International News: ತನ್ನ ದೇಶದ ಅಂತರಿಕ ವಿಚಾರಗಳ ಹೊರತುಪಡಿಸಿ ಇತರ ದೇಶಗಳ ವಿಷಯದಲ್ಲಿ ಮೂಗು ತೋರಿಸುವ ಅಮೆರಿಕ ಇದೀಗ ಭಾರತದ ಮೇಲೆ ತನ್ನ ಕೀಳು ಅಭಿರುಚಿಯ ಆರೋಪವನ್ನು ಮಾಡಿದೆ. ಅಲ್ಲದೆ ತನ್ನ ಅಂತಾರಾಷ್ಟ್ರೀಯ ಧಾರ್ಮಿಕ ಆಯೋಗದ ವರದಿಯಲ್ಲಿ ಭಾರತವು ಮುಸ್ಲಿಮರನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದೆ ಎಂಬ ಆಪಾದನೆ ಮಾಡಿದೆ. ಈ ಕುರಿತ ವಾರ್ಷಿಕ ವರದಿಯನ್ನು ಟ್ರಂಪ್ ಸರ್ಕಾರಕ್ಕೆ ಆಯೋಗವು ಸಲ್ಲಿಸಿದೆ.
ಭಾರತದ ವಿರುದ್ಧ ಅಮೆರಿಕದ ಕೀಳು ಮಟ್ಟದ ಆರೋಪ..
ಇನ್ನೂ ಅಮೆರಿಕದಲ್ಲಿ ಭಾರತದ ಗುಪ್ತಚರ ಸಂಸ್ಥೆಯಾದ ರಾ ಸಿಖ್ ಅನ್ನು ಬ್ಯಾನ್ ಮಾಡಬೇಕು. ಅಲ್ಲದೆ ಮುಖ್ಯವಾಗಿ ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯಗಳಾಗುತ್ತಿವೆ. ಅವರನ್ನು ತಾರತಮ್ಯ ಭಾವದಿಂದ ನೋಡಿಕೊಳ್ಳಲಾಗುತ್ತಿದೆ, ಆ ದೇಶದಲ್ಲಿ ಧಾರ್ಮಿಕ ಸ್ವಾತಂತ್ಯ್ರಕ್ಕೆ ಧಕ್ಕೆಯಾಗುತ್ತಿದೆ ಎಂದು ಟೀಕಿಸಿದೆ. ಅಂದಹಾಗೆ ಖಲಿಸ್ತಾನಿಗಳ ಬೆಂಬಲಕ್ಕೆ ನಿಲ್ಲುವ ಅಮೆರಿಕ ಈಗ ಮತ್ತೆ ಅದೇ ಧೋರಣೆ ಅನುಸರಿಸುತ್ತಿದೆ. ಮುಖ್ಯವಾಗಿ ಅಲ್ಲಿನ ಖಲಿಸ್ತಾನಿ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯಾದ ಮೇಲೆ ಅದರ ಆರೋಪವನ್ನು ಭಾರತದ ಮೇಲೆ ಹೊರೆಸುವ ಕೆಲಸವನ್ನು ಅಮೆರಿಕ ಮಾಡಿತ್ತು. ಅಲ್ಲದೆ ಈ ಕೃತ್ಯದಲ್ಲಿ ಭಾರತ ಗುಪ್ತಚರ ಮಾಜಿ ಅಧಿಕಾರಿ ವಿಕಾಸ್ ಯಾದವ್ ಅವರೇ ಇದ್ದಾರೆ ಎಂಬುದಾಗಿ ಅಮೆರಿಕ ಆಪಾದನೆ ಮಾಡಿತ್ತು.
ಮೋದಿ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು..
ಅಂದಹಾಗೆ ಅಮೆರಿಕದ ಆರೋಪದ ಬಳಿಕವೇ ನಡೆದ ಈ ಬೆಳವಣಿಗೆಯು ಮುಂದಿನಿಂದ ಚೆನ್ನಾಗಿ ಮಾತನಾಡಿ, ಹಿಂದಿನಿಂದ ಚುಚ್ಚುವ ಈ ಅಮೆರಿಕದ ಚಾಳಿಯ ಭಾಗವಾಗಿವೆ. ಇನ್ನೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಟ್ರಂಪ್ ಇಬ್ಬರೂ ಪರಸ್ಪರ ಹೇಳಿಕೊಳ್ಳುವಂತಷ್ಟೇ ಅವರ ಗೆಳೆತನ ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದ್ದು, ಆ ವರದಿಯಲ್ಲಿ ಮೋದಿ ವಿರುದ್ಧ ಕಿಡಿ ಕಾರಲಾಗಿದೆ. ಪ್ರಮುಖವಾಗಿ ಮೋದಿ ಅವರು ಕಳೆದ ವರ್ಷ ತಮ್ಮ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರ ವಿರುದ್ಧ ದ್ವೇಷಭರಿತ ಭಾಷಣಗಳನ್ನು ಮಾಡಿದ್ದರು. ಇನ್ನೂ ಭಾರತದಲ್ಲಿ ಕಳೆದ 2024ರ ಬಳಿಕ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿಲ್ಲುತ್ತಿಲ್ಲ. ಧಾರ್ಮಿಕ ಸ್ವಾತಂತ್ರ್ಯ ಕೈ ಮೀರಿ ಹೋಗುತ್ತಿದೆ ಎಂದು ಆಯೋಗ ತನ್ನ ವರದಿಯಲ್ಲಿ ಭಾರತದ ವಿರುದ್ಧ ದೂರಿದೆ.
ನಿಮ್ಮ ಆಯೋಗಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಅರ್ಥನೇ ಗೊತ್ತಿಲ್ಲ..
ಇನ್ನೂ ಚೀನಾದಿಂದ ಡ್ರಗ್ಸ್ ತಯಾರಿಕೆಗೆ ಅವಶ್ಯಕವಿರುವ ಫೆಂಟಾನಿಲ್ ಅನ್ನು ಅಕ್ರಮವಾಗಿ ಭಾರತಕ್ಕೆ ತರಿಸಲಾಗುತ್ತಿದೆ. ಅಲ್ಲದೆ ಅಮೆರಿಕದಲ್ಲಿ 50 ಸಾವಿರಕ್ಕೂ ಅಧಿಕ ಜನರು ಇದರಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಅಮೆರಿಕವು ಮಾಡಿದೆ. ಅಲ್ಲದೆ ಈ ಅಮೆರಿಕದ ಆರೋಪವನ್ನು ತಳ್ಳಿ ಹಾಕಿರುವ ಭಾರತವು, ಇದು ರಾಜಕೀಯ ಉದ್ದೇಶಕ್ಕಾಗಿ ಮಾಡಿರುವ ಆಪಾದನೆಯಾಗಿದೆ ಎಂದು ಆಕೋಶ ವ್ಯಕ್ತಪಡಿಸಿದೆ. ಅಲ್ಲದೆ ನಮ್ಮ ಗುಪ್ತಚರ ಅಧಿಕಾರಿಗಳಿಂದ ಯಾವುದೇ ಕೊಲೆ, ಸಂಚುಗಳು ನಡೆದಿಲ್ಲ. ಧರ್ಮ ಹಾಗೂ ಪ್ರಜಾಪ್ರಭುತ್ವ ಸಹಿಷ್ಣುತೆಯ ಸಂಕೇತವಾಗಿರುವ ನಮ್ಮ ಭಾರತದ ಸ್ಥಾನವನ್ನು ಯಾರಿಂದಲೂ ಕೆಳಗಿಸುವುದು ಸಾಧ್ಯವಾಗುವುದಿಲ್ಲ. ಮೊದಲಿಗೆ ನಿಮ್ಮ ಆಯೋಗಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಅರ್ಥ ಹಾಗೂ ಕಾಳಜಿಯೇ ಗೊತ್ತಿಲ್ಲ ಎಂದು ಅಮೆರಿಕಕ್ಕೆ ಭಾರತ ಕೌಂಟರ್ ನೀಡಿದೆ.
ಒಟ್ನಲ್ಲಿ.. ಪ್ರಧಾನಿ ನರೇಂದ್ರ ಮೋದಿಯವರು ಈ ರೀತಿಯ ನವರಂಗಿ ಆಡಗಳನ್ನು ಆಡುವ ಟ್ರಂಪ್ ಅವರಂತಹ ಆಘಾತಕಾರಿ ನಾಯಕರಿಂದ ದೂರ ಇರಬೇಕು. ಮುಂದೆ ಭಾರತವನ್ನು ಹೊಗಳುವುದು ಹಿಂದಿನಿಂದ ಇರಿಯುವುದು ಇದೇ ಚಾಳಿಯನ್ನು ಅಮೆರಿಕ ಮೊದಲಿನಿಂದಲೂ ಮುಂದುವರೆಸಿಕೊಂಡು ಬಂದಿದೆ. ಅದರ ಭಾಗವಾಗಿಯೇ ಈಗ ಮೋದಿ ಮೇಲೆ ಮುಸ್ಲಿಂ ಕಡೆಗಣನೆಯ ಆರೋಪವನ್ನು ಹೊರೆಸಿದೆ. ಅಲ್ಲದೆ ತನ್ನ ದೇಶದ ಕುರಿತು ಕಾಳಜಿ ಇರುವ ಈ ಟ್ರಂಪ್ ತಾನು ಹೇಳಿಕೊಳ್ಳುವ ಗೆಳೆಯನ ವಿರುದ್ಧವೇ ಆರೋಪಿಸಿರುವುದು ನಿಜಕ್ಕೂ ಇದೊಂದು ವಿಶ್ವಾಸ ದ್ರೋಹವೇ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ..