Sunday, April 13, 2025

Latest Posts

ಆರ್ಸಿಬಿಗೆ ಸಹಾಯ ಮಾಡುತ್ತಾ ಮುಂಬೈ ?

- Advertisement -

ಮುಂಬೈ: ಎಲ್ಲರೂ ಕಾತರದಿಂದ ಕಾಯುತ್ತಿರುವ ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ರೋಚಕ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದ ಮೂಲಕ ಆರ್ಸಿಬಿ ತಂಡದ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಈ ಕೂತೂಹಲದ ಪಂದ್ಯಕ್ಕೆ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಡೆಲ್ಲಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಇತ್ತ ಆರ್ಸಿಬಿ ಅಭಿಮಾನಿಗಳು, ಆಟಗಾರರು ಮುಂಬೈ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಮುಂಬೈ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದ್ದು ಗೆಲುವಿನೊಂದಿಗೆ ಟೂರ್ನಿಗೆ ಗುಡ್ ಬೈ ಹೇಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಡೆಲ್ಲಿ ತಂಡ 13 ಪಂದ್ಯಗಳಿಂದ  7ರಲ್ಲಿ ಗೆದ್ದು 6ರಲ್ಲಿ ಸೋತು 14 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.  ಇನ್ನು ಆರ್ಸಿಬಿ 14 ಪಂದ್ಯಗಳಿಂದ 8 ಪಂದ್ಯಗಳನ್ನು ಗೆದ್ದು 6ರಲ್ಲಿ ಸೋತು 16 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಡೆಲ್ಲಿ ತಂಡ ನೆಟ್ ರನ್  ರೇಟ್ನಲ್ಲಿ 0.255 ಅಂಕ ಹೊಂದಿದೆ. ಆರ್ಸಿಬಿ -0.253 ಹೊಂದಿದೆ. ಈ ರನ್ ರೇಟ್ ಆಧಾರಿಸಿ ಎರಡು ತಂಡಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಆರ್ಸಿಬಿ ಪ್ಲೇ ಆಫ್ಗೆ ಹೋಗಲು ಮುಂಬೈ ಗೆಲುವು ಮುಖ್ಯವಾಗಿರುವುರುದರಿಂದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸಿದ್ದಾರೆ. ಎರಡಲ್ಲ 25 ಮಂದಿಯನ್ನು ನೋಡಬಹುದೆಂದು ಕೊಹ್ಲಿ ತಿಳಿಸಿದ್ದಾರೆ.

 

- Advertisement -

Latest Posts

Don't Miss