ಮುಂಬೈ:ಐಪಿಎಲ್ ನ 58ನೇ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನ ಎದುರಿಸಲಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನಕ್ಕೆ ಈ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಇತ್ತ ಮೊನ್ನೆಯಷ್ಟೆ ಚೆನ್ನೈ ವಿರುದ್ಧ ಸೋತ ಡೆಲ್ಲಿ ತಂಡ ಪ್ಲೇ ಆಫ್ ಪ್ರವೇಶಿಸಬೇಕಿದ್ದಲ್ಲಿ ಆಡುವ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಡೆಲ್ಲಿ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ.
ಡೆಲ್ಲಿ ತಂಡ 11 ಪಂದ್ಯಗಳಿಂದ 6 ಪಂದ್ಯಗಳನ್ನು ಕೈಚೆಲ್ಲಿದೆ. ಅಂಕಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹಾಗೂ ಪಂಜಾಬ್ ತಂಡಗಳು ಕೂಡ 10 ಅಂಕಗಳನ್ನು ಪಡೆದಿವೆ.
ಡೆಲ್ಲಿ ತಂಡದ ನೆಡ್ ರನ್ ರೇಟ್ (0.150) ಸಕಾರಾತ್ಮಕತೆಯಿಂದ ಹೊಂದಿದೆ. ಪ್ಲೇ ಆಫ್ಗೆ ಹೋಗಬೇಕಿದ್ದಲ್ಲಿ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ.
ಇತ್ತ ಅಂಕಪಟ್ಟಿಯಲ್ಲಿ 14 ಅಂಕಪಡೆದಿರುವ ರಾಜಸ್ಥಾನ ಮೂರನೆ ಸ್ಥಾನದಲ್ಲಿದೆ. 0.326 ನೆಟ್ ರನ್ ರೇಟ್ ಹೊಂದಿದ್ದು ಪ್ಲೇ ಆಫ್ ಗೆ ಎಂಟ್ರಿ ಕೊಡಲು ಎರಡು ಗೆಲುವುಗಳು ಬೇಕಿದೆ.
ಡೆಲ್ಲಿ ತಂಡ ಈ ಸೀಸನ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಇತರೆ ಆಟಗಾರರಿಗೆ ಸ್ಪೂರ್ತಿ ತುಂಬಿದರು. ಖಲೀಲ್ ಅಹ್ಮದ್ ಹಾಗೂ ಅಕ್ಷರ್ ಪಟೇಲ್ ಚೆನ್ನಾಗಿ ಬೌಲಿಂಗ್ ಮಾಡಿದರು.
ಡೇವಿಡ್ ವಾರ್ನರ್ ಚೆನ್ನಾಗಿ ಆಟವನ್ನು ಆನಂದಿಸಿದರು.ಪೃಥ್ವಿ ಶಾ, ಮಂದೀಪ್ ಸಿಂಗ್ ಹಾಗೂ ಶ್ರೀಕರ್ ಭರ ತ್ಗೆ ಪಾಠ ಹೇಳಿಕೊಟ್ಟರು. ನಾಯಕ ರಿಷಭ್ ಪಂತ್ ಫಾರ್ಮ್ ಸಮಸ್ಯೆಯಿಂದ ಬಳಲಿದ್ದಾರೆ.
ಇನ್ನು ರಾಯಲ್ಸ್ ತಂಡದಲ್ಲಿ ಚಹಲ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಟ್ರೆಂಟ್ ಬೌಲ್ಟ್,ಅಶ್ವಿನ್, ಪ್ರಸಿದ್ಧ ಕೃಷ್ಣ ಎಂತಹ ಕಡಿಮೆ ಮೊತ್ತವನ್ನು ರಕ್ಷಣೆ ಮಾಡುವ ತಾಕತ್ತು ಹೊಂದಿದ್ದಾರೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಸಂಜು ಸ್ಯಾಮ್ಸನ್ ಹಾಗೂ ದೇವದತ್ ಪಡಿಕಲ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಿಮ್ರಾನ್ ಹೇಟ್ಮಯರ್ ತಂಡಕ್ಕೆ ಅಲಭ್ಯರಾಗಿರುವುದು ದೊಡ್ಡ ಹಿನ್ನಡೆಯಾಗಿದೆ.