ಗಬ್ಬೂರಿನ ಹೆದ್ದಾರಿಯಲ್ಲಿ ತೀವ್ರಗೊಂಡ ಹೋರಾಟ: ಪಂಚಮಸಾಲಿ ಗುಡುಗಿದರೇ ವಿಧಾನಸೌಧ ನಡುಗುವುದು

Hubballi News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಹೋರಾಟ ಸಾಕಷ್ಟು ರಂಗೇರುತ್ತಿದ್ದು, ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಪಾದಯಾತ್ರೆ ಮೂಲಕ ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸಿದ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ನಡೆಸುತ್ತಿದ್ದಾರೆ.

ಚೆನ್ನಮ್ಮ ವೃತ್ತದಿಂದ ಆರಂಭಗೊಂಡಿರುವ ಹೋರಾಟ, ಪಾದಯಾತ್ರೆ ಮೂಲಕ ಹುಬ್ಬಳ್ಳಿಯ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ತಲುಪಿದ್ದು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪಂಚಮಸಾಲಿ ಗುಡುಗಿದರೇ ವಿಧಾನಸೌಧ ನಡುಗುವುದು ಎಂದು ಘೋಷಣೆ ಕೂಗುವ ಮೂಲಕ ಎಚ್ಚರಿಕೆ ನೀಡಿದರು.

ಇನ್ನೂ ಪಾದಯಾತ್ರೆ ಮೂಲಕ ಗಬ್ಬೂರಿನ ರಾಷ್ಟ್ರೀಯ ಹೆದ್ದಾರಿ ತಲುಪಿದ ಪಂಚಮಸಾಲಿ ಸಮಾಜದ ಕಾರ್ಯಕರ್ತರಿಗೆ ರಸ್ತೆ ತಡೆದು ಹೋರಾಟ ಮಾಡುವಂತೆ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು. ಈ ನಿಟ್ಟಿನಲ್ಲಿ ಎರಡು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

‘ಕೇರಳ ಮಾಟ ಮಂತ್ರ ಮಾಡಿಸಿದ್ದರು: ಅದರಿಂದಲೇ‌ JDS ಅಸೆಂಬ್ಲಿ ಚುನಾವಣೆ ಸೋತಿದ್ದು’

Income Tax : ಐಟಿ ದಾಳಿ : 40 ಕೋಟಿಗೂ ಅಧಿಕ ಹಣ ಲಭ್ಯ…!

‘ನಾವು ಮೈತ್ರಿ ಯಾರ ಜೊತೆಗಾದ್ರು ಮಾಡಿಕೊಳ್ತೀವಿ ಇವರಿಗೇನು..?’

About The Author