- Advertisement -
ಕೋಲ್ಕತ್ತಾ: ಐಪಿಎಲ್ 15ರ ಆವೃತ್ತಿಯಲ್ಲಿ ಮಳೆಯಿಂದ ಅಡ್ಡಿಯಾದರೆ ಮತ್ತು ನಿಗದಿತ ಸಮಯದಲ್ಲಿ ಪಂದ್ಯ ಆಡಿಸಲು ಸಾಹಾಯವಾಗದಿದ್ದರೆ ಸೂಪರ್ ಓವರ್ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸಲಿದೆ.
ಒಂದು ವೇಳೆ ಸೂಪರ್ ಓವರ್ ಕೂಡ ಆಡಿಸಲು ಸಾಹಾಯವಾಗದಿದ್ದರೆ ಲೀಗ್ ಹಂತದ ಅಂಕಪಟ್ಟಿ ಆರಂಭದ ಮೇಲೆ ಚಾಂಪಿಯನ್ ಯಾರೆಂಬುದನ್ನು ನಿರ್ಧಾರವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಈ ನಿಯಮಗಳು ಕ್ವಾಲಿಫೈಯರ್ 1, ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2ಕ್ಕೆ ಅನ್ವಯಿಸುತ್ತದೆ.
ಮೇ29ರಂದು ಫೈನಲ್ ಪಂದ್ಯ ನಡೆಯಲಿದೆ ಒಂದು ಎಸೆತ ಹಾಕಿ ಮಳೆಗೆ ಪಂದ್ಯ ರದ್ದಾದರೆ ಮೇ30 ದಿನವನ್ನು ಮೀಸಲು ದಿನವಾನ್ನಾಗಿ ಇಡಲಾಗಿದೆ. ಪಂದ್ಯ ರಾತ್ರಿ 8ಗಂಟೆಗೆ ಆರಂಭವಾಗಲಿದೆ.
- Advertisement -