ಹಾಸನ: ಅರಸೀಕೆರೆ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡಿರುವ ತಮ್ಮ ಜಮೀನಿಗೆ ಬೇಡಿಕೆಯಷ್ಟು ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಅರಸೀಕೆರೆ ತಾಲೂಕಿನ ಕರಗುಂದ, ಒಡೆರಹಳ್ಳಿ, ಬ್ಯಾಲದ ಕೆರೆ, ತಿಮ್ಮಪ್ಪನ ಹಳ್ಳಿ, ಮಾದಾಪುರ, ಕಲ್ಯಾಡಿ, ಗೆರುಮಾರ ಸೇರಿದಂತೆ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಕಳೆದ ಒಂದು ವಾರದಿಂದ ಎತ್ತಿನ ಹೊಳೆ ಯೋಜನೆ ಸ್ಥಳದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಕಳೆದ 7 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕೆ ಬಾರದ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವಾ ಭೂ ಸಂತ್ರಸ್ಥರು ಕಾಮಗಾರಿ ಸ್ಥಳದಲ್ಲೇ ಶಾಮಿಯಾನ ಹಾಕಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದ್ದಾರೆ.
ಕರ್ನಾಟಕ ಟಿವಿ ಡಿಸೆಂಬರ್ ಸಮೀಕ್ಷೆ | ದಾವಣಗೆರೆಯ 7 ಕ್ಷೇತ್ರಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4 ಸ್ಥಾನಗಳಲ್ಲಿ ಮುನ್ನಡೆ
ಈ ಸಂದರ್ಭದಲ್ಲಿ ಎತ್ತಿನ ಹೊಳೆ ಯೋಜನೆಗೆ ಭೂಮಿ ಕಳೆದು ಕೊಂಡಿರುವ ಸಂತ್ರಸ್ತ ಮಹಿಳೆ ಶಶಿಕಲಾ ಮಾತನಾಡಿ, ತಮ್ಮ 7 ಜನರನ್ನು ಹೊಂದಿರುವ ಕುಟುಂಬದ ಎರಡು ವರೆ ಎಕರೆ ಜಮೀನು ಸಂಪೂರ್ಣ ಎತ್ತಿನ ಹೊಳೆ ಯೋಜನೆಗೆ ಸ್ವಾಧೀನ ಪಡಿಸಿ ಕೊಳ್ಳಲಾಗಿದೆ ಈ ಜಾಗದಲ್ಲಿ ಕೊಳವೆ ಬಾವಿ, ಸೇರಿದಂತೆ ನೂರಾರು ತೆಂಗಿನ ಗಿಡಗಳನ್ನು ಹೊಂದಿದೆ ಇಷ್ಟೆಲ್ಲಾ ಸೌಕರ್ಯ ಹೊಂದಿರುವ ಕೃಷಿ ಭೂಮಿ ಇದಾಗಿದ್ದು ಸುಮಾರು 40 ಲಕ್ಷ ಬೆಲೆ ಬಾಳುವ ಜಮೀನಿಗೆ ಸರಕಾರ ಕೇವಲ 7 ಲಕ್ಷ ಪರಿಹಾರ ನೀಡುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಒಂದೇ ತಾಲೂಕಿನಲ್ಲಿ ವಿವಿಧ ಕೃಷಿ ಭೂಮಿ ಪ್ರದೇಶಗಳಲ್ಲಿ ನಾನಾ ರೀತಿಯ ಬೆಲೆ ನಿಗದಿ ಮಾಡಿದ್ದು ಭೂ ಸಂತ್ರಸ್ಥರಿಗೆ ನೋವುಂಟು ಮಾಡಿದೆ, ತಾಲೂಕಿನಾದ್ಯಂತ ಏಕರೂಪದ ಬೆಳೆ ಬೆಳೆಯುವ ಪ್ರದೇಶಕ್ಕೆ ಸರಕಾರ ಪರಿಹಾರದಲ್ಲಿ ತಾರತಮ್ಯ ಮಾಡಿರುವುದು ಖಂಡನೀಯ ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಿ ತಮಗೆ ಸೂಕ್ತ ಪರಿಹಾರ ನೀಡಿದಲ್ಲಿ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ ಇಲ್ಲವೇ ಪರಿಹಾರದ ಬದಲಾಗಿ ಬೇರೆಡೆ ಭೂಮಿ ನೀಡಲಿ ಎಂದು ಪಟ್ಟು ಹಿಡಿದರು.
” ಕರಾವಳಿ ದರ್ಶನ ಜಸ್ಟ್ 300 ರೂಪಾಯಿ” ಪ್ರವಾಸ ಅನುಭವ – ಸಂಗಮೇಶ್ ಮೆಣಸಿನಕಾಯಿ
ಗ್ರಾಮದ ಬಸವರಾಜ್ ಮಾದಾಪುರ ಮಾತನಾಡಿ, ಗ್ರಾಮದಲ್ಲಿನ ಅಲ್ಪ ಸ್ವಲ್ಪ ಕೃಷಿ ಜಾಮೀನು ಹೊಂದಿರುವ ಭೂ ಮಾಲೀಕರು ಎತ್ತಿನ ಹೊಳೆ ಯೋಜನೆಗೆ ಭೂಮಿ ಕಳೆದುಕೊಂಡು ಕಂಗಾಲಾಗಿರುವುದು ಒಂದು ಕಡೆಯಾದರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಸರಿಯಾದ ಪರಿಹಾರ ನೀಡದೆ ವಂಚಿಸುತ್ತಿದೆ ಎಂದು ದೂರಿದರು.
ಜಮೀನಿನ ನಡುವೆಯೇ ಎತ್ತಿನ ಹೊಳೆ ಯೋಜನೆ ಹಾದು ಹೋಗಿದ್ದು ಉಳಿದಿರುವ ಅಲ್ಪ ಸ್ವಲ್ಪ ಜಮೀನು ಕೃಷಿ ಮಾಡಲು ಯೋಗ್ಯವಾಗಿಲ್ಲ ಅಲ್ಲದೆ ಕಾಮಗಾರಿಯಿಂದ ಫಲವತ್ತಾದ ಕೃಷಿ ಭೂಮಿಯ ಮೇಲೆ ಕಲ್ಲು ಗಳು ಬಿದ್ದಿದ್ದು ಕೃಷಿ ಮಾಡಲು ಆಗದೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮಂಜುನಾಥ್ ವಡೆರಹಳ್ಳಿ, ಶೇಖರ್ ಮಾದಾಪುರ, , ಪ್ರಕಾಶ್ ಜೇನುಕಲ್ಲು. ಮಧು ವಡೆರಹಳ್ಳಿ, ನಿಂಗಪ್ಪ, ಶೇಖರ್, ಯಶೋಧಮ್ಮ, ಶಶಿಕಲಾ, ಬಸವರಾಜು, ಮಲ್ಲಿಕ್, ಜಯಣ್ಣ, ಸುಂದರ, ಸಿದ್ದಣ್ಣ, ರಘು, ವಿಜಯ್,ಕುಪ್ಪಯ್ಯ ಮಲ್ಲೇಶ್ ಸೇರಿದಂತೆ ಹತ್ತಾರು ಹಳ್ಳಿಗಳ ಭೂ ಸಂತ್ರಸ್ಥರು ಇದ್ದರು.