Tuesday, October 14, 2025

Latest Posts

ಮುನ್ನೂರು ವರ್ಷಗಳ ಕಾಲದ ಇತಿಹಾಸ ಹೊಂದಿದೆ ತಿರುಪತಿ ಲಡ್ಡು..!

- Advertisement -

ಭಾರತದ ಅತೀ ಶ್ರೀಮಂತ ದೇವಸ್ಥಾನ. ದಕ್ಷಿಣ ಭಾರತದ ಸುಪ್ರಸಿದ್ಧ ದೇವಸ್ಥಾನ ಅಂದ್ರೆ ತಿರುಪತಿ. ಪ್ರತಿದಿನ ಮದುವೆ ಮನೆಯಂತೆ ಜನಜಂಗುಳಿಯಿಂದ ತುಂಬಿರುವ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ, ತಿರುಪತಿಯ ದರ್ಶನ ಭಾಗ್ಯ ಪಡೆಯುತ್ತಾರೆ. ನೀವು ತಿರುಪತಿಗೆ ಹೋಗಿ ಅಲ್ಲಿ ತಿರುಪತಿ ಲಡ್ಡು ಪ್ರಸಾದ ಸೇವಿಸಿ ಬಂದಿಲ್ಲಾ ಅಂದ್ರೆ ತಿರುಪತಿ ಪ್ರವಾಸ ಅಪೂರ್ಣಗೊಂಡಂತೆ. ಹಾಗಾಗಿ ಇಂದು ನಾವು ತಿರುಪತಿ ಪ್ರಸಾದದ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನ ಭಾರತದ ಪುರಾತನ, ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎನ್ನದೇ ಎಲ್ಲ ಜಾತಿ ಧರ್ಮದವರು ಏಳು ಬೆಟ್ಟದ ಅಧಿಪತಿಯ ದರ್ಶನ ಪಡೆಯಲು ಬರುತ್ತಾರೆ.

ಪ್ರಪಂಚದಲ್ಲಿ ಸಿಗುವ ಎಲ್ಲ ಪ್ರಸಾದಕ್ಕಿಂತ, ಸಿಹಿ ಖಾದ್ಯಕ್ಕಿಂತ ತಿರುಪತಿಯಲ್ಲಿ ಸಿಗುವ ಲಡ್ಡು ಪ್ರಸಾದದಷ್ಟು ರುಚಿ ಮತ್ತೊಂದಿಲ್ಲ ಎಂಬ ಮಾತಿದೆ. ಕಡಲೆಹಿಟ್ಟು, ಗೋಡಂಬಿ, ಸಕ್ಕರೆ, ಕಲ್ಲು ಸಕ್ಕರೆ, ದ್ರಾಕ್ಷಿ, ತುಪ್ಪ, ಏಲಕ್ಕಿಯಿಂದ ತಯಾರಾಗುವ ಈ ಪ್ರಸಾದ ವಿಶ್ವದ ಯಾವ ಸಿಹಿ ಖಾದ್ಯದಲ್ಲೂ ಇಲ್ಲದಿರುವಷ್ಟು ಸ್ವಾದವಿರುತ್ತದೆ.

ಈ ತಿರುಪತಿ ಲಾಡುವಿಗೆ ಮುನ್ನೂರು ವರ್ಷಗಳ ಇತಿಹಾಸವಿದೆ. 1516 ಆಗಸ್ಟ್ 2ರಿಂದ ತಿರುಪತಿಯಲ್ಲಿ ಲಾಡು ಪ್ರಸಾದ ವಿತರಿಸಲು ಶುರು ಮಾಡಲಾಯಿತು. ಈ ಪ್ರಸಾದ ನಕಲು ಮಾಡಿ ಬೇರೆಯವರು ಹಂಚಬಾರದೆಂಬ ಕಾರಣಕ್ಕೆ 1999ರಲ್ಲಿ ಪೇಟೆಂಟ್ ತೆಗೆದುಕೊಳ್ಳಲಾಯಿತು.

ಇನ್ನು ತಿರುಪತಿಯಲ್ಲಿ ಪ್ರತಿದಿನ 2ಲಕ್ಷದ 8 ಸಾವಿರ ಲಡ್ಡುಗಳು ತಯಾರಾಗುತ್ತದೆ. ಈ ಲಡ್ಡು ತಯಾರಿಕೆಗೆ 10 ಟನ್‌ಗಳಷ್ಟು ಕಡಲೆ ಹಿಟ್ಟು, 10 ಟನ್ ಸಕ್ಕರೆ, 700 ಕೆಜಿ ಗೋಡಂಬಿ, 150 ಕೆಜಿ ಏಲಕ್ಕಿ, 300ರಿಂದ 500 ಲೀಟರ್ ತುಪ್ಪ, 500 ಕೆಜಿ ಕಲ್ಲುಸಕ್ಕರೆ ಮತ್ತು 540 ಕೆಜಿ ಒಣದ್ರಾಕ್ಷಿ ಬಳಸಲಾಗುತ್ತದೆ.

ಈ ಲಡ್ಡು ಪ್ರಸಾದವನ್ನು ಬೆಳಗ್ಗಿನ ಪೂಜೆ ವೇಳೆ ತಿಮ್ಮಪ್ಪನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಲಡ್ಡು ಪ್ರಸಾದವನ್ನ ಮಾರಾಟ ಕೂಡ ಮಾಡಲಾಗುತ್ತದೆ. ಕೇವಲ ಈ ಪ್ರಸಾದದಿಂದಲೇ ದೇವಸ್ಥಾನಕ್ಕೆ ಕೋಟಿ ಕೋಟಿ ಆದಾಯ ಬರುತ್ತದೆ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

- Advertisement -

Latest Posts

Don't Miss