Political News : ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಮುಂದಿನ ವರ್ಷ ನಡೆಯೋ ಲೋಕಸಭಾ ಚುನಾವಣೆಗೆ ಈಗಾಗ್ಲೇ ಎಲ್ಲಾ ಪಕ್ಷಗಳು ತಯಾರಿ ನಡೆಸ್ತಿವೆ. ಮೈತ್ರಿ ಮಾತುಕತೆ ಎನ್ ಡಿಎ ಹಾಗೂ ಕಾಂಗ್ರೆಸ್ ಮಿತ್ರಪಕ್ಷಗಳಲ್ಲಿ ಜೋರಾಗಿ ನಡೀತಿದೆ.
ರಾಜ್ಯದಲ್ಲಿಯೂ ಸಹ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ರೆಡಿ ಆಗ್ತಿವೆ. ಈಗಷ್ಟೇ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದ್ದು, ಲೋಕಸಭೆಯಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸೋ ಉತ್ಸಾಹದಲ್ಲಿದೆ. ಆದ್ರೆ, ಬಿಜೆಪಿ ಒಡೆದ ಮನೆಯಂತಾಗಿದೆ. ಹಾಗಾಗಿ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಯಾಗೋ ಸಾಧ್ಯತೆ ಇದೆ. ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಜೆಡಿಎಸ್ ವಿಲೀನದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ, ವೀಲಿನಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಬಹುಶಃ ಬಿಜೆಪಿ ಜೊತೆ ಮೈತ್ರಿಗೆ ಒಪ್ಪಬಹುದು ಎನ್ನಲಾಗಿದೆ. ಜುಲೈ 18ರ ಎನ್ ಡಿಎ ಸಭೆಗೆ ಕುಮಾರಸ್ವಾಮಿ ಅಥವಾ ದೇವೇಗೌಡರು ಭಾಗಿ ಆಗಬಹುದು ಎನ್ನಲಾಗಿದೆ. ಆದ್ರೆ, ಇದುವರೆಗೆ ಇದು ಅಧಿಕೃತವಾಗಿಲ್ಲ..
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ. 25 ಸಂಸದರನ್ನ ಹೊಂದಿರೋ ಬಿಜೆಪಿಯಿಂದ ಜೆಡಿಎಸ್ 6-7 ಕ್ಷೇತ್ರಗಳನ್ನ ಕೇಳ್ತಿದೆ ಎನ್ನಲಾಗಿದ್ದು, ಇದೇ ವಿಚಾರವಾಗಿ ಮೈತ್ರಿ ಇನ್ನೂ ಫೈನಲ್ ಆಗಿಲ್ಲ ಎನ್ನಲಾಗಿದೆ.
ಬಿಜೆಪಿ ಕಟ್ಟಿಹಾಕಲು ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ. ಇದರ ಮಧ್ಯೆ ಬಿಜೆಪಿ ಸಹ ತನ್ನ ಬಲ ಹೆಚ್ಚಿಸಿಕೊಳ್ಳಲು ಜುಲೈ 18ರಂದು ಸಭೆ ನಡೆಸುತ್ತಿದೆ. ಎನ್‌ಡಿಎ ಮೈತ್ರಿಕೂಟವನ್ನ ಮತ್ತೆ ಬಲಪಡಿಸಿ ಅಧಿಕಾರದ ಗದ್ದುಗೆ ಉಳಿಸಿಕೊಳ್ಳೋ ಪ್ರಯತ್ನಕ್ಕೆ ಮುಂದಾಗಿದೆ. ಈ ಪೈಕಿ ಜೆಡಿಎಸ್‌ಗೂ ಗಾಳ ಹಾಕಿದೆ. ಹೆಚ್‌ಡಿ ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ನಾಳಿನ ಸಭೆಗೆ ಹಾಜರಾಗ್ತಾರಾ.? ಇಲ್ವಾ ಅನ್ನೋ ಕುತೂಹಲ ಮನೆ ಮಾಡಿದೆ.
ಈಗಾಗಲೇ ಮಹಾರಾಷ್ಟ್ರದ ಶಿವಸೇನೆಯ ಏಕನಾಥ್ ಶಿಂಧೆ ಬಣ, ಎನ್‌ಸಿಪಿಯ ಅಜಿತ್ ಪವಾರ್ ಬಣ ಎನ್‌ಡಿಎ ಕಡೆ ವಾಲಿದ್ದಾರೆ. ಹಳೇ ಮಿತ್ರಪಕ್ಷಗಳಾದ ಶಿರೋಮಣಿ ಅಖಾಲಿದಳ, ತೆಲುಗುದೇಶಂ ಪಾರ್ಟಿಗೂ ನಡ್ಡಾ ಆಹ್ವಾನ ಹೋಗಿದೆ. ಇನ್ನು, ಹೊಸ ಪಕ್ಷ ಪವನ್ ಕಲ್ಯಾಣ್‌ರ ಜನಸೇನಾ ಕೂಡಾ ಎನ್‌ಡಿಎ ಜತೆ ಗುರುತಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಆದ್ರೆ, ಜೆಡಿಎಸ್ ನಾಯಕ ಕುಮಾರಸ್ವಾಮಿ ಈವರೆಗೆ ತಮ್ಮ ನಡೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.. ಆದ್ರೆ, ಬಿಜೆಪಿ ನಾಯಕರು ಸಣ್ಣ ಸುಳಿವು ಕೊಟ್ಟಿದ್ದಾರೆ.
ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ
ಜುಲೈ 21 ರಂದು ಬಿಡುಗಡೆಯಾಗಲಿದೆ ಶ್ರೇಯಸ್ ಚಿಂಗಾ ನಟಿಸಿ, ನಿರ್ದೇಶಿಸಿರುವ “ಡೇವಿಡ್”
‘ಒಂದು ರಾಷ್ಟ್ರೀಯ ಪಕ್ಷ ತಮ್ಮ ನಾಯಕನನ್ನು ಆಯ್ಕೆ ಮಾಡದೇ ಇರೋದು ವಿಪರ್ಯಾಸ’