Friday, October 18, 2024

Latest Posts

ಲಕ್ನೋ ಗೆಲುವಿನ ಓಟಕ್ಕೆ ಕೋಲ್ಕತ್ತಾ ಲಗಾಮು ?

- Advertisement -

ಪುಣೆ: ಐಪಿಎಲ್‍ನಲ್ಲಿ  ಇಂದು  ಎರಡು ಪಂದ್ಯಗಳು  ನಡೆಯಲಿದೆ. ಐಪಿಎಲ್‍ನ 52ನೇ ಪಂದ್ಯದಲ್ಲಿ  ಪಂಜಾಬ್ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ  ಕೋಲ್ಕತ್ತಾ ಬಲಿಷ್ಠ ಲಕ್ನೊ ತಂಡವನ್ನು ಎದುರಿಸಲಿದೆ.

ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ  ಲಕ್ನೊ ಎದುರು  ಕೊಲ್ಕತ್ತಾಕೆ ಅಗ್ನಿ ಪರೀಕ್ಷೆಯಾಗಿದೆ. ಅಂಕಪಟ್ಟಿಯಲ್ಲಿ  ಎರಡನೆ ಸ್ಥಾನದಲ್ಲಿರುವ ಲಕ್ನೊ ತಂಡ 14 ಅಂಕ ಪಡೆದಿದ್ದು ಪ್ಲೇ ಆಫ್ ಸಮೀಪದಲ್ಲಿದೆ.

ಇನ್ನು ಶ್ರೇಯಸ್ ನೇತೃಥ್ವದ ಕೋಲ್ಕತ್ತಾ ತಂಡ 10 ಪಂದ್ಯದಲ್ಲಿ 4ರಲ್ಲಿ ಗೆದ್ದು 8 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದು  ಒಂದು ಸಕಾರಾತ್ಮಕ ಫಲಿತಾಂಶ ಪ್ಲೇಆಫ್ ಆಸೆಯನ್ನು ಜೀವಂತವಾಗಿರಸಲಿದೆ.

ಕನ್ನಡಿಗ ರಾಹುಲ್ ಲಕ್ನೊ ತಂಡವನ್ನು ಅದ್ಬುತವಾಗಿ ಮುನ್ನಡೆಸಿದ್ದಾರೆ.10 ಪಂದ್ಯಗಳಿಂದ 2 ಶತಕ ಸೇರಿ 451 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ  ಅತಿ ಹೆಚ್ಚು ರನ್ ಪೇರಿಸಿದ ಎರಡನೆ ಬ್ಯಾಟರ್ ಎನಿಸಿದ್ದಾರೆ.

ಕೋಲ್ಕತ್ತಾ ಬೌಲರ್‍ಗಳಾದ ಉಮೇಶ್ ಯಾದವ್, ಟಿಮ್ ಸೌಥಿ,  ಶಿವಂ ಮಾವಿ,  ಸುನಿಲ್ ನರೈನ್ ರಾಹುಲ್‍ಗೆ ಸವಾಲಾಗಲಿದ್ದಾರೆ.

ಇನ್ನುಳಿದ ಬ್ಯಾಟರ್‍ಗಳಾದ ಕ್ವಿಂಟಾನ್ ಡಿಕಾಕ್, ಆಯೂಷ್ ಬಡೋನಿ, ದೀಪಕ್ ಹೂಡಾ ಮತ್ತು ಕೃಣಾಲ್ ಪಾಂಡ್ಯ  ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು ಆಡಬೇಕಿದೆ.

ಕ್ವಿಂಟಾನ್ ಡಿಕಾಕ್ ಡೆಲ್ಲಿ ವಿರುದ್ಧ ಒಳ್ಳೆಯ ಆರಂಭ ನೀಡಿದರು ಆದರೂ ದೊಡ್ಡ ಇನ್ನಿಂಗ್ಸ್ ಆಡಬೇಕಿದೆ. ದೀಪಕ್ ಹೂಡಾ ಡೆಲ್ಲಿ  ವಿರುದ್ಧ ಅರ್ಧ ಶತಕ ಸಿಡಿಸಿದರು. ಆದರೂ ಸ್ಥಿರ ಪ್ರದರ್ಶನ ನೀಡಬೇಕಿದೆ.

ಇನ್ನು ಆಲ್ರೌಂಡರ್‍ಗಳಾದ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಜಾಸನ್ ಹೋಲ್ಡರ್ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ.

ವೇಗಿ ಮೊಹ್ಸಿನ್ ಖಾನ್ 4 ವಿಕೆಟ್ ಪಡೆದು ಮಿಂಚಿದ್ದರು. ಇನ್ನುಳಿದ ವೇಗಿಗಳಾದ ದುಷ್ಮಂತ್ ಚಾಮೀರಾ ಹಾಗೂ ಹೋಲ್ಡರ್ ಡೆಲ್ಲಿ  ವಿರುದ್ಧದ ಪಂದ್ಯದಲ್ಲಿ  ದುಬಾರಿ ಬೌಲರ್‍ಗಳಾಗಿದ್ದರು. ಸ್ಪಿನ್ನರ್ಸ್‍ಗಳಾದ  ರವಿ ಬಿಷ್ಣೋಯಿ ಮತ್ತು ಕೆ.ಗೌತಮ್ ಫಲಿತಾಂಶವನ್ನೆ ಬುಡಮೇಲು ಮಾಡುವ ತಾಕತ್ತು ಹೊಂದಿದ್ದಾರೆ.

ಇನ್ನು ಕೋಲ್ಕತ್ತಾ ತಂಡ  ಬ್ಯಾಟಿಂಗ್ ಸಮಸ್ಯೆಯಿಂದ ಹೊರಬಂದಿಲ್ಲ.  ಆರಂಭಿಕ ಬ್ಯಾಟರ್‍ಗಳು ಫಾರ್ಮ್‍ಗೆ ಮರಳಿಲ್ಲ.  ತಂಡದಲ್ಲಿ ಬದಲಾವಣೆ ಮಾಡಿದರೂ ತಂಡದ ಹಣೆಬರಹ ಬದಲಾಗಿಲ್ಲ. ಅ್ಯರಾನ್ ಫಿಂಚ್ ಹಾಗೂ ಬಾಬಾ ಇಂದ್ರಜೀತ್ ಉತ್ತಮ ಆರಂಬ ನೀಡಬೇಕಿದೆ.

ನಾಯಕ ಶ್ರೇಯಸ್ ಅಯ್ಯರ್ 10 ಪಂದ್ಯಗಳಿಂದ 324 ರನ್ ಸಿಡಿಸಿದ್ದಾರೆ. ಮೊನ್ನೆ ರಾಜಸ್ಥಾನ ವಿರುದ್ಧ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಸೋಟಕ ಬ್ಯಾಟಿಂಗ್ ಮಾಡಿ ಅಚ್ಚರಿ ನೀಡಿದ್ದರು. ಆ್ಯಂಡ್ರೆ ರಸೆಲ್ ಲಕ್ನೋ ಬೌಲಿಂಗ್ ದಾಳಿಯನ್ನು  ಧ್ವಂಸ ಮಾಡುವ ತಾಕತ್ತು ಹೊಂದಿದ್ದಾರೆ. ಮ್ನೊನೆ ರಾಜಸ್ಥಾನ ವಿರುದ್ಧ ಉಮೇಶ್ ಯಾದವ್ ಹಾಗೂ ಟಿಮ್ ಸೌಥಿ ಅದ್ಬುತವಾಗಿ ಬೌಲಿಂಗ್ ದಾಳಿ ಮಾಡಿ ರಾಜಸ್ಥಾನ ತಂಡವನ್ನು 152 ರನ್‍ಗಳಿಗೆ ಕಟ್ಟಿ ಹಾಕಿದ್ದರು.  ಸ್ಪಿನ್ನರ್ಸ್‍ಗಳಾದ ಸುನಿಲ್ ನರೈನ್ ಅನುಕೂಲ್ ರಾಯ್ ಚೆನ್ನಾಗಿ ಆಡುತ್ತಿದ್ದಾರೆ.

ಸಂಭವ್ಯ ಪ್ಲೇಯಿಂಗ್ ಇಲೆವೆನ್

ಲಕ್ನೊ ತಂಡ:  ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್) , ಕೆ.ಎಲ್.ರಾಹುಲ್ (ನಾಯಕ), ದೀಪಕ್ ಹೂಡಾ, ಕೃಣಾಲ್ ಪಾಂಡ್ಯ,ಮಾರ್ಕಸ್ ಸ್ಟೋಯ್ನಿಸ್ , ಆಯೂಷ್ ಬಡೋನಿ, ಜಾಸನ್ ಹೋಲ್ಡರ್, ದುಶ್ಮಂತ್  ಚಾಮೀರಾ, ಮೊಹ್ಸಿನ್ ಖಾನ್,  ಆವೇಶ್ ಖಾನ್, ರವಿ ಬಿಷ್ಣೋಯಿ.

ಕೋಲ್ಕತ್ತಾ ತಂಡ: ಬಾಬಾ ಇಂದ್ರಜೀತ್, ಆ್ಯರಾನ್ ಫಿಂಚ್,  ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಅನುಕೂಲ್ ರಾಯ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ.

ರಾಜಸ್ಥಾನಕ್ಕೆ ಪಂಜಾಬ್ ಸವಾಲು

ಇಂದು ಐಪಿಎಲ್‍ನಲ್ಲಿ  ಪಂಜಾಬ್ ತಂಡ ರಾಜಸ್ಥಾನ ತಂಡವನ್ನು ಎದುರಿಸಲಿದೆ.  ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ತಂಡ 10 ಪಂದ್ಯಗಳಿಂದ 6ರಲ್ಲಿ ಗೆದ್ದು 4ರಲ್ಲಿ ಸೋತು ಮೂರನೆ ಸ್ಥಾನದಲ್ಲಿದೆ. ಮಯಾಂಕ್ ಅಗರ್‍ವಾಲ್ ನೇತೃತ್ವದ ಪಂಜಾಬ್ ತಂಡ 10 ಪಂದ್ಯಗಳಲ್ಲಿ 5ರಲ್ಲಿ  5ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದಿದ್ದು ಇಂದಿನ ಪಂದ್ಯ ಮಹತ್ವದಾಗಿದೆ.

 

 

 

- Advertisement -

Latest Posts

Don't Miss