ಮುಂಬೈ:ಯಜ್ವಿಂದರ್ ಚಾಹಲ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‍ಗಳ ರೋಚಕ ಗೆಲುವು ಪಡೆದಿದೆ.
ಬಾಬೋರ್ನ್ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಕದನದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ಜೋಸ್ ಬಟ್ಲರ್(103) ಹಾಗೂ ದೇವದತ್ ಪಡಿಕಲ್(24) ಮೊದಲ ವಿಕೆಟ್‍ಗೆ 97 ರನ್‍ಗಳ ಭರ್ಜರಿ ಆರಂಭ ನೀಡಿದರು.
ನಾಯಕ ಸಂಜು ಸ್ಯಾಮ್ಸನ್ 38, ಶಿಮ್ರಾನ್ ಹೇಟ್ಮಯರ್ ಅಜೇಯ 26 ರನ್ ಗಳಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್, ಮೊದಲಿಗೆ 29 ಎಸೆತದಲ್ಲಿ ಅರ್ಧ ಶತಕ ನಂತರ 59 ಎಸೆತದಲ್ಲಿ ಶತಕ ಪೂರೈಸಿದರು.
ರಿಯಾನ್ ಪರಾಗ್ 5, ಕರುಣ್ ನಾಯರ್ 3 ನ್ ಆರ್.ಅಶ್ವಿನ್ ಅಜೇಯ 2 ರನ್ ಗಳಿಸಿದರು. ರಾಜಸ್ಥಾನ ತಂಡ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 217 ರನ್ ಕಲೆ ಹಾಕಿತು.
218ರನ್‍ಗಳ ಬಿಗ್ ಟಾರ್ಗೆಟ್ ಬೆನತ್ತಿದ ಕೋಲ್ಕತ್ತಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸುನಿಲ್ ನರೈನ್ 0 ರನ್‍ಗಳಿಸಿದರು. ಎರಡನೆ ವಿಕೆಟ್‍ಗೆ ಜೊತೆಗೂಡಿದ ಆರಾನ್ ಫಿಂಚ್ 58 ಹಾಗೂ ಶ್ರೇಯಸ್ ಅಯ್ಯರ್ 85 ರನ್ ಗಳಿಸಿದರು.
ನಿತಿಶ್ ರಾಣಾ 18, ಆಂಡ್ರೆ ರಸೆಲ್ 0, ವೆಂಕಟೇಶ್ ಅಯ್ಯರ್ 6, ಶೆಲ್ಡನ್ ಜಾಕ್ಸನ್ 8 ಉಮೇಶ್ ಯಾದವ್ 21 ರನ್ ಗಳಿಸಿದರು. ಕೋಲ್ಕತ್ತಾ ತಂಡ 19.4 ಓವರ್‍ಗಳಲ್ಲಿ 210 ರನ್‍ಗಳಿಗೆ ಆಲೌಟ್ ಆಯಿತು. 5 ವಿಕೆಟ್ ಪಡೆದ ಚಾಹಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.