District news:ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಬಂಗಾಳಿಕ್ಯಾಂಪ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ನಿಂದ ಗ್ರಾಮದಲ್ಲಿ ಕೋಮು ಗಲಭೆ ಶುರುವಾಗಿದೆ. ಬಂಗಾಳಿಕ್ಯಾಂಪನ ಯುವತಿಯೊಬ್ಬಳು ಅಲ್ಲಾಃನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾಳೆ ಎಂದು ಸಿಂದನೂರು ಪಟ್ಟಣದ ಕೆಲವು ಹುಡುಗರು ಬಂದು ಬಂಗಾಳಿ ಕ್ಯಾಂಪ್ ನಲ್ಲಿ ಗಲಾಟೆ ಮಾಡಿದ್ದಾರೆ
ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಸ್ಟ್ ನಿಂದಾಗಿ ಕೋಪಗೊಂಡ ಮುಸ್ಲಿಂ ಸಮುದಾಯದ ಯುವಕರು 50-60 ಜನರು ಸಿಂದನೂರಿನಿಂದ ಬಂದು ಗಲಾಟೆ ಮಾಡಿದ್ದಾರೆ ನಂತರ ಮಾತುಕತೆ ತಾರಕಕ್ಕೇರಿ ಕೈ ಕೈ ಮಿಲಾಯಿಸಿದ್ದಾರೆ. ಘಟನೆ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿ ಜಗಳನನ್ನು ನಿಲ್ಲಿಸಿದ್ದಾರೆ. ಹಿಂದೂ ದೇವಾಲಯವನ್ನು ಅಕ್ರಮವಾಗಿ ಪ್ರವೇಶ ಮಾಡಲು ಬಂದಿದ್ದರೆಂದು ಆರೋಪ ಮಾಡಿದ್ದಾರೆ.
ಮಾತಕಾಸ್ತ್ರಗಳಿಂದ ಬಂದಿದ್ದ ಸಿಂದನೂರಿನ ಮುಸ್ಲಿಂ ಯುವಕರನ್ನು ಪೋಲಿಸರು ಬಂದಿಸಿದ್ದಾರೆ. ಹಾಗೂ ಸದ್ಯ ಕ್ಯಾಂಪಿನಲ್ಲಿ ಉದ್ವಿಗ್ನ ಪರಿಸ್ತಿತಿ ನಿರ್ಮಾಣವಾಗಿದ್ದು ಪೋಲಿಸ್ ಬಿಗಿ ಬಂದೊಬಸ್ತ್ ಮಾಡಲಾಗಿದೆ.
ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು




