ಮುಂಬೈ:ಐಪಿಎಲ್‍ನಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ.
ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡು ತಂಡಗಳು ಗೆಲುವಿನ ಲಯಕ್ಕೆ ಮರಳಲು ಹೋರಾಡಲಿವೆ. ಕೋಲ್ಕತ್ತಾ ತಂಡ 6 ಪಂದ್ಯಗಳಿಂದ 3 ರಲ್ಲಿ ಗೆದ್ದು 3ರಲ್ಲಿ ಸೋತು 6 ಅಂಕ ಸಂಪಾದಿಸಿದೆ. ರಾಜಸ್ಥಾನ ತಂಡ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2ರಲ್ಲಿ ಸೋತು 6 ಅಂಕ ಪಡೆದಿದೆ.
ಕೋಲ್ಕತ್ತಾ ಕಳೆದ 2 ಪಂದ್ಯಗಳನ್ನ ಸೋತಿರುವ ಶ್ರೇಯಸ್ ಪಡೆ ಮತ್ತೆ ಗೆಲುವಿನ ಟ್ರ್ಯಾಕ್‍ಗೆ ಮರಳಲು ಹೋರಾಟ ಮಾಡಲಿದೆ. ಇನ್ನು ರಾಜಸ್ಥಾನ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿತ್ತು.
ಎರಡೂ ತಂಡಗಳು ಟೂರ್ನಿಯಲ್ಲಿ ಉತ್ತಮ ಆರಂಭವನ್ನೂ ನೀಡಿದವು. ಆದರೆ ಕೆಲವು ನ್ಯೂನತೆಗಳು ಸೋಲುವಂತೆ ಮಾಡಿವೆ. ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗುತ್ತಿಲ್ಲ. ರಹಾನೆ ಬದಲು ಅವಕಾಶ ಪಡೆದ ಆರಾನ್ ಫಿಂಚ್ ವಿಫಲರಾಗಿದ್ದಾರೆ. ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಪಡೆಯಬಹುದು.
ಇನ್ನುಳಿದಂತೆ ವೆಂಕಟೇಶ್ ಅಯ್ಯರ್, ನಾಯಕ ಶ್ರೇಯಸ್ ಅಯ್ಯರ್ ಫಾರ್ಮ್ ಕಳೆದುಕೊಂಡಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮಾಡುತ್ತಿರುವ ಆಂಡ್ರೆ ರಸೆಲ್ ಮ್ಯಾಚ್ ವಿನ್ನರ್ ಆಗುತ್ತಿಲ್ಲ. ಪ್ಯಾಟ್ ಕಮಿನ್ಸ್ ಕೂಡ ಬ್ಯಾಟಿಂಗ್‍ನಲ್ಲಿ ವಿಫಲರಾಗುತ್ತಿದ್ದಾರೆ. ನಿತೀಶ್ ರಾಣಾ ಜವಾಬ್ದಾರಿಯುತವಾಗಿ ಆಡಬೇಕಿದೆ.
ಇನ್ನು ರಾಜಸ್ಥಾನ ತಂಡ ಜೋಸ್ ಬಟ್ಲರ್ ಅವರನ್ನು ನೆಚ್ಚಿಕೊಂಡಿದೆ. ಜೋಸ್ ಬಟ್ಲರ್ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕಲ್, ರನ್ ವೆನ್ ಡಸೆನ್ ಒಂದಂಕಿ ರನ್‍ಗೆ ಸೀಮಿತವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೇಟ್ಮಂiÀiರ್ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ರಿಯಾನ್ ಪರಾಗ್ ರನ್ ವೇಗ ಹೆಚ್ಚಿಸುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ಯಜ್ವಿಂದರ್ ಚಾಹಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಜೇಮ್ಸ್ ನಿಶಾಮ್ ಮತ್ತೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ. ಅಶ್ವಿನ್ 1 ವಿಕೆಟ್ ಪಡೆದಿದ್ದು ಬ್ಯಾಟಿಂಗ್‍ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಪ್ರಸಿದ್ಧ ಕೃಷ್ಣ ಹಾಗೂ ಕುಲದೀಪ್ ಸೇನ್ ಒಳ್ಳೆಯ ಬೌಲಿಂಗ್ ಮಾಡಬೇಕಿದೆ.