ಮುಂಬೈ: ಐಪಿಎಲ್‍ನ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬಲಿಷ್ಠ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ಕದನ ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡ ಆಡಿದ ಎಲ್ಲಾ ಐದು ಪಂದ್ಯಗಳನ್ನು ಕೈಚೆಲ್ಲಿದೆ.
ಇನ್ನು ಮುಂದಿನ ನಾಲ್ಕು ಪಂದ್ಯಗಳನ್ನು ಕೈಚೆಲ್ಲಿದರೆ ಪ್ಲೇ ಆಫ್ ಹಾದಿ ದುರ್ಗಮವಾಗಲಿದೆ. ಆದರೆ ಈ ಹಿಂದೆ ಇದೆ ಸ್ಥಾನದಿಂದ ಎದ್ದು ಬಂದು ಟ್ರೋಫಿ ಗೆದ್ದಿದ್ದು ಇತಿಹಾಸ. ಈ ಅಂಶ ಮುಂಬೈ ಇಂಡಿಯನ್ಸ್ ಪ್ರೇರಣೆಯಾಗಬೇಕಿದೆ.
ಮುಂಬೈ ತಂಡದ ಮಧ್ಯಮ ಕ್ರಮಾಂಕದಲ್ಲಿ ಅನ್‍ಕ್ಯಾಪಡ್ ಆಟಗಾರರಾದ ಡೇವಾಲ್ಡ್ ಬ್ರೇವಿಸ್ ಹಾಗೂ ತಿಲಕ್ ವರ್ಮಾರಂತಹ ಇಬ್ಬರು ಪ್ರತಿಭಾನ್ವಿತರನ್ನು ಗುರುತಿಸಿದೆ. ಸೂರ್ಯ ಕುಮಾರ್ ಯಾದವ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ.
ಆದರೆ ಕಿರಾನ್ ಪೊಲಾರ್ಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರಿಂದ ಸ್ಫೋಟಕ ಬ್ಯಾಟಿಂಗ್ ಮೂಡಿಬಂದಿಲ್ಲ. ಇದೇ ಕಾರಣ ಮುಂಬೈ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕುಳಿತಿದೆ.
ಇನ್ನು ಬೌಲಿಂಗ್ ವಿಭಾಗ ಕೂಡ ನೆಲ ಕಚ್ಚಿದೆ. ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ಆಡದಿರುವುದು ತಂಡಕ್ಕೆ ಹಿನ್ನಡೆಯಾಗಿದೆ.
ಇನ್ನು ಕೆ.ಎಲ್.ರಾಹುಲ್ ನೇತೃತ್ವದ ಲಕ್ನೊ ತಂಡ ಆಡಿದ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2 ಪಂದ್ಯಗಳನ್ನು ಕೈಚೆಲ್ಲಿದೆ. ನಾಯಕ ಕೆ.ಎಲ್.ರಾಹುಲ್ ಒಳ್ಳೆಯ ಫಾರ್ಮ್‍ನಲಿ ಇಲ್ಲದೇ ಇರುವುದು ತಂಡಕ್ಕೆ ಹಿನಡೆಯಾಗಿದೆ.
ಆಯೂಷ್ ಬಡೋನಿ, ದೀಪಕ್ ಹೂಡಾ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಒಳ್ಳೆಯ ಬ್ಯಾಟಿಂಗ್ ಲೈನ್‍ಅಪ್ ಹೊಂದಿದೆ.
ಬೌಲಿಂಗ್ ವಿಭಾಗ ಅದ್ಬುತವಾಗಿದ್ದು ವೇಗಿ ಆವೇಶ್ ಖಾನ್, ದುಶ್ಮಂತ್ ಚಾಮೀಆ ಹಾಗೂ ಜಾಸನ್ ಹೋಲ್ಡರ್ ಇದ್ದಾರೆ.