ಕೋಲ್ಕತ್ತಾ: ಐಪಿಎಲ್‍ನ ಮೊದಲ ಕ್ವಾಲಿಫೈಯರ್‍ನಲ್ಲಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಈಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿದೆ. ರಾಜಸ್ಥಾನ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿರುವ ಟೈಟಾನ್ಸ್ ಅದ್ಭುತ ಬೌಲಿಂಗ್ ದಾಳಿ ಹಾಗೂ ಒಳ್ಳೆಯ ಮ್ಯಾಚ್ ಫಿನಿಶರ್‍ಗಳಿದ್ದಾರೆ. ಇನ್ನು ರಾಜಸ್ಥಾನ ತಂಡಕ್ಕೆ ಸ್ಪಿನ್ ಬ್ರಹ್ಮಸ್ತ್ರವಾಗಿದೆ.
ಮೊದಲ ಬಾರಿ ನಾಯಕನಾಗಿ ಆಡುತ್ತಿರುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಮಿಂಚಿ ಲೀಗ್ ಹಂತದಲ್ಲಿ ತಂಡವನ್ನು ಅಗ್ರಸ್ಥಾನಕ್ಕೇರಿಸಿದರು.
ನಾಲ್ಕನೆ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮಾಡದಿದ್ದರೂ ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಜೊತೆ ಸ್ಪಿನ್ನರ್ ರಶೀದ್ ಖಾನ್ ಸೋಟಕ ಬ್ಯಾಟಿಂಗ್ ಮೂಲಕ ಗೇಮ್ ಫಿನೀಶರ್ ಆಗಿದ್ದಾರೆ.
ಟೈಟಾನ್ಸ್ ತಂಡದ ಅಗ್ರ ಕ್ರಮಾಂಕದಲ್ಲಿ ಸಮಸ್ಯೆಯಿದ್ದು ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಉತ್ತಮ ಆರಂಭ ಕೊಡುವಲ್ಲಿ ಎಡವುತ್ತಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ತಿರಸ್ಕರಿಸಲ್ಪಟ್ಟ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ 9 ಪಂದ್ಯಗಳಿಂದ 3 ಅರ್ಧ ಶತಕ ಸಿಡಿಸಿದ್ದಾರೆ.
ಟೀಮ್ ಇಂಡಿಯಾದಿಂದ ಹೊರಬಂದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಇಂದು ತಂಡದ ಸಹ ಆಟಗಾರ ಮೊಹ್ಮದ್ ಶಮಿ ಜೊತೆ ತವರಿನ ಅಭಿಮಾನಿಗಳ ಮುಂದೆ ಮೊತ್ತೊಮ್ಮೆ ಆಡಲಿದ್ದಾರೆ.
ಲೆಗ್ ಸ್ಪಿನ್ನರ್ ರಶೀದ್ ಖಾನ್ ಮಧ್ಯಮ ಹಾಗೂ ಡೆತ್ ಓವರ್‍ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಇನ್ನು ವೇಗಿ ಮೊಹ್ಮದ್ ಶಮಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದು ಪವರ್ ಪ್ಲೇನಲ್ಲಿ (11 ವಿಕೆಟ್) ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಪ್ಲೇ ಆಫ್ ಅನ್ನ ಹೊಸ ಪಿಚ್‍ನಲ್ಲಿ ಆಡುತ್ತಿರುವುದರಿಂದ ವೇಗಿಗಳನ್ನು ಗಮನದಲ್ಲಿಟ್ಟುಕೊಂಡು ಶಮಿ ಹಾಗೂ ಫರ್ಗ್ಯೂಸನ್ ಜೊತೆಗಿ ವೇಗಿ ಅಲಜಾರಿ ಜೋಸೆಫ್ಗೆ ಅವಕಾಶ ಕೊಡಬಹುದು.
ಲೀಗ್‍ನಲ್ಲಿ ಟೈಟಾನ್ಸ್ ರಾಜಸ್ಥಾನ ತಂಡವನ್ನು 37 ರನ್ ಗಳ ಅಂತರದಿಂದ ಸೋಲಿಸಿತ್ತು. ಆದರೆ ರಾಜಸ್ಥಾನ ಸ್ಪಿನ್ ದಾಳಿ ಸಾಕಷ್ಟು ಅನುಭವ ಹೊಂದಿದ್ದು ತುಂಬ ಕಠಿಣ ಸವಾಲನ್ನು ಎದುರಿಸಲಿದೆ.
ಟೈಟಾನ್ಸ್ ಕಳೆದ 5 ಪಂದ್ಯಗಳಿಂದ ಆರ್‍ಸಿಬಿ ಸೇರಿ 3 ಪಂದ್ಯಗಳನ್ನು ಕೈಚೆಲ್ಲಿದೆ. ಟೈಟಾನ್ಸ್ ಲೀಗ್ ಹಂತದಲ್ಲಿ 4 ಪಂದ್ಯಗಳಲ್ಲಿ ಸೋತರೆ ರಾಜಸ್ಥಾನ 5 ಪಂದ್ಯಗಳನ್ನು ಕೈಚೆಲ್ಲಿದೆ.
ಸಿಡಿಯಬೇಕು ಜೋಸ್ ಬಟ್ಲರ್
ಇನ್ನು ಸಂಜು ಸ್ಯಾಮ್ಸನ್ ಪಡೆ ಆರೆಂಜ್ ಹಾಗೂ ಪರ್ಪಲ್ ಕ್ಯಾಚ್ ಹೊಂದಿದ ತಂಡವಾಗಿದೆ.
ಆರ್.ಅಶ್ವಿನ್ ಪ್ರದರ್ಶನ ತಂಡಕ್ಕೆ ದೊಡ್ಡ ನೆರೆವು ನೀಡುತ್ತಿದೆ. ಅಶ್ವಿನ್ ಬ್ಯಾಟಿಂಗ್ ಫಲಿತಾಂಶವನ್ನು ಬದಲಿಸುವ ತಾಕತ್ತು ಹೊಂದಿದೆ. ಮೊನ್ನೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಶಿಮ್ರಾನ್ ಹೇಟ್ಮಯರ್ ಪರದಾಡಿದರು.ಆದರೆ ಅಶ್ವಿನ್ 23 ಎಸೆತದಲ್ಲಿ ಅಜೇಯ 40 ರನ್ ಗಳಿಸಿದರು.
2008ರ ಇತಿಹಾಸವನ್ನು ಮರಳಿ ಪಡೆಯಬೇಕಿದ್ದಲ್ಲಿ ಅಶ್ವಿನ್ ಮಾತ್ರವಲ್ಲ ತಂಡದ ಅಗ್ರ ಬ್ಯಾಟರ್‍ಗಳು ಸೋಟಕ ಬ್ಯಾಟಿಂಗ್ ಮಾಡಬೇಕು.
ತಂಡದ ಸ್ಟಾರ್ ಆಟಗಾರ ಜೋಸ್ ಬಟ್ಲರ ಕಳೆದ ಕೆಲವು ಪಂದ್ಯಗಳಿಂದ ವಿಫಲರಾಗುತ್ತಾ ಬಂದಿದ್ದು ಕೇವಲ ಒಂದಂಕಿ ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ 3 ಶತಕ 3 ಅರ್ಧ ಶತಕ ಸಿಡಿಸಿರುವ ಬಟ್ಲರ್ ಮತ್ತೆ ಲಯಕ್ಕೆ ಮರಳಬೇಕಿದೆ.
ಸ್ಯಾಮ್ಸನ್ ಹಾಗೂ ಹೇಟ್ಮಯರ್ ಫಾರ್ಮ್ ಕಳೆದುಕೊಂಡಿದ್ದು ದೊಡ್ಡ ಜವಾಬ್ದಾರಿ ಹೊರಬೇಕಿದೆ. ಈ ಪಂದ್ಯದಲ್ಲಿ ಸೋತರೂ ಎರಡೂ ತಂಡಗಳಿಗೂ ಮತ್ತೊಂದು ಅವಕಾಶ ಇದೆ ಅನ್ನೋದೆ ಸಮಾಧಾನದ ಸಂಗತಿಯಾಗಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟಾನ್ಸ್: ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಮ್ಯಾಥೀವ್ ವೇಡ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹ್ಮದ್ ಶಮಿ.
ರಾಜಸ್ಥಾನ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್,
ದೇವದತ್ ಪಡಿಕಲ್, ಆರ್.ಅಶ್ವಿನ್, ಶಿಮ್ರಾನ್ ಹೇಟ್ಮಯರ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಯಜ್ವಿಂದರ್ ಚಾಹಲ್, ಪ್ರಸಿದ್ಧ ಕೃಷ್ಣ, ಒಬೆಡ್ ಮೆಕ್‍ಕೊಯೆ.