ಮುಂಬೈ:ಐಪಿಎಲ್ನ 63ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಎರಡೂ ತಂಡಗಳು ಪ್ಲೇ ಆಫ್ಗೆ ಪ್ರವೇಶ ಪಡೆಯಲು ಹೋರಾಡಲಿವೆ. ಈ ಕಾರಣಕ್ಕಾಗಿ ಈ ಪಂದ್ಯ ಮಹತ್ವ ಪಡೆದಿದೆ.
ಲಕ್ನೊ ತಂಡ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 4ರಲ್ಲಿ ಸೋತು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದೆ.
ರಾಜಸ್ಥಾನ ತಂಡ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 5ರಲ್ಲಿ ಸೋತು 14 ಅಂಕಗಳೊಂದಿಗೆ ಮೂರನೆ ಸ್ಥಾನದಲ್ಲಿದೆ. ಈ ಪಂದ್ಯವನ್ನು ಕೈಚೆಲ್ಲಿದರೆ ಎರಡೂ ತಂಡಗಳು ಪ್ಲೇ ಆಫ್ ಪ್ರವೇಶಿಸಲು ಬೇರೆ ತಂಡಗಳ ಫಲಿತಾಂಶವನ್ನು ನೆಚ್ಚಿಕೊಳ್ಳಬೇಕಾಗುತ್ತದೆ.
ಉಭಯ ತಂಡಗಳ ಯಶಸ್ಸು ಆಡುವ ಅತ್ಯುತ್ತಮ ಹನ್ನೊಂದರ ಬಳಗದ ಮೇಲೆ ನಿಂತಿದೆ. ಲಕ್ನೊ ತಂಡ ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆಯನ್ನು ಕಣಕ್ಕಿಳಿಸಿತ್ತು. ಆದರೆ ಯಶಸ್ಸು ಸಿಗಲಿಲ್ಲ. ತಂಡದಲ್ಲಿ ಒಳ್ಳೆಯ ಆಲ್ರೌಂಡರ್ ಗಳಿದ್ದರೂ ತಂಡದ ಪ್ರದರ್ಶನ ಹೇಳಿಕೊಳ್ಳುವ ರೀತಿಯಲ್ಲಿಲ್ಲ.
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟರ್ ಎವಿನ್ ಲಿವೀಸ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ.
ಇನ್ನು ರಾಜಸ್ಥಾನ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಶಿಮ್ರಾನ್ ಹೇಟ್ಮಯರ್ ರನ್ ಮಳೆ ಸುರಿಸಿದರು. ಹೇಟ್ಮಯರ್ ಆಡುತ್ತಿಲ್ಲ. ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ ಪಡಿಕಲ್ ಫಾರ್ಮ್ ತೋರಿಸುತ್ತಿದ್ದಾರೆ.
ಆರ್ ಅಶ್ವಿನ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೇಮ್ಸ್ ನಿಶಾಮ್ ಅಥವಾ ಕುಲದೀಪ್ ಸೇನ್ ಅವರನ್ನು ಕಣಕ್ಕಿಳಿಸುತ್ತಾರಾ ಅನ್ನೊದನ್ನ ಕಾದು ನೋಡಬೇಕಿದೆ.