Sunday, June 1, 2025

Latest Posts

ಲಕ್ನೋ, ಪಂಜಾಬ್ ನಡುವೆ ಯಾರು ಕಿಂಗ್ ? 

- Advertisement -

ಪುಣೆ: ಐಪಿಎಲ್ನನಲ್ಲಿಂದು ಬಲಿಷ್ಠ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಹಾಕಿದೆ.

ಐಪಿಎಲ್‍ನ 42ನೇ ಪಂದ್ಯದಲ್ಲಿ  ಪಂಜಾಬ್ ತಂಡ ಬಲಿಷ್ಠ  ಲಕ್ನೊ ತಂಡವನ್ನು  ಎದುರಿಸಲಿದೆ.

ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಪಂಜಾಬ್ ತಂಡಕ್ಕೆ ಅಗ್ನಿ ಪರೀಕ್ಷೆಯಾಗಿದೆ.

ಮೊನ್ನೆ ಚೆನ್ನೈ ವಿರುದ್ಧ  ಗೆದ್ದಿದ್ದ ಪಂಜಾಬ್ 8 ಪಂದ್ಯಗಳಲ್ಲಿ  4ರಲ್ಲಿ ಗೆದ್ದು 4ರಲ್ಲಿ ಸೋತು ಅಂಕಪಟ್ಟಿಯಲ್ಲಿ ಆರನೆ ಸ್ಥಾನ ಪಡೆದಿದೆ.  ಲಕ್ನೊ ತಂಡ 8 ಪಂದ್ಯಗಳಿಂದ 5ರಲ್ಲಿ  ಗೆದ್ದು 3ರಲ್ಲಿ ಸೋತು  ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದೆ.  ಲಕ್ನೊ ತಂಡಕ್ಕೆ ಈ ಪಂದ್ಯ ಬಹಳ ಮಹತ್ವದಾಗಿದೆ. ಈ ಕಾರಣಕ್ಕಾಗಿ ಕನ್ನಡಿಗರಿಬ್ಬರ ಕದನ ಮಹತ್ವ ಪಡೆದುಕೊಂಡಿದೆ.

ಪಂಜಾಬ್ ತಂಡ ನಿರೀಕ್ಷಿತಾ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ. ಓಪನರ್ ಶಿಖರ್ ದವನ್ ಒಳ್ಳೆಯ ಫಾರ್ಮ ನಲ್ಲಿದ್ದಾರೆ. ರಾಜಪಕ್ಸ ತಂಡದ ಬ್ಯಾಟಿಂಗ್ಗೆ ಶಕ್ತಿ ತುಂಬಿದ್ದಾರೆ. ಲಿಯಾಮ್ ಲಿವೀಂಗ್ ಸ್ಟೋನ್ ಫಾರ್ಮಗೆ ಮರಳಿದ್ದಾರೆ. ವೇಗಿ ರಿಷಿ ಧವನ್ ಚಮತ್ಕಾರ ಮಾಡುತ್ತಿದ್ದಾರೆ. ಸ್ಟಾರ್ ಬೌಲರ್ ರಬಾಡ, ಆರ್ಷದೀಪ್, ಸಂದೀಪ್ ಶರ್ಮಾ, ರಾಹುಲ್ ಚಾಹರ್ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಲಕ್ನೊ ತಂಡ ಮೊನ್ನೆ ಮುಂಬೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ನಾಯಕ ರಾಹುಲ್ ಎರಡನೆ ಶತಕ ಸಿಡಿಸಿದರು. ಆದರೆ ತಂಡದ ಇತರೆ ಆಟಗಾರರಾದ ಕ್ವಿಂಟಾನ್ ಡಿಕಾಕ್, ಮನೀಶ್ ಪಾಂಡೆ,  ದೀಪಕ್ ಹೂಡಾ, ಕೃಣಾಲ್ ಪಾಂಡ್ಯ ಸಿಡಿಯುತ್ತಿಲ್ಲ. ಆಯೂಷ್ ಬದೋನಿ ಬ್ಯಾಟ್ನಿಂದ ರನ್ ಬರುತ್ತಿಲ್ಲ.

ಬೌಲಿಂಗ್ ವಿಭಾಗದಲ್ಲಿ  ಲಕ್ನೊ ಸುಧಾರಿಸಬೇಕಿದೆ. ದುಶ್ಮಾಂತಾ ಚಾಮೀರಾ, ಮೊಹ್ಸಿನ್ ಖಾನ್, ಸ್ಟೋಯ್ನಿಸ್ ಬೌಲಿಂಗ್ನಲ್ಲಿ ಕಮಾಲ್ ಮಾಡಬೇಕು. ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯಿ ಹಾಗೂ ಕೃಣಾಲ್ ಪಾಂಡ್ಯ ಕೈಚಳಕ ತೋರಿಸಬೇಕಿದೆ. ಕೃಣಾಲ್ ವಿಫಲರಾಗುತ್ತಿರುವುದರಿಂದ ಮನನ್ ವೋಹ್ರಾ ಆಡಲು ಸಜ್ಜಾಗಿದ್ದಾರೆ.

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸ, ಲಿಯಾಮ್ ಲಿವಿಂಗ್ ಸ್ಟೋನ್, ಜಾನಿ ಭೈರ್ ಸ್ಟೋ, ಜಿತೇಶ್ ಶರ್ಮಾ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಆರ್ಷದೀಪ್ ಮತ್ತು ಸಂದೀಪ್ ಶರ್ಮಾ.

ಲಕ್ನೊ ಸೂಪರ್ ಜೈಂಟ್ಸ್: ಕೆ.ಎಲ್.ರಾಹುಲ್ (ನಾಯಕ), ಕ್ವಿಂಟಾನ್ ಡಿಕಾಕ್, ಮನನ್ ವೋಹ್ರಾ, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃಣಾಲ್ ಪಾಂಡ್ಯ, ಜಾಸನ್ ಹೋಲ್ಡರ್, ರವಿ ಬಿಷ್ಣೋಯಿ, ದುಷ್ಮಂತ ಚಮೀರಾ ಹಾಗೂ ಅವೇಶ್ ಖಾನ್.

 

- Advertisement -

Latest Posts

Don't Miss