ಪಾಂಡವರು ಹಲವಾರು ಯುದ್ಧಗಳನ್ನು ಮಾಡಿ, ಅದರಲ್ಲಿ ಗೆದ್ದು ಬರುತ್ತಿದ್ದರು. ಆದರೆ ಕೌರವರು ಯುದ್ಧಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದರು. ಪಾಂಡವರ ಗೆಲುವನ್ನು ನೋಡಿ ಧೃತರಾಷ್ಟ್ರ ಅಸೂಯೆಪಡುತ್ತಿದ್ದ. ಆತನಿಗೆ ತನ್ನ ಮಕ್ಕಳು ಪಾಂಡವರಿಗಿಂತ ಉತ್ತಮರಾಗಿರಬೇಕೆಂಬ ಆಸೆ ಇತ್ತು. ಹಾಗಾಗಿ ಮಕ್ಕಳ ಜೊತೆ ಸೇರಿ ಪಾಂಡವರನ್ನ ಕೊಲೆ ಮಾಡಲು ಸಂಚು ರೂಪಿಸಲಾಯಿತು. ಈ ಸಂಚನ್ನ ಪಾಂಡವರು ಗೆದ್ದು ಬಂದಿದ್ದು ಹೇಗೆ..? ಪಾಂಡವರನ್ನ ಬದುಕಿಸಿದ್ದು ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಪಾಂಡವರ ಸಾವನ್ನ ಬಯಸಿದ್ದ ಕೌರವರು ವಾರಣಾವತವೆಂಬ ಪಟ್ಟಣದಲ್ಲಿ ಸೆಣಬು, ಮಣ್ಣು, ತುಪ್ಪ, ಅರಗು, ಮಣ್ಣಿನ ಪುಡಿ ಸೇರಿಸಿ, ಅರಮನೆ ಕಟ್ಟಲು ಪುರೋಚನನೆಂಬ ಕಪಟಿಗೆ ಹೇಳಿದ್ದರು. ನಂತರ ಪಾಂಡವರು ಆ ಅರಮನೆಯಲ್ಲಿ ಮಲಗಿದ ಬಳಿಕ, ಆ ಅರಮನೆಗೆ ಬೆಂಕಿ ಇಡಬೇಕು. ಇದು ಸ್ವಾಭಾವಿಕ ಸಾವು ಎನ್ನಿಸಬೇಕೆ ವಿನಃ ಕೊಲೆ ಎಂದೆನಿಸಬಾರದು ಎಂದು ಹೇಳಿದರು. ಕೌರವರ ಮಾತಿನಂತೆ ಅರಗಿನ ಮನೆ ಸಿದ್ಧವಾಯಿತು.
ಪಾಂಡವರನ್ನ ಪುಸಲಾಯಿಸಿದ ಕೌರವರು, ಅವರು ವಾರಣಾವತವೆಂಬ ನಗರಕ್ಕೆ ಕಳುಹಿಸಲು ಮುಂದಾದರು. ಧೃತರಾಷ್ಟ್ರ ಯುಧಿಷ್ಠಿರನ ಮನವೊಲಿಸಿ ವಾರಣಾವತದಲ್ಲಿ ಉತ್ಸವವಿದೆ. ಅಂಥ ಸುಂದರ ಪಟ್ಟಣಕ್ಕೆ ನೀವೋಮ್ಮೆ ಹೋಗಿ ಬನ್ನಿ ಎಂದು ಹೇಳಿ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಲು ಮುಂದಾದನು. ಅದು ಕಪಟ ಎಂಬುದು ಯುಧಿಷ್ಠಿರನಿಗೆ ಮನದಟ್ಟಾಯಿತು. ಆದರೂ ಕೂಡ ವಾರಣಾವತಕ್ಕೆ ಹೋಗಲು ಯುಧಿಷ್ಠಿರ ಒಪ್ಪಿಕೊಂಡ. ಕುಂತಿಯ ಜೊತೆ ಸೇರಿ ಪಾಂಡವರು ಹೊರಟರು.
ಆದರೆ ಈ ಬಗ್ಗೆ ತಿಳಿದಿದ್ದ ವಿಧುರ, ಯುಧಿಷ್ಠಿರನಿಗೆ ಅರಮನೆಯಲ್ಲಿ ಒಂದು ಸುರಂಗ ಇರುವುದಾಗಿಯೂ, ಪಾಂಡವರನ್ನು, ಕುಂತಿಯನ್ನು ರಕ್ಷಿಸುವ ಹೊಣೆ ನಿನ್ನದಾಗಿಯೂ ಒಗಟಿನ ರೂಪದಲ್ಲಿ ಹೇಳುತ್ತಾನೆ. ಇದನ್ನರಿತ ಯುಧಿಷ್ಠಿರ ವಿಧುರನಿಗೆ ಧನ್ಯವಾದ ತಿಳಿಸುತ್ತಾನೆ. ವಾರಣಾವತಕ್ಕೆ ಪಾಂಡವರು ಬರುತ್ತಾರೆ. ಅರಮನೆ ನೋಡಿ ಖುಷಿ ಪಡುತ್ತಾರೆ. ಅಲ್ಲಿ ಭಕ್ಷ್ಯಭೋಜನ, ಮನೋರಂಜನೆಯನ್ನ ಏರ್ಪಡಿಸಲಾಗಿರುತ್ತದೆ. ಭೀಮ, ಅರ್ಜುನ, ನಕುಲ- ಸಹದೇವ ಭೋಜನ ಉಂಡು ಮನೋರಂಜನೆ ಪಡೆದು ಖುಷಿಯಾಗಿರುತ್ತಾರೆ. ಮಕ್ಕಳ ಖುಷಿ ನೋಡುತ್ತ ಕುಂತಿ ತಾನು ಖುಷಿಯಾಗಿರುತ್ತಾಳೆ.
ನಂತರ ಅರಗಿನ ಮನೆಯಲ್ಲಿ ಮಲಗಲು ವ್ಯವಸ್ಥೆ ಮಾಡಲಾಗುತ್ತದೆ. ಆಗ ಯುಧಿಷ್ಠಿರ ಎಲ್ಲರಿಗೂ ಕೌರವರು ತಮ್ಮನ್ನು ಕೊಲ್ಲಲು ಸಂಚು ಮಾಡಿರುವ ಬಗ್ಗೆ ಹೇಳುತ್ತಾರೆ. ಆಗ ಪಾಂಡವರು ಅರಮನೆ ಸುಡುವುದಕ್ಕೂ ಮುನ್ನವೇ ಸುರಂಗದಿಂದ ಹಾದು ಬೇರೆ ಊರಿಗೆ ತೆರಳುತ್ತಾರೆ. ಇತ್ತ ದುಷ್ಠರು ಅರಮನೆ ಸುಟ್ಟು, ಕೌರವರ ಬಳಿ ಪಾಂಡವರ ಅಂತ್ಯವಾಯಿತೆಂದು ಹೇಳುತ್ತಾರೆ. ಆದರೆ ಆ ಅರಮನೆ ನಿರ್ಮಿಸಿದ ಪುರೋಚನನು ತಾನು ಮಾಡಿದ ತಪ್ಪಿಗೆ, ಆ ಅರಮನೆಯಲ್ಲೇ ಸಿಕ್ಕಿಹಾಕಿಕೊಂಡು ಪ್ರಾಣ ಬಿಟ್ಟನು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




