ಮುಂಬೈ:ಲೆಗ್ ಸ್ಪಿನ್ನರ್ ಯಜ್ವಿಂದರ್ ಚಾಹಲ್ ಐಪಿಎಲ್‍ನ ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾರೆ. ಆರ್‍ಆರ್ ತಂಡದ ಸಂರ್ಶನದಲ್ಲಿ ಆಘಾತಕಾರಿ ವಿಚಾರವೊಂದನ್ನ ಹೇಳಿಕೊಂಡಿದ್ದಾರೆ.
ಚಾಹಲ್ ಇದುವರೆಗೂ ಯಾರ ಬಳಿಯೂ ಹೇಳಿಕೊಳ್ಳದ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಈ ಸಂದರ್ಶನದಲ್ಲಿ ಅಶ್ವಿನ್ ಹಾಗೂ ಕನ್ನಡಿಗ ಕರುಣ್ ನಾಯರ್ ಇದ್ದರು. ತಮ್ಮ ಅನುಭವವನ್ನು ಚಾಹಲ್ ಹೇಳಿದ್ದು ಹೀಗೆ, ಇದು 2013ರಲ್ಲಿ ನಡೆದ ಘಟನೆ. ನಾನಾಗ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿದ್ದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಮುಗಿದ ಬಳಿಕ ಗೆಟ್ ಟುಗೆದರ್ ಪಾರ್ಟಿ ಇತ್ತು.
ಅದರಲ್ಲಿ ಒಬ್ಬ ಆಟಗಾರ ಅತಿಯಾಗಿ ಮದ್ಯ ಸೇವಿಸಿದ್ದ. ಅವನ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ತುಂಬಾ ಕುಡಿದಿದ್ದ ಆ ಆಟಗಾರ ಕೆಲ ಹೊತ್ತು ನನ್ನನ್ನೆ ನೋಡುತ್ತಿದ್ದ ನಂತರ ಇಲ್ಲಿಗೆ ಬಾ ಎಂದು ನನ್ನನ್ನ ಕರೆದ. ನಾನು ಆತನ ಸಮೀಪಕ್ಕೆ ಹೋದೆ. ಆತ ನನ್ನನ್ನು ಬಾಲ್ಕನಿಯಲ್ಲಿ ನೇತು ಹಾಕಿದ.
ನನ್ನ ಎರಡು ಕೈಗಳನ್ನು ಲಾಕ್ ಮಾಡಿದ್ದ. ಕೆಳಗೆ ನೊಡಿದರೆ 15ನೇ ಮಹಡಿ ಆಗಿತ್ತು. ಆ ಸಂದರ್ಬದಲ್ಲಿ ಇತರೆ ಆಟಗಾರರು ತಕ್ಷಣವೇ ಇದನ್ನು ಗಮನಿಸಿ ನನ್ನ ಬಳಿ ಬಂದು ನನ್ನನ್ನು ರಕ್ಷಿಸಿದರು.
ಸ್ವಲ್ಪ ಹೆಚ್ಚು ಕಡಿಮೆ ಆದರೂ ದುರಂತ ನಡೆದು ಹೋಗುತ್ತಿತ್ತು. ನಾನು ಮೂರ್ಛೆ ಹೋದೆ. ಆಟಗಾರರು ನೀರು ಕೊಟ್ಟು ಉಪಚರಿಸಿದರು. ನಾವು ಎಲ್ಲಿಗಾದರೂ ಹೋದಾಗ ಜಾಗೃತೆಯಿಂದ ಇರಬೇಕೆಂಬುದು ಈ ಘಟನೆಯಿಂದ ಅರಿವಾಯಿತೆಂದು ಚಾಹಲ್ ತಿಳಿಸಿದ್ದಾರೆ.