Sunday, September 8, 2024

Latest Posts

ಇಂದು ಹೈದ್ರಾಬಾದ್, ಲಕ್ನೊ ಕದನ

- Advertisement -

ಮುಂಬೈ: ಐಪಿಎಲ್‍ನ 12ನೇ ಪಂದ್ಯದಲ್ಲಿಂದು ಸನ್‍ರೈಸರ್ಸ್ ತಂಡ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಇಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಮೊದಲ ಗೆಲುವಿಗಾಗಿ ಹೋರಾಡಿದರೆ ಲಕ್ನೋ ತಂಡ ಎರಡನೆ ಗೆಲುವಿನ ಮೇಲೆ ಕಣ್ಣಿಟ್ಟಿದೆ.


ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈಸರ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 61 ರನ್‍ಗಳಿಂದ ಸೋಲು ಕಂಡಿತು. ಇನ್ನು ಹೊಸ ಲಕ್ನೊ ಸೂಪರ್ ಜೈಂಟ್ಸ್ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತು ನಂತರ ಹಾಲಿ ಚಾಂಪಿಯನ್ ಚೆನ್ನೆ ವಿರುದ್ಧ  ಗೆಲುವು ದಾಖಲಿಸಿತ್ತು.

ಲಕ್ನೊ ತಂಡಕ್ಕೆ ಕೆರೆಬಿಯನ್ ಆಟಗಾರರಾದ ಜಾಸನ್ ಹೋಲ್ಡರ್ ಹಾಗೂ ಕೈಲೆ ಮೇಯರ್ಸ್ ಆಗಮನದಿಂದ ಪುಟಿದೆದ್ದಿದೆ.
ಸನ್‍ರೈಸರ್ಸ್ ತಂಡ ಬ್ಯಾಟಿಂಗ್ ಬೌಲಿಂಗ್ ಎರಡೂ ವಿಗದಲ್ಲೂ ಸು`Áರಿಸಬೇಕಿದೆ. ನಾಯಕ ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಟಿ, ನಿಕೊಲೊಸ್ ಪೂರಾನ್, ಅಬ್ದುಲ್ ಸಾಮಾದ್, ಅಭಿಷೇಕ್ ಶರ್ಮಾ ಸಿಡಿಯಬೇಕಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಸನ್‍ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಐಡೆನ್ ಮಾಕ್ರ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ರೊಮಾರಿಯೊ ಶೆÀರ್ಡ್, `Àುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಲಕ್ನೋ ಸೂಪರ್ ಜೈಂಟ್ಸ್: ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಎವಿನ್ ಲೂಯಿಸ್, ಮನೀಶ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್

- Advertisement -

Latest Posts

Don't Miss