Thursday, December 12, 2024

Latest Posts

‘ದೊಡ್ಮನೆ’ ಬಿಗ್ ನ್ಯೂಸ್: ಬಿಗ್ ಬಾಸ್ ಸೀಸನ್-8ರ ಕಿಚ್ಚ ಸುದೀಪ್ ಕೊಟ್ರು ಗುಡ್ ನ್ಯೂಸ್..!

- Advertisement -

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಅಂತಾನೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ಸೀಸನ್-8 ಆಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.  ಚೀನಿ ವೈರಸ್ ಕೊರೋನಾ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಸೀಸನ್-8 ಶುರುವಾಗ್ತಿತ್ತು, ಬಟ್ ಕೊರೋನಾ ಇರೋದ್ರಿಂದ ಲೇಟ್ ಆದ್ರು ಲೇಟೆಸ್ಟಾಗಿ ದೊಡ್ಮನೆ ಆಟ ಶುರುವಾಗ್ತಿದೆ.

ಕೊರೋನಾ ನಡುವೆಯೇ ತೆಲುಗು, ತಮಿಳು ಬಿಗ್ ಬಾಸ್ ಶೋ ಈಗಾಗ್ಲೇ ಕಂಪ್ಲೀಟ್ ಆಗಿದ್ದ,ಇನ್ನೇನು ಹಿಂದಿಯಲ್ಲಿ ಕೊನೆಯ ಹಂತ ಅಂದ್ರೆ ಮುಗಿಯೋದಿಕ್ಕೆ ಬಂದಿದೆ. ಹೀಗಾಗಿ ಈ ಬಾರಿ ಕನ್ನಡ ಬಿಗ್ ಬಾಸ್ ಇರೋದಿಲ್ವೇನೋ ಅಂದುಕೊಂಡು ಸಣ್ಣಪರದೆಯ ಪ್ರೇಕ್ಷಕರಿಗೆ ಕಿಚ್ಚ ಸಖತ್ ನ್ಯೂಸ್ ಕೊಟ್ಟಿದ್ದಾರೆ.

ಕಿಚ್ಚ ಸುದೀಪ್ ಸಾರಥ್ಯದಲ್ಲಿ ಸೀಸನ್-8 ಆರಂಭವಾಗ್ತಿದ್ದು, ಸದ್ಯ ಬಿಗ್ ಬಾಗ್ ಸೀಸನ್-8ರ ಪ್ರೋಮೋ ಶೂಟ್ ನಡೆಯುತ್ತಿದೆ. ಈ  ಬಗ್ಗೆ ಕಿಚ್ಚ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅತಿ ಶೀಘ್ರದಲ್ಲಿಯೇ ಬಿಗ್ ಬಾಸ್ ಸಣ್ಣಪರದೆಯಲ್ಲಿ ಶುರುವಾಗುವ ಹಿಂಟ್ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಶೋ ಆರಂಭವಾಗಲಿದೆ ಎನ್ನಲಾಗ್ತಿದೆ.

- Advertisement -

Latest Posts

Don't Miss