Monday, April 14, 2025

Latest Posts

ಇಂದು ಕ್ಯಾಪಿಟಲ್ಸ್ , ರಾಯಲ್ಸ್ ಕದನ 

- Advertisement -

ಮುಂಬೈ: ಕೋವಿಡ್ ಭೀತಿ ನಡುವೆಯೂ ಡೆಲ್ಲಿ  ಕ್ಯಾಪಿಟಲ್ಸ್ ತಂಡ  ಐಪಿಎಲ್‍ನ 34ನೇ ಪಂದ್ಯದಲ್ಲಿ ಇಂದು ಬಲಿಷ್ಠ  ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯ ಜಿದ್ದಾಜಿದ್ದನಿಂದ ಕೂಡಿರಲಿದೆ.  ಆಸಿಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಹಾಗೂ ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಸೋಂಕಿಗೆ ಗುರಿಯಾಗಿರುವುದರಿಂದ ಡೆಲ್ಲಿ  ಕ್ಯಾಪಿಟಲ್ಸ್ ತಂಡ ಕುಗ್ಗಿ ಹೋಗಿದೆ.

ಆದರೂ ಮೊನ್ನೆ ಪಂಜಾಬ್ ವಿರುದ್ಧ ಪಂತ್ ಪಡೆ 9 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.  ಇದು ಡೆಲ್ಲಿ  ಹುಡುಗರ ಆತ್ಮವಿಶ್ವಾಸ ಹೆಚ್ಚಿಸಿದೆ.

ಡೆಲ್ಲಿ ತಂಡ 6 ಪಂದ್ಯಗಳಿಂದ 3ಪಂದ್ಯಗಳನ್ನ ಗೆದ್ದು 3ರಲ್ಲಿ  ಸೋತು  6 ಅಂಕಗಳೊಂದಿಗೆ  ಆರನೆ ಸ್ಥಾನದಲ್ಲಿದೆ.

ಇನ್ನು ರಾಜಸ್ಥಾನ ತಂಡ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು 8 ಅಂಕಗಳೊಂದಿಗೆ ಮೂರನೆ ಸ್ಥಾನದಲ್ಲಿದೆ.

ಡೆಲ್ಲಿ ತಂಡದಲ್ಲಿ  ಆರಂಭೀಕರಾದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಟೂರ್ನಿಯಲ್ಲಿ ಅತ್ಯುತ್ತಮ ಆರಂಭಿಕರಾಗಿದ್ದಾರೆ. ನಾಯಕ ರಿಷಭ್ ಪಂತ್

ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ.  ಆದರೆ ರೊವಮನ್ ಪೊವೆಲ್ ಫಾರ್ಮ್‍ನಲ್ಲಿ ಇಲ್ಲ. ಪೊವೆಲ್ ಐದು ಇನ್ನಿಂಗ್‍ಗಳಿಂದ ಕೇವಲ 31 ರನ್ ಗಳಿಸಿದ್ದಾರೆ.

ಇಂದಿನ ಕದನ ಸ್ಪಿನ್ನರ್ಸ್‍ಗಳ ಕದನ ಎಂದರೆ ತಪ್ಪಾಗಲ್ಲ. ಇದು ಚಹಲ್ ಹಾಗೂ ಕುಲದೀಪ್ ನಡುವಿನ ಕ

ದನವಾಗಿದೆ. ಎಡಗೈ ಬೌಲರ್ಸ್‍ಗಳು ಡೆಲ್ಲಿ  ತಂಡದ ಅಸ್ತ್ರವಾಗಿದ್ದಾರೆ.  ಖಲೀಲ್ ಅಹ್ಮದ್,  ಮುಸ್ತಾಫಿಜುರ್ ರೆಹಮಾನ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಬಲಿಷ್ಠ ಬ್ಯಾಟರ್‍ಗಳಿಗೆ ಕಂಟಕವಾಗಿದ್ದಾರೆ.

ಸಂಜು ಪಡೆಗೆ ಬೌಲಿಂಗ್‍ನದ್ದೆ ಚಿಂತೆ

ಇನ್ನು  ರಾಜಸ್ಥಾನ ರಾಯಲ್ಸ್ ಬಲಿಷ್ಠವಾಗಿದ್ದು  ಡೆಲ್ಲಿ ಎದುರು ಗೆಲ್ಲುವ  ಫೇವರಿಟ್ ತಂಡವೆನಿಸಿದೆ. ಇಂದು ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಕಳೆದ ಪಂದ್ಯದಲ್ಲಿ  ರಾಜಸ್ಥಾನ ಎದುರು ರೋಚಕ ಗೆಲುವು ದಾಖಲಿಸಿತ್ತು.

ಜೋಸ್ ಬಟ್ಲರ್ ಉತ್ತಮ ಆರಂಭ ಕೊಟ್ಟರೆ  ಶಿಮ್ರಾನ್ ಹೇಟ್ಮಯರ್ ಮ್ಯಾಚ್ ಫಿನಿಶರ್ ಆಗಿದ್ದಾರೆ.  ನಾಯಕ ಸಂಜು ಸ್ಯಾಮ್ಸನ್ ಕಳೆದ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರು. ಕರುಣ್ ನಾಯರ್ ಹಾಗೂ ಅಶ್ವಿನ್ ಮಧ್ಯಮ ಕ್ರಮಾಂಕದಲ್ಲಿ  ಒಳ್ಳೆಯ ಬ್ಯಾಟರ್‍ಗಳಲ್ಲ.

ಬೌಲಿಂಗ್ ತಂಡದ ಸಮಸ್ಯೆಯಾಗಿದೆ. ವೇಗಿಗಾಳದ ಟ್ರೆಂಟ್ ಬೌಲ್ಟ್ ಹಾಗೂ ಪ್ರಸಿದ್ಧ ಕೃಷ್ಣ  ಉತ್ತಮ ಆರಂಭ ಕೊಡಬೇಕಿದೆ. ಇನ್ನು ಆರ್.ಅಶ್ವಿನ್ ಈ ಬಾರಿ ಹೇಳಿಕೊಳ್ಳುವಂತಹ ಪ್ರದಶ್ನ ನೀಡಿಲ್ಲ.  ಒಬೆಡ್ಮೆಕ್‍ಕೊಯೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಿದೆ.

ಸಂಭವ್ಯ ತಂಡಗಳು:

ಡೆಲ್ಲಿ ತಂಡ :  ಪೃಥ್ವಿ ಶಾ, ಡೇವಿಡ್ ವಾರ್ನರ್ , ರ್ಸಾರಾಜ್ ಖಾನ್, ರಿಷಭ ಪಂತ್  (ನಾಯಕ, ವಿಕೆಟ್ ಕೀಪರ್), ಲಲಿತ್ ಯಾದವ್,  ರೊವಮನ್ ಪೊವೆಲ್,  ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್  ಯಾದವ್,  ಮುಸ್ತಾಫಿಜುರ್ ರೆಹಮಾನ್‍ಮ ಖಲೀಲ್ ಅಹ್ಮದ್.

ರಾಜಸ್ಥಾನ ರಾಯಲ್ಸ್‍: ಜೋಸ್ ಬಟ್ಲರ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್), ಶಿಮ್ರಾನ್ ಹೇಟ್ಮಯರ್,  ಕರುಣ್ ನಾಯರ್,  ರಿಯಾನ್ ಪರಾಗ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್‍, ಒಬೆಡ್ ಮೆಕ್‍ಕೊಯೆ, ಪ್ರಸಿದ್ಧ ಕೃಷ್ಣ, ಯಜ್ವಿಂದರ್ ಚಾಹಲ್.

 

- Advertisement -

Latest Posts

Don't Miss