರಮ  ನಡೆಯಲಿದೆ ಎಂದು‌ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು‌ ತಿಳಿಸಿದ್ದಾರೆ.

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಶ್ರೀರಂಗಪಟ್ಟಣ ದಸರಾ ಕ್ರೀಡಾಕೂಟಕ್ಕೆ ನೋಂದಣಿ

ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಕ್ರೀಡಾ ದಸರಾ-2022ನ್ನು ಸಂಘಟಿಸುತ್ತಿದ್ದು, ಭಾಗವಹಿಸುವ ಕ್ರೀಡಾಪಟುಗಳು ಸೆಪ್ಟೆಂಬರ್ 26 ರೊಳಗಾಗಿ ಸಂಬಂಧಪಟ್ಟವರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಪುರುಷ ಮತ್ತು ಮಹಿಳೆಯರಿಗೆ ಸೆಪ್ಟೆಂಬರ್ 27 ರಂದು ಬೆಳಿಗ್ಗೆ 9.30 ಕ್ಕೆ ಕೆ.ಶೆಟ್ಟಹಳ್ಳಿಯ ಸಾಯಿ ಗಾರ್ಮೆಂಟ್ಸ್ ಎದುರು ಕೆಸರು ಗದ್ದೆ ಓಟ (29 ವರ್ಷ ಒಳಗಿನ ಹಾಗೂ 30 ವರ್ಷದೊಳಗಿನ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಮಾತ್ರ) ಹಾಗೂ ಹಗ್ಗ ಜಗ್ಗಾಟ ಮಧ್ಯಾಹ್ನ 2-30 ಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು, ನೋಂದಾಣಿಗಾಗಿ ದೈವಶಿಗಾಮಣಿ ಮೊ.ಸಂ.7502126870, ಸೆಪ್ಟೆಂಬರ್ 28 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಿಂದ ಕರಿಘಟ್ಟ ದೇವಸ್ಥಾನದ ಪಾದದವರೆಗೆ ಮ್ಯಾರಾಥಾನ್, ನೋಂದಾಣಿಗಾಗಿ ಅಚೀವರ್ಸ್ ಅಕಾಡೆಮಿ ಡಾ. ರಾಘವೇಂದ್ರ ಮೊ.9620557621,

ಸೆಪ್ಟೆಂಬರ್ 29ರಂದು ಬೆಳಿಗ್ಗೆ 7 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರಿಗೆ ಬೆಟ್ಟ ಹತ್ತುವುದು(ಚಾರಣ), ನೋಂದಾಣಿಗಾಗಿ ಅಚೀವರ್ಸ್ ಅಕಾಡೆಮಿ ಡಾ. ರಾಘವೇಂದ್ರ ಮೊ.9620557621, ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9-30ಕ್ಕೆ ಕಬ್ಬಡಿ,ಖೋ ಖೋ ವಾಲಿಬಾಲ್ ನಡೆಯಲ್ಲಿದ್ದು, ನೋಂದಾಣಿಗಾಗಿ ರೂಪ ಶ್ರೀ. (ಕಬ್ಬಡಿ)ಮೊ.7353097540, ಸೋಮಶೇಖರ್ (ವಾಲಿಬಾಲ್) ಮೊ.9740896699, ಭರತ್ ಕುಮಾರ್(ಖೋ ಖೋ) ಮೊ. 9916644097.

ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9-30 ಕ್ಕೆ ಶ್ರೀರಂಗಪಟ್ಟಣ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಚೆಸ್ ಪಂದ್ಯ ನಡೆಯಲಿದ್ದು, ನೋಂದಾಣಿಗಾಗಿ ಮಾಧುರಿ ಮೊ.8050244338, ಸೆಪ್ಟೆಂಬರ್ 30 ರಂದು ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9-30 ಕ್ಕೆ ಗುಂಡು ಎಸೆತ( ವಿಕಲ ಚೇತನರಿಗೆ ಮಾತ್ರ), ನೋಂದಾಣಿಗಾಗಿ ದೈವಶಿಗಾಮಣಿ ಮೊ.ಸಂ.7502126870.

ಅಕ್ಟೋಬರ್ 01 ರಂದು ಬೆಳಿಗ್ಗೆ 9-30 ಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ, ಖೋಖೋ ಮತ್ತು ವಾಲಿಬಾಲ್ ಫೈನಲ್ ಪಂದ್ಯಗಳು ಹಾಗೂ ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣದ ಸೇಂಥೀಲ್  ಕೋಟೆ ಆವರಣದಲ್ಲಿ ಕುಸ್ತಿ ನಡೆಯಲಿದ್ದು, ಕುಸ್ತಿ ಆಯೋಜಕರಲ್ಲಿ ವರದಿ ಮಾಡಿಕೊಳ್ಳುವುದೆಂದು ಮಂಡ್ಯ ಯುವ ಸಬಲೀಕರಣ  ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದೇರ್ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಮೀರ್ ಅಹಮದ್ ಮಗ ಝೈದ್ ಖಾನ್‌ ಬಂಡಿ ಮಹಾಕಾಳಮ್ಮ ದೇವಸ್ಥಾನಕ್ಕೆ ಭೇಟಿ..

ಶ್ರೀರಂಗಪಟ್ಟಣ ಯುವ ದಸರಾ..

ಶ್ರೀರಂಗಪಟ್ಟಣ ದಸರಾ ಮಹೋತ್ಸವ 2022 ರ ಯುವದಸರಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ಸಂಜೆ 5.00 ಗಂಟೆಯಿಂದ 7.00 ಗಂಟೆವರೆಗೆ ನಡೆಯಲಿದೆ.

ಸೆಪ್ಟೆಂಬರ್ 29 ರಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಸಮೂಹ ಗಾನ, ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸೆಮಿಕ್ಲಾಸಿಕಲ್ ನೃತ್ಯ ಮತ್ತು ಸಮೂಹ ಗಾನ, ಬಿ.ಜಿ ನಗರ ನಾಗಮಂಗಲ ಬಿ.ಜಿ.ಎಸ್. ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕ್ಲಾಸಿಕಲ್ ನೃತ್ಯ ಮತ್ತ ಭರತ ನಾಟ್ಯ, ಶ್ರೀರಂಗಪಟ್ಟಣ ಮಹಾರಾಜ ತಾಂತ್ರಿಕ ವಿದ್ಯಾಲಯದ ವತಿಯಿಂದ ನೃತ್ಯ ರೂಪಕ, ಪಾಂಡವಪುರ ತಾಲ್ಲೂಕಿನ ಎಸ್.ಇ.ಟಿ ಪಾಲಿಟೆಕ್ನಿಕ್ ಮೇಲುಕೋಟೆ ರವರ ವತಿಯಿಂದ ಸಾಮೂಹಿಕ ಗಾಯನ, ನೃತ್ಯ ಮತ್ತು ಸ್ಕಿಟ್, ಪಾಂಡವಪುರ ತಾಲ್ಲೂಕಿನ ಬೆಳಕು ಸ್ಕೂಲ್ ಆಫ್ ಆಟ್ರ್ಸ್ ವತಿಯಿಂದ ಭರತ ನಾಟ್ಯ (ಶ್ರೀಮತಿ ಇಂಧೂಶ್ರೀ) ಕಾರ್ಯಕ್ರಮಗಳು ನಡೆಯಲಿವೆ.

ಸೆಪ್ಟೆಂಬರ್ 30ರಂದು ಮಂಡ್ಯ ನರ್ಸಿಂಗ್ ಕಾಲೇಜು ವತಿಯಿಂದ ಡ್ಯಾನ್ಸ್, ಎಸ್.ಡಿ ಜಯರಾಂ ನರ್ಸಿಂಗ್ ಕಾಲೇಜು ವತಿಯಿಂದ ಭರತ ನಾಟ್ಯ ಮತ್ತು ಜಾನಪದ ನೃತ್ಯ, ಮಂಡ್ಯ ಸ್ಯಾಂಜೋ ನರ್ಸಿಂಗ್ ಕಾಲೇಜು ವತಿಯಿಂದ ಶಾಸ್ತ್ರೀಯ ನೃತ್ಯ, ಪಾಶ್ಚಾತ್ಯ ನೃತ್ಯ, ಕೋಲಾಟ, ಕೇರಳ ಸಾಂಸ್ಕøತಿಕ ನೃತ್ಯ ಮತ್ತು ಜಾರ್ಖಂಡ್ ಸಾಂಸ್ಕøತಿಕ ನೃತ್ಯ, ಮಳವಳ್ಳಿ ಮೈಸೂರು ರಸ್ತೆ ವಿದ್ಯಾಪ್ಯಾರಾ ಮೆಡಿಕಲ್ ವಿಜ್ಞಾನ ಸಂಸ್ಥೆಯ ವತಿಯಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ..

ಅಕ್ಟೋಬರ್ 1 ರಂದು ಮಂಡ್ಯ ಶಂಕರೇಗೌಡ ಬಿ.ಇಡಿ ಕಾಲೇಜು ವತಿಯಿಂದ ನಾಟಕ (ಜಲಗಾರ-ಕುವೆಂಪು), ಸೆಂಟ್ ಜೋಸೆಪ್ ಬಿ.ಇಡಿ ಕಾಲೇಜು ವತಿಯಿಂದ ಕಂಸಾಳೆ, ಪಾಂಡವಪುರ ಜಯಂತಿನಗರ ಶಂಭುಲಿಂಗೇಶ್ವರ ಬಿ.ಇಡಿ ಕಾಲೇಜು ವತಿಯಿಂದ ಪುನೀತ್ ರಾಜ್ ಕುಮಾರ್ ಥೀಮ್, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಜಾನಪದ ಕಲೆ, ಮಂಡ್ಯ ವಿಶ್ವವಿದ್ಯಾನಿಲಯದ ವತಿಯಿಂದ ಜಾನಪದ ಗೀತೆ ಮತ್ತು ರಂಗ ಗೀತೆ, ನಾಗಮಂಗಲ ಆದಿಚುಂಚನಗಿರಿ ಕಲೆ ಮತ್ತು ವಾಣಿಜ್ಯ ಕಾಲೇಜುರವರ ವತಿಯಿಂದ ನೃತ್ಯ, ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್.ಟಿ.ಜಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನೃತ್ಯ ಕಾರ್ಯಕ್ರಮ, ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ಜಾನಪದ ನೃತ್ಯ, ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸ್ಯಾಕ್ಸೋ ಪೋನ್ ನುಡಿಸುವುದು, ಶ್ರೀರಂಗಪಟ್ಟಣ ಪರಿವರ್ತನ ಪ್ರಥಮ ದರ್ಜೆ ಕಾಲೇಜು ಜಾನಪದ ನೃತ್ಯ, ಪೂಜಾ ಕುಣಿತ, ವೀರಗಾಸೆ, ರಂಗಕುಣಿತ ಮತ್ತು ಪಟ್ಟಕುಣಿತ ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಅಕ್ಟೋಬರ್ 2 ರಂದು ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಸರ್ಕಾರಿ ಪದವಿ ಕಾಲೇಜು ವತಿಯಿಂದ ಜಾನಪದ ನೃತ್ಯ, ಮಂಡ್ಯ ಕಾರ್ಮಲ್ ಪಿ.ಯು ಕಾಲೇಜು ವತಿಯಿಂದ ಭರತ ನಾಟ್ಯ ಮತ್ತು ಸೆಮಿ ಕ್ಲಾಸಿಕಲ್, ಮಂಡ್ಯ ಆದರ್ಶ ಪಿ.ಯು ಕಾಲೇಜು ವತಿಯಿಂದ ಸಮೂಹ ನೃತ್ಯ, ಮಂಡ್ಯ ರೋಟರಿ ಪಿ.ಯು ಕಾಲೇಜು ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ, ಮಳವಳ್ಳಿ ಭಗವಾನ್ ಬುದ್ಧ ಪದವಿ ಪೂರ್ವ ಕಾಲೇಜು ವತಿಯಿಂದ ಜಾನಪದ ನೃತ್ಯ, ಮಳವಳ್ಳಿ ವಿದ್ಯಾವಿಕಾಸ ಶಾಲೆ ವತಿಯಿಂದ ಪುಲ್ವಾಮ ದಾಳಿ, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಜಾನಪದ ಆಧಾರಿತ ಸಮೂಹ ನೃತ್ಯ, ಶ್ರೀರಂಗಪಟ್ಟಣ ತಾಲ್ಲೂಕು ನಗುವಿನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಬಿಂಬಿಸುವ ನೃತ್ಯ, ಮೈಸೂರು ಅದಮ್ಯ ರಂಗ ಶಾಲೆ(ರಿ) ವತಿಯಿಂದ ನಾಟಕ(ಹಾಲೋ ಯಮ) ಕಾರ್ಯಕ್ರಮಗಳು ನಡೆಯಲಿವೆ.

ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ  ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ ರವರು ಶ್ರೀರಂಗ  ವೇದಿಕೆಯ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್ ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss