Sunday, September 8, 2024

Latest Posts

ತಪ್ಪು ತಪ್ಪೇ.. ಚೀನಾಗೆ ಅಮೆರಿಕಾ ಎಚ್ಚರಿಕೆ..!

- Advertisement -

ಕರ್ನಾಟಕ ಟಿವಿ : ಅಮೆರಿಕಾ ಅಧ್ಯಕ್ಷ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.. ಕೊರೊನಾ ವೈರಸ್ ಸಂಬಂಧ ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.. ವೈರಸ್ ಹುಟ್ಟಿನ ಬಗ್ಗೆ ಚೀನಾ ಹೇಳಿರುವ ಮಾಹಿತಿ ಸುಳ್ಳು. ವುಹಾನ್ ನಲ್ಲಿ ಬಾವಲಿ ಮಾರಾಟ ಮಾಡೋದೆ ಇಲ್ಲ. ಆ ಪ್ರದೇಶದಲ್ಲಿ ಬಾವಲಿಗಳೆ ಇಲ್ಲ. ವುಹಾನ್ ನಿಂದ 100 ಕಿಲೋ ಮೀಟರ್ ದೂರದಲ್ಲಿ ಬಾವಲಿಗಳು ಸಿಗುತ್ತವೆ.. ಸಾವಿನ ಸಂಖ್ಯೆ, ಸೋಂಕಿತರ ಸಂಖ್ಯೆಯಲ್ಲೂ ಚೀನಾ ಸುಳ್ಳು ಹೇಳ್ತಿದೆ. ಒಂದೂವರೆ ತಿಂಗಳ ನಂತರ ಸಾವಿನ ಸಂಖ್ಯೆಯನ್ನ ದಿಢೀರ್ ಏರಿಕೆ ಮಾಡಿದೆ.. ಅಮೆರಿಕಾಗಿಂತಲೂ ಚೀನಾದಲ್ಲಿ ಹೆಚ್ಚು ಸಾವು ನೋವು ಸಂಭವಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.. ಕೊರೊನಾ ವೈರಸ್ ಚೀನಾ ಕುತಂತ್ರವೇ ಆಗಿದ್ದರೆ ಅದಕ್ಕೆ ಚೀನಾ ತಕ್ಕ ಬೆಲೆ ತೆರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ..

- Advertisement -

Latest Posts

Don't Miss