ಮುಂಬೈ: ಕ್ವಿಂಟಾನ್ ಡಿ’ಕಾಕ್ ಅವರ ಆಕರ್ಷಕ ಶತಕ ಹಾಗೂ ಸ್ಟೋಯ್ನಿಸ್ ಅವರ ಕೈಚಳಕದ ನೆರೆವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ವಿರುದ್ಧ 2 ರನ್ ಗಳ ರೋಚಕ ಗೆಲುವು ದಾಖಲಿಸಿತು. ವಿರೋಚಿತ ಸೋಲು ಅನುಭವಿಸಿದ ಕೋಲ್ಕತ್ತಾ ತಂಡ ಟೂರ್ನಿಯಿಂದ ಹೊರ ಬಿತ್ತು.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಲಕ್ನೊ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕೆ.ಎಲ್.ರಾಹುಲ್ ಹಾಗೂ ಕ್ವಿಂಟಾನ್ ಡಿಕಾಕ್ ಕೋಲ್ಕತ್ತಾ ಬೌಲರ್ಗಳನ್ನ ಚೆಂಡಾಡಿದರು.
ಸ್ಪೋಟಕ ಬ್ಯಾಟಿಂಗ್ ಮಾಡಿದ ಕ್ವಿಂಟಾನ್ ಡಿಕಾಕ್ 36 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ 59 ಎಸೆತದಲ್ಲಿ ಶತಕ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಕೆ.ಎಲ್,ರಾಹುಲ್ 41 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಕೆ.ಎಲ್ ರಾಹುಲ್ ಅಜೇಯ 68 ರನ್ ಹೊಡೆದರೆ, ಕ್ವಿಂಟಾನ್ ಡಿಕಾಕ್ 70 ಎಸೆತ ಎದುರಿಸಿ 10 ಬೌಂಡರಿ 10 ಸಿಕ್ಸರ್ ಹೊಡೆದು ಒಟ್ಟು 140 ರನ್ ಚಚ್ಚಿದರು. ಇವರಿಬ್ಬರ ಜೊತೆಯಾಟ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಜೊತೆಯಾಟವಾಡಿದ ದಾಖಲೆಯನ್ನು ಬರೆದರು.
ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 210 ರನ್ ಪೇರಿಸಿತು.
211 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಮೊಹ್ಸಿನ್ ದಾಳಿಗೆ ತತ್ತರಿಸಿ ಹೋಯಿತು. ವೆಂಕಟೇಶ್ ಅಯ್ಯರ್ 0, ತೊಮರ್ 4 ರನ್ ಗಳಿಸಿದರು.
ನಂತರ ಬಂದ ನಿತೀಶ್ ರಾಣಾ 42, ನಾಯಕ ಶ್ರೇಯಸ್ ಅಯ್ಯರ್ 50, ಸ್ಯಾಮ್ ಬಿಲ್ಲಿಂಗ್ಸ್ 36, ಆ್ಯಂಡ್ರೆ ರಸೆಲ್ 5, ರಿಂಕು ಸಿಂಗ್ 40, ಸುನಿಲ್ ನರೈನ್ 21 ರನ್ ಗಳಿಸಿದರು.
ಕೊನೆಯ ಓವರ್ನಲ್ಲಿ 21 ರನ್ ಬೇಕಿದ್ದಾಗ ಸ್ಟ್ರೈಕ್ ನಲ್ಲಿದ್ದ ರಿಂಕು ಸಿಂಗ್ ಸ್ಟೋಯ್ನಿಸ್ ಅವರ ಮೊದಲ ಮೂರು ಎಸೆತವನ್ನು ಬೌಂಡರಿಗೆ ಅಟ್ಟಿದರು. ನಂತರ ಎರಡು ಎಸೆತವನ್ನು ಸಿಕ್ಸರ್ ಹೊಡೆದರು.
ನಾಲ್ಕ ಎಸೆತದಲ್ಲಿ 2 ರನ್ ಓಡಿದರು. ಐದನೆ ಎಸೆತದಲ್ಲಿ ಔಟ್ ಸೈಡ್ ಆಫ್ ಸ್ಟಂಪ್ ನತ್ತ ಹೊಡೆದರು. ಬೌಂಡರಿ ಗೆರೆಯಲ್ಲಿದ್ದ ಎವಿನ್ ಲಿವೀಸ್ ಓಡಿ ಬಂದು ಒಂದೇ ಕೈಯಲ್ಲಿ ಕ್ಯಾಯಲ್ಲಿ ಆಕರ್ಷಕವಾಗಿ ಕ್ಯಾಚ್ ಹಿಡಿದರು. ಇದು ಇಡೀ ಪಂದ್ಯದ ಗತಿಯನ್ನೆ ಬದಲಿಸಿಬಿಡ್ತು.
ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿತ್ತು. ಸ್ಟೈಕ್ ಗೆ ಬಂದ ಉಮೇಶ್ ಯಾದವ್ ಅವರನ್ನು ಸ್ಟೋಯ್ನಿಸ್ ಬೌಲ್ಡ್ ಮಾಡಿ ತಂಡಕ್ಕೆ 2 ರನ್ ಗಳ ರೋಚಕ ಗೆಲುವು ತಂದುಕೊಟ್ಟರು.
ಸ್ಟೋನಿಸ್ ಹಾಗೂ ಮೊಹ್ಸಿನ್ ಖಾನ್ ತಲಾ 3 ವಿಕೆಟ್ ಪಡೆದರು.ಕೆ.ಗೌತಮ್ ಹಾಗೂ ರವಿ ಬಿಷ್ಣೊಯಿ ತಲಾ 1 ವಿಕೆಟ್ ಪಡೆದರು. ಶತಕ ಸಿಡಿಸಿದ ಕ್ವಿಂಟಾನ್ ಡಿಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.