Wednesday, September 17, 2025

Latest Posts

ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ

- Advertisement -

ಮುಂಬೈ: ರನ್ ಮಷೀನ್ ವಿರಾಟ್ ಕೊಹ್ಲಿ ಇಂದು ನಡೆಯುವ ಆರ್‍ಸಿಬಿ ಹಾಗೂ ರಾಜಸ್ಥಾನ ನಡುವಿನ ಕದನದಲ್ಲಿ ವಿಶೇಷ ದಾಖಲೆಯೊಂದನ್ನ ಬರೆಯಲಿದ್ದಾರೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‍ಸಿಬಿಗೆ ಕಪ್ ಗೆಲ್ಲಿಸಿ ಕೊಡದೇ ಇರಬಹುದು ಆದರೆ ಐಪಿಎಲ್‍ನಲ್ಲಿ ರನ್ ಶಿಖರ್ ಕಟ್ಟಿದ್ದಾರೆ. ಕೊಹ್ಲಿ ವಿಶೇಷ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇನ್ನೊಂದು ಬೌಂಡರಿ ಹೊಡೆದರೆ ಸಾಕು ವಿರಾಟ್ ಕಲ್ಲರ್‍ಫುಲ್ ಟೂರ್ನಿಯಲ್ಲಿ ಸದ್ದು ಮಾಡಲಿದ್ದಾರೆ. ಐಪಿಎಲ್‍ನಲ್ಲಿ ವಿರಾಟ್ 209 ಪಂದ್ಯಗಳಿಂದ 6,336 ರನ್ ಗಳಿಸಿದ್ದಾರೆ.


ವಿರಾಟ್ ಒಂದು ಫೋರ್ ಹೊಡೆದರೆ ಐಪಿಎಲ್‍ನಲ್ಲಿ ಒಟ್ಟು 550 ಬೌಂಡರಿಗಳ ಜೊತೆಗೆ 200 ಸಿಕ್ಸರ್‍ಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈವರೆಗೆ ಐಪಿಎಲ್‍ನಲ್ಲಿ ಯಾರು ಈ ಸಾಧನೆ ಮಾಡಿಲ್ಲ.

ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ ಇದುವರೆಗೂ ಐಪಿಎಲ್‍ನಲ್ಲಿ 664 ಬೌಂಡರಿ ಸಿಡಿಸಿದ್ದಾರೆ. ಎರಡನೆ ಸ್ಥಾನದಲ್ಲಿ ವಿರಾಟ್ ಇದ್ದಾರೆ. ಡೇವಿಡ್ ವಾರ್ನರ್ 526 ಬೌಂಡರಿಗಳೊಂದಿಗೆ ಮೂರನೆ ಸ್ಥಾನದಲ್ಲಿದ್ದಾರೆ.

ಇನ್ನು ಸಿಕ್ಸರ್‍ಗಳ ವಿಚಾರಕ್ಕೆ ಬಂದರೆ ಕೆರೆಬಿಯನ್ ದೊರೆ ಕ್ರಿಸ್ ಗೇಲ್ ಐಪಿಎಲ್‍ನಲ್ಲಿ 355 ಸಿಕ್ಸರ್‍ಗಳನ್ನ ಹೊಂದಿದ್ದಾರೆ.ವಿರಾಟ್ ಕೊಹ್ಲಿ 212 ಸಿಕ್ಸರ್‍ಗಳೊಂದಿಗೆ 6ನೇ ಸ್ಥಾನ ಪಡೆದಿದ್ದಾರೆ.

- Advertisement -

Latest Posts

Don't Miss