ಮುಂಬೈ:ಟೂರ್ನಿಯಲ್ಲಿ ಅತ್ಯದ್ಭುತ ಬೌಲಿಂಗ್ ಮಾಡಿರುವ ಲೆಗ್ ಸ್ಪಿನ್ನರ್ ಯಜ್ವಿಂದರ್ ಚಹಲ್ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ನಿನ್ನೆ ಚೆನ್ನೈ ವಿರುದ್ಧ 26 ರನ್ ಕೊಟ್ಟು 2 ವಿಕೆಟ್ ಪಡೆದರು. ಈ ಮೂಲಕ ಚಹಲ್ 14 ಪಂದ್ಯಗಳಿಂದ ಟೂರ್ನಿಯಲ್ಲಿ ಒಟ್ಟು 26 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಜೊತೆಗೆ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಗಳ ಪಟ್ಟಿಯಲ್ಲಿ ಇಮ್ರಾನ್ ತಾಹೀರ್ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
2019ರಲ್ಲಿ ಚೆನ್ನೈ ಪರ ಆಡಿದ್ದ ಇಮ್ರಾನ್ ತಾಹೀರ್ 17 ಪಂದ್ಯಗಳಲ್ಲಿ 26 ವಿಕೆಟ್ ಕಬಳಿಸಿದ್ದರು. ಚೆನ್ನೈ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೋ 2013ರ ಆವೃತ್ತಿಯಲ್ಲಿ 32 ವಿಕೆಟ್ ಪಡೆದಿದ್ದರು.
ಕಳೆದ ವರ್ಷ ಆರ್ಸಿಬಿಯ ವೇಗಿ ಹರ್ಷಲ್ ಪಟೇಲ್ 32 ವಿಕೆಟ್ ಪಡೆದು ಸಮಾನವಾಗಿ ದಾಖಲೆ ಬರೆದಿದ್ದರು.
ನಿನ್ನೆಯ ಪಂದ್ಯದಲ್ಲಿ ಚೆನ್ನೈ ತಂಡದ ಆಲ್ರೌಂಡರ್ ಮೊಯಿನ್ ಅಲಿ ಟೂರ್ನಿಯಲ್ಲಿ 2ನೇ ವೇಗದ ಅರ್ಧ ಶತಕ ಸಿಡಿಸಿದರು. 19 ಎಸೆತದಲ್ಲಿ ಅರ್ಧ ಶತಕ ಪೂರೈಸಿ ಒಟ್ಟು 57 ಎಸೆತದಲ್ಲಿ 93 ರನ್ ಚಚ್ಚಿದರು.
ತಂಡದ ಪರ ಎರಡನೆ ವೇಗದ ಅರ್ಧ ಶತಕ ಇದಾಗಿದೆ.2014ರಲ್ಲಿ ಸುರೇಶ್ ರೈನಾ 16 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ದಾಲೆ ಬರೆದಿದ್ದರು.