Wednesday, June 18, 2025

Latest Posts

International News: ಭಾರತಕ್ಕೆ ಮಸ್ಕ್ ನೇತೃತ್ವದ ಸ್ಟಾರ್​ಲಿಂಕ್ ಸ್ಯಾಟ್​ಲೈಟ್ ಎಂಟ್ರಿ

- Advertisement -

International News: ಅಮೆರಿಕದ ಖ್ಯಾತ ಉದ್ಯಮಿ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ನೀಡಲು ಅಧಿಕೃತವಾಗಿ ಪರವಾನಗಿ ಪಡೆದಿದೆ. ಭಾರತದಲ್ಲಿ ತ್ವರಿತ ವೇಗದ ಇಂಟರ್‌ನೆಟ್‌ ನೀಡುವ ಯೋಜನೆ ಇದಾಗಿದ್ದು, ಸ್ಯಾಟ್‌ಕಾಮ್ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ.

ಮೂರು ವರ್ಷಗಳ ಬಳಿಕ ಸ್ಟಾರ್​​ ಲಿಂಕ್​ಗೆ ಭಾರತದಲ್ಲಿ ಪರವಾನಗಿ..

ಇದಕ್ಕೂ ಮುನ್ನ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮತ್ತು ಭಾರ್ತಿ ಏರ್‌ಟೆಲ್ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಸ್ಯಾಟ್‌ಕಾಮ್ ಪರವಾನಗಿ ಪಡೆದಿದ್ದವು. ಈ ಪಟ್ಟಿಗೆ ಸ್ಟಾರ್‌ಲಿಂಕ್ ಕಂಪನಿ ಕೂಡ ಒಳಗೊಂಡಿದೆ. ಮೂರು ವರ್ಷಗಳ ಬಳಿಕ ಟೆಲಿಕಾಂ ಇಲಾಖೆ ಅಂತಿಮವಾಗಿ ಸ್ಟಾರ್‌ಲಿಂಕ್‌ ಕಂಪನಿಗೆ ಭಾರತದಲ್ಲಿ ತನ್ನ ಸ್ಯಾಟ್‌ಕಾಮ್ ಸೇವೆಯನ್ನು ಪ್ರಾರಂಭಿಸಲು ಗ್ಲೋಬಲ್ ಮೊಬೈಲ್ ಪರ್ಸನಲ್ ಕಮ್ಯುನಿಕೇಷನ್ ಬೈ ಸ್ಯಾಟಲೈಟ್ ಜಿಎಮ್​ಪಿಸಿಎಸ್ ಪರವಾನಗಿಯನ್ನು ನೀಡಿದೆ.

ಮುಂದಿನ ಎರಡು ವಾರಗಳಲ್ಲಿ ಪ್ರಾಯೋಗಿಕ ಸ್ಪೆಕ್ಟ್ರಮ್ ಪಡೆಯುವ ನಿರೀಕ್ಷೆಯಿದೆ ಎಂದು ಟೆಲಿಕಾಂ ಮಾಹಿತಿ ನೀಡಿದೆ. ಅಲ್ಲದೆ ಈ ಪರವಾನಗಿಯೊಂದಿಗೆ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿರುವುದಾಗಿವುದನ್ನು ಅದು ಖಚಿತ ಪಡಿಸಿದೆ.

ಕೇಂದ್ರ ಸರ್ಕಾರಕ್ಕೆ ಬೇಕಾಗಿರುವ ದಾಖಲೆಗಳ ಒದಗಿಸೋಕೆ ಕಂಪನಿ ಸಿದ್ಧ..!

ಇನ್ನೂ ಭಾರತೀಯ ಬಾಹ್ಯಾಕಾಶ ನಿಯಂತ್ರಕ ಸಂಸ್ಥೆಯಾದ ಇನ್-ಸ್ಪೇಸ್‌ನಿಂದ ತನ್ನ ಉಪಗ್ರಹಗಳನ್ನು ನಿರ್ವಹಿಸಲು ಸ್ಟಾರ್‌ಲಿಂಕ್‌ಗೆ ಅಂತಿಮ ಅನುಮತಿ ಮಾತ್ರ ಬಾಗಿ ಇದೆ. ಕಂಪನಿಯು ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಇದೊಂದು ನಿರ್ಣಾಯಕ ಹೆಜ್ಜೆಯಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಕೇಂದ್ರ ಸರ್ಕಾರಕ್ಕೆ ಬೇಕಾಗಿರುವ ಅಗತ್ಯ ಭದ್ರತಾ ದಾಖಲೆಗಳನ್ನು ಶೀಘ್ರದಲ್ಲೇ ಒದಗಿಸಲಿದೆ. ಇನ್-ಸ್ಪೇಸ್‌ನಿಂದ ಅನುಮೋದನೆ ಪಡೆದ ನಂತರ, ಸ್ಟಾರ್‌ಲಿಂಕ್ ತಾತ್ಕಾಲಿಕ ಸ್ಪೆಕ್ಟ್ರಮ್ ಹಂಚಿಕೆ ಪಡೆಯುವ ನಿರೀಕ್ಷೆಯಿದೆ.

ದೂರ ಸಂಪರ್ಕ ಇಲಾಖೆಯ ಷರತ್ತು ಒಪ್ಪಿಗೆ, ಶುಲ್ಕ ಪಾವತಿಗೆ ಕಂಪನಿಯ ಸಮ್ಮತಿ..

ಆಲ್ಲದೆ ಸ್ಪೇಸ್‌ಎಕ್ಸ್ ನಿರ್ವಹಿಸುವ ಸ್ಟಾರ್‌ಲಿಂಕ್ ಕಂಪನಿಯು ಕಳೆದ 3-4 ವರ್ಷಗಳಿಂದ ಭಾರತದಲ್ಲಿ ತನ್ನ ಉಪಗ್ರಹ ಸೇವೆ ಪ್ರಾರಂಭಿಸಲು ಪ್ರಯತ್ನ ನಡೆಸುತ್ತಿತ್ತು. ಆದರೆ, ಕೆಲವು ಅಡೆತಡೆಗಳಿಂದಾಗಿ ಅದು ತನ್ನ ಪ್ರಯತ್ನವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಈಗ ಅಂತಿಮವಾಗಿ ಪರವಾನಗಿ ಪಡೆದಿದ್ದು, ದೂರಸಂಪರ್ಕ ಇಲಾಖೆ ವಿಧಿಸಿರುವ ಹೊಸ ಷರತ್ತುಗಳನ್ನು ಸ್ವೀಕರಿಸಲು ಮತ್ತು ಕಾನೂನಿನ ಪ್ರಕಾರ ಶುಲ್ಕವನ್ನು ಪಾವತಿಸಲು ಕಂಪನಿ ಒಪ್ಪಿಗೆ ಸೂಚಿಸಿದೆ.

ಉಪಗ್ರಹ ಸಂವಹನಕ್ಕೆ ಭದ್ರತಾ ಮಾನದಂಡಗಳಿಗೆ ಒಪ್ಪಿಗೆ..

ಕಳೆದ ತಿಂಗಳು, ಮಸ್ಕ್ ಅವರ ಉಪಗ್ರಹ ಇಂಟರ್ನೆಟ್ ಸೇವೆಯು ಟೆಲಿಕಾಂ ಇಲಾಖೆಯಿಂದ ಲೆಟರ್ ಆಫ್ ಇಂಟೆಂಟ್ ಎಲ್​ಒಟಿಯನ್ನು ಪಡೆದುಕೊಂಡಿದ್ದು, ಉಪಗ್ರಹ ಸಂವಹನಕ್ಕಾಗಿ ಭದ್ರತಾ ಮಾನದಂಡಗಳಿಗೆ ಒಪ್ಪಿಗೆ ಕೂಡ ನೀಡಿದೆ. ಅಲ್ಲದೆ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಮತ್ತು ಯುಟೆಲ್‌ಸ್ಯಾಟ್ ಒನ್‌ವೆಬ್ ಎರಡೂ ತಮ್ಮ ಪರವಾನಗಿಗಳನ್ನು ಬಹಳ ಹಿಂದೆಯೇ ಪಡೆದಿವೆ. ಆದರೆ ಅವು ಇನ್ನೂ ರೇಡಿಯೋ ತರಂಗ ಆವರ್ತನಗಳ ಹಂಚಿಕೆಗಾಗಿ ಕಾಯುತ್ತಿವೆ. ಕಾರಣ ಟ್ರಾಯ್​ನ ಶಿಫಾರಸುಗಳನ್ನು ಇಲಾಖೆಯು ಇನ್ನೂ ಅನುಮೋದಿಸದ ಕಾರಣ ಸ್ಯಾಟ್‌ಕಾಮ್ ಸ್ಪೆಕ್ಟ್ರಮ್ ಹಂಚಿಕೆಗಾಗಿ ನಿರೀಕ್ಷಿಲಾಗಿದೆ. ಇದು ಉಪಗ್ರಹ ಸಂವಹನ ಪೂರೈಕೆದಾರರಿಗೆ ಸ್ಪೆಕ್ಟ್ರಮ್ ಹಂಚಿಕೆ ಮತ್ತು ಸ್ಪೆಕ್ಟ್ರಮ್ ಬಳಕೆಯ ಮೇಲೆ ಶೇ.4ರಷ್ಟು ಎಜಿಆರ್​ ವಿಧಿಸುವ ಪ್ರಸ್ತಾಪವನ್ನು ಒಳಗೊಂಡಿದೆ.

- Advertisement -

Latest Posts

Don't Miss