Friday, March 14, 2025

Latest Posts

IPL 2024: ಐಪಿಎಲ್ ಆಟಗಾರರ ಹರಾಜಿಗೆ ಡೇಟ್ ಫಿಕ್ಸ್

- Advertisement -

ಐಪಿಎಲ್ ಕ್ರಿಡೆ :ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗಾಗಿ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಐಪಿಎಲ್ ಹರಾಜಿಗಾಗಿ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಡಿಸೆಂಬರ್ 19 ರಂದು ದುಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಲಾಗಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇದಕ್ಕಾಗಿ ನವೆಂಬರ್ 15 ರವರೆಗೆ ಕಾಲಾವಕಾಶ ನೀಡಲಾಗಿದೆ.

100 ಕೋಟಿ ಪರ್ಸ್:
ಮುಂಬರುವ ಐಪಿಎಲ್ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿಯ ಪರ್ಸ್ ನೀಡಲಾಗುತ್ತಿದೆ. ಕಳೆದ ಬಾರಿಯ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು 95 ಕೋಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ 5 ಕೋಟಿ ರೂ. ಅನ್ನು ಹೆಚ್ಚಿಸಲಾಗಿದ್ದು, ಅದರಂತೆ 100 ಕೋಟಿಯೊಳಗೆ ಆಟಗಾರರನ್ನು ಖರೀದಿಸಬಹುದು.

ಮಿನಿ ಹರಾಜು:
ಐಪಿಎಲ್ 2023 ರಲ್ಲಿ ಮೆಗಾ ಹರಾಜು ನಡೆದಿದ್ದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಹೀಗಾಗಿ ಈ ಬಾರಿ ಫ್ರಾಂಚೈಸಿಗಳಿಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು. ಅಲ್ಲದೆ ಬಿಡುಗಡೆ ಮಾಡಲಾದ ಆಟಗಾರರ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಸಬಹುದು. ಹೀಗಾಗಿಯೇ ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಸ್ಟಾರ್ ಆಟಗಾರರ ಎಂಟ್ರಿ:
ಐಪಿಎಲ್ 2024 ರ ಹರಾಜಿನಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಬಾರಿಯ ಐಪಿಎಲ್ನಿಂದ ಹೊರಗುಳಿದಿದ್ದ ಪ್ಯಾಟ್ ಕಮಿನ್ಸ್, ಕ್ರಿಸ್ ವೋಕ್ಸ್, ಟ್ರಾವಿಸ್ ಹೆಡ್, ಅಲೆಕ್ಸ್ ಹೇಲ್ಸ್, ಸ್ಯಾಮ್ ಬಿಲ್ಲಿಂಗ್ಸ್, ಜೆರಾಲ್ಡ್ ಕೊಯಟ್ಝಿ ಮತ್ತು ಮಿಚೆಲ್ ಸ್ಟಾರ್ಕ್ ಮುಂಬರುವ ಐಪಿಎಲ್ ಬಿಡ್ಡಿಂಗ್ನಲ್ಲಿ ಕಾಣಿಸಿಕೊಳ್ಳುವುದನ್ನು ಖಚಿತಪಡಿಸಿದ್ದಾರೆ.

10 ತಂಡಗಳು:
ಮುಂಬರುವ ಐಪಿಎಲ್ನಲ್ಲೂ 10 ತಂಡಗಳೇ ಮುಂದುವರೆಯಲಿದೆ. ಈ ಹಿಂದೆ ತಂಡಗಳ ಸಂಖ್ಯೆಯನ್ನು 12 ಕ್ಕೇರಿಸುವ ಪ್ರಸ್ತಾವನೆಗಳು ಬಂದಿದ್ದರೂ, ಸದ್ಯದ ಮಟ್ಟಿಗೆ ಬಿಸಿಸಿಐ ಹೆಚ್ಚುವರಿ ಟೀಮ್ಗಳನ್ನು ಕಣಕ್ಕಿಳಿಸುವ ಇರಾದೆಯಲ್ಲಿಲ್ಲ. ಹೀಗಾಗಿ ಐಪಿಎಲ್ ಸೀಸನ್ 17 ರಲ್ಲೂ 10 ತಂಡಗಳೇ ಕಣಕ್ಕಿಳಿಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್:
ಈ ಬಾರಿ ಕೂಡ ವುಮೆಮ್ಸ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಈ ಲೀಗ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಡಿಸೆಂಬರ್ 9 ರಂದು ನಡೆಸಲು ಯೋಜನೆ ರೂಪಿಸಲಾಗಿದೆ. ಇದಾಗ್ಯೂ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲ.

ಪ್ರೀ ದಸರಾ ಫ್ರೆಂಡ್ಲೀ ಫ್ಲಾಗ್ ಫುಟ್ಬಾಲ್ ಕ್ರೀಡೆ..!

ಐಟಿಎಫ್‌ ಪುರುಷರ ನಗದು ಬಹುಮಾನ ಟೆನಿಸ್‌ ಪಂದ್ಯಾವಳಿಗೆ ಧಾರವಾಡ ಸಜ್ಜು

World Cup; ಅಭಿಮಾನಿಗಳಿಗಾಗಿ ವಿಶ್ವಕಪ್ ಗೆಲ್ಲಲು ಪಣತೊಟ್ಟಿದ್ದೇವೆ..!ಕೋಹ್ಲಿ

- Advertisement -

Latest Posts

Don't Miss