ಮುಂಬೈ: ಸತತ ಐದು ಪಂದ್ಯಗಳನ್ನು ಕೈಚೆಲ್ಲಿದ ಹೊರತಾಗಿಯೂ ಪ್ಲೇಆಫ್ ನಿರೀಕ್ಷೆಯಲ್ಲಿರುವ ಸನ್‍ರೈಸರ್ಸ್ ತಂಡ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್‍ರೈಸರ್ಸ್‍ಗೆ ಮತ್ತೊಂದು ಅಗ್ನಿ ಪರೀಕ್ಷೆಯಾಗಿದೆ. ಕೇನ್ ಪಡೆ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಇಂದಿನ ಪಂದ್ಯ ಸೇರಿ ಮತ್ತೊಂದು ಪಂದ್ಯವನ್ನು ಗೆದ್ದರೆ ಕೇನ್ ಪಡೆ ಅಂಕಪಟ್ಟಿಯಲ್ಲಿ 14 ಅಂಕ ಸಂಪಾದಿಸಲಿದೆ. ನಂತರ ಬೇರೆ ತಂಡಗಳ ಫಲಿತಾಂಶಗಳ ಆಧಾರದ ಮೇಲೆ ಪ್ಲೇ ಆಫ್ ಹಾದಿ ನಿರ್ಧಾರವಾಗಲಿದೆ.
ಒಂದು ವೇಳೆ ಇಂದಿನ ಪಂದ್ಯವನ್ನು ಸೋತರೆ ಸನ್‍ರೈಸರ್ಸ್ ಟೂರ್ನಿಯಿಂದ ನಿರ್ಗಮಿಸಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸನ್‍ರೈಸರ್ಸ್ ಸಾಮರ್ಥ್ಯವನ್ನು ತೋರಿಸಬೇಕಿದೆ. ನಾಯಕ ಕೇನ್ ವಿಲಿಯಮ್ಸನ್ ಫಾರ್ಮ್ ಕಳೆದುಕೊಂಡಿದ್ದಾರೆ. 12 ಪಂದ್ಯಗಳಿಂದ ಕೇವಲ 208 ರನ್ ಗಳಿಸಿದ್ದಾರೆ.
ಇವರ ಸಹ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಬೇಕಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್‍ಗಳು ಸೋಟಕ ಬ್ಯಾಟಿಂಗ್ ಮಾಡಬೇಕಿದೆ. ರಾಹುಲ್ ತ್ರಿಪಾಠಿ, ಏಡಿನ ಮಾರ್ಕ್‍ರಾಮ್ ಹಾಗೂ ನಿಕೊಲೊಸ್ ಪೂರಾನ್‍ಗೆ ಸ್ಥಿರ ಪ್ರದರ್ಶನ ನೀಡುವುದೆ ದೊಡ್ಡ ಸಮಸ್ಯೆಯಾಗಿದೆ.
ಫಿನಿಶರ್‍ಗಳಾಗಿರುವ ವಾಷಿಂಗ್ಟನ್ ಸುಂದರ್ ಹಾಗೂ ಶಶಾಂಕ್ ಸಿಂಗ್ ಅವರ ಜವಾಬ್ದಾರಿ ಕೂಡ ಕಠಿಣವಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಉಮ್ರಾನ್ ಮಲ್ಲಿಕ್ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಇನ್ನುಳಿದ ವೇಗಿಗಳಾದ `ಭುವನೇಶ್ವರ್ ಕುಮಾರ್, ಮಾರ್ಕೊ ಹನ್ಸನ್ ರೋಹಿತ್ ಶರ್ಮಾ ಅವರನ್ನು ಕಟ್ಟಿಹಾಕಬಹುದಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ನಟರಾಜನ್ ಕೂಡ ಮುಂಬೈ ಬ್ಯಾಟರ್‍ಗಳಿಗೆ ಸವಾಲಾಗಲಿದ್ದಾರೆ.
ಮುಂಬೈ ಬ್ಯಾಟರ್‍ಗಳನ್ನು ವೇಗಿ ಉಮ್ರಾನ್ ಮಲ್ಲಿಕ್ ಕಾಡಲಿದ್ದಾರೆ.
ಮೊನ್ನೆ ಚೆನ್ನೈ ವಿರುದ್ಧ ಮುಂಬೈ 97 ರನ್‍ಗಳ ಅಂತರದಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.ಮುಂಬೈಗೆ ಆರಂಭಿಕ ಬ್ಯಾಟರ್ ಇಶನ್ ಕಿಶನ್ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅದ್ಬುತ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದಾರೆ. ಡೇನಿಲಿಯಲ್ ಸ್ಯಾಮ್ಸ್ , ಟಿಮ್ ಡೇವಿಡ್, ಟ್ರಸ್ಟನ್ ಸ್ಟಬ್ಸ್ ಮತ್ತು ರಮಣದೀಪ್ ಸಿಂಗ್‍ಗೆ ಸನ್‍ರೈಸರರಸ್ ಬೌಲಿರ್‍ಗಳು ದೊಡ್ಡ ಕಂಟಕವಾಗಲಿದ್ದಾರೆ.
ಡೇನಿಯಲ್ ಸ್ಯಾಮ್ಸ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ರಿಲೆ ಮರ್ಡಿತ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸ್ಪಿನ್ನರ್ ಕುಮಾರ್ ಕಾರ್ತಿಕೇಯಾ ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಕಬಳಿಸಿ ತಂಡದ ಗೆಲುವನ್ನು ಸುಲಭಗೊಳಿಸುತ್ತಿದ್ದಾರೆ.
ಸಂಭವ್ಯ ಪ್ಲೇಯಿಂಗ್ ಇಲೆವೆನ್
ಮುಂಬೈ ತಂಡ: ಇಶನ್ ಕಿಶನ್ (ವಿಕೆಟ್ ಕೀಪರ), ರೋಹಿತ್ ಶರ್ಮಾ (ನಾಯಕ),
ಡೇನಿಯಲ್ ಸ್ಯಾಮ್ಸ್, ತಿಲಕ್ ವರ್ಮಾ, ಟ್ರಿಸ್ಟನ್ ಸ್ಟಬ್ಸ್, ಹೃತಿಕ್ ಶೋಕಿನ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರ್ಡಿತ್, ಕುಮಾರ್ ಕಾರ್ತಿಕೇಯಾ.
ಸನ್‍ರೈಸರ್ಸ್ ತಂಡ: ಅಭಿಷೇಕ್ ಶರ್ಮಾ, ರೋಹಿತ್ ಶರ್ಮಾ (ನಾಯಕ), ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕ್‍ರಾಮ್, ನಿಕೊಲೊಸ್ ಪೂರಾನ್, ವಾಷಿಂಗ್ಟನ್ ಸುಂದರ್,ಶಶಾಂಕ್ ಸಿಂಗ್, ಮಾರ್ಕೊ ಹನ್ಸನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್,