Thursday, October 16, 2025

Latest Posts

ಶಿವನ ಕೊರಳಲ್ಲಿರುವ ಸರ್ಪ ಯಾರು..? ಯಾಕೆ ಅದು ಶಿವನ ಆಭರಣವಾಯಿತು..?

- Advertisement -

ಎಲ್ಲರಿಗಿಂತ ವಿಭಿನ್ನವಾಗಿರುವ ದೇವರು ಅಂದ್ರೆ ಶಿವ. ಪ್ರಪಂಚವನ್ನ ಸೃಷ್ಟಿಸಿದವನೇ ಶಿವನೆಂಬುವುದು ಹಿಂದೂಗಳ ನಂಬಿಕೆ. ಬೇರೆ ದೇವತೆಗಳಂತೆ ಶಿವ ರಥವೇರುವುದಿಲ್ಲ. ಇವನ ವಾಹನ ನಂದಿ. ಇನ್ನು ಅಸ್ತ್ರಾಸ್ತ್ರಗಳೆಂದರೆ ತ್ರಿಶೂಲ ಒಂದೇ. ತಲೆಯ ಮೇಲಿರುವ ಅರ್ಧ ಚಂದ್ರನೇ ಇವನ ಕಿರೀಟ. ಇವನ ಕೊರಳಲ್ಲಿರುವ ಸರ್ಪವೇ ಇವನಿಗೆ ಆಭರಣ. ಹಾಗಾದ್ರೆ ಈ ಸರ್ಪ ಯಾರು..? ಯಾಕೆ ಈ ಸರ್ಪ ಶಿವನ ಕೊರಳಲ್ಲಿದೆ ಅನ್ನೋ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬನ್ನಿ..

ಶಿವನಲ್ಲಿ ಮೂರು ಶಕ್ತಿ ಅಡಗಿದೆ. ಅದು ರಾಜಸ, ತಾಮಸ ಮತ್ತು ಸಾತ್ವಿಕ. ಆ ಮೂರು ಶಕ್ತಿ ಅಡಗಿರುವ ಅಸ್ತ್ರವೇ ತ್ರಿಶೂಲ. ಈ ಅಸ್ತವನ್ನ ಶಿವ ಸಮಯ ಬಂದಾಗ ಉಪಯೋಗಿಸುತ್ತಾನೆ. ಇನ್ನು ಡಮರು. ಸೃಷ್ಟಿಯ ಉತ್ಪತ್ತಿಗಾಗಿ ಸರಸ್ವತಿ ದೇವಿ ವೀಣೆಯಿಂದ ಸ್ವರ ನುಡಿಸಿದಳು. ಅದನ್ನು ಇನ್ನಷ್ಟು ಚೆಂದಗೊಳಿಸಲು ಶಿವ ಡಮರು ಸೃಷ್ಟಿಸಿದ. ಅದು ಶಿವ ನಾದವಾಯಿತು.

ಇನ್ನು ಶಿವನ ಕೊರಳಲ್ಲಿರುವ ಸರ್ಪ ವಾಸುಕಿ. ಸಮುದ್ರ ಮಂಥನದ ಸಮಯದಲ್ಲಿ ಅಮೃತವನ್ನು ತೆಗೆಯಲು ಸಹಾಯ ಮಾಡಿದವನೇ ವಾಸುಕಿ. ಅಲ್ಲದೇ, ಇದೇ ಸಮಯದಲ್ಲಿ ಶಿವ ವಿಷವನ್ನು ಕುಡಿದು ವಿಷ ಕಂಠನಾಗಿದ್ದಾಗ, ಅವನ ದೇಹ ಸೇರಿದ ವಿಷಯವನ್ನು ತೆಗಿಯಲು ಸಹಾಯ ಮಾಡಿದ್ದು, ಇದೇ ವಾಸುಕಿ. ಹೀಗಾಗಿ ಶಿವ ವಾಸುಕಿಯ ಸಹಾಯಕ್ಕೆ ಮೆಚ್ಚಿ, ಆತನನ್ನು ಸರ್ಪ ಲೋಕದ ರಾಜನನ್ನಾಗಿ ಮಾಡಿದ. ಆಗ ವಾಸುಕಿ, ನನ್ನನ್ನು ನಿಮ್ಮ ಶಿವ ಗಣಗಳಲ್ಲಿ ಒಬ್ಬನನ್ನಾಗಿ ಸ್ವೀಕರಿಸಿ, ನಿಮ್ಮ ಜೊತೆ ಇರಿಸಿಕೊಳ್ಳಿ ಎಂದು ಹೇಳಿದ. ಹಾಗಾಗಿ ಶಿವ ವಾಸುಕಿಯನ್ನು ತನ್ನ ಕೊರಳಲ್ಲಿ ಆಭರಣವನ್ನಾಗಿ ಹಾಕಿಕೊಂಡ.

- Advertisement -

Latest Posts

Don't Miss