Wednesday, July 2, 2025

Latest Posts

ಇಂದು ಆರ್‍ಸಿಬಿಗೆ ಚೆನ್ನೆ ಕಿಂಗ್ಸ್ ಸವಾಲು

- Advertisement -

ಮುಂಬೈ: ಐಪಿಎಲ್‍ನ ಎರಡು ಬಲಿಷ್ಠ ತಂಡಗಳಾದ ಆರ್‍ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಗುತ್ತಿವೆ.
ಮಂಗಳವಾರ ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕದನ ಹೈವೋಲ್ಟೇಜ್‍ನಿಂದ ಕೂಡಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿ ಅಡಿದ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು 1 ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ.


ಇನ್ನು ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ನಾಲ್ಕು ಪಂದ್ಯಗಳನ್ನೂ ಸೋತು ಭಾರೀ ನಿರಾಸೆ ಅನುಭÀವಿಸಿದ್ದು ಮೊದಲ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ಮಾಡುತ್ತಿದೆ.

ಗೆಲುವಿನ ನಾಗಲೋಟ ಮುಂದುವರೆಸಲು ಆರ್‍ಸಿಬಿ ಪ್ಲ್ಯಾನ್
ಆರ್‍ಸಿಬಿ ತಂಡಕ್ಕೆ ಆಲ್ರೌಂಡರ್ ಮ್ಯಾಕ್ಸ್‍ವೆಲ್ ಹಾಗೂ ಜೋಶ್ ಹೆಜ್ಲವುಡ್ ಆಗಮನ ತಂಡಕ್ಕೆ ಆನೆ ಬಲ ಬಂದಿದೆ. ನಾಯಕ  ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಅನೂಜ್ ರಾವತ್ ಫಾರ್ಮ್‍ಗೆ ಮರಳಿರುವುದು ತಂಡಕ್ಕಿದ್ದ ಚಿಂತೆ ದೂರವಾಗಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ 48 ರನ್ ಗಳಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ ಸ್ಫೋಟಕ ಬ್ಯಾಟಿಂಗ್ ಮಾಡಬೇಕು.

ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಹರ್ಷಲ್ ಪಟೇಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ವೇಗಿಗಳಾದ ಸಿದ್ದಾರ್ಥ್ ಕೌಲ್ ಅಥವಾ ಚಾಮ ಮಿಲಿಂದ್ ಆಡಬಹುದಾಗಿದೆ.

ಆರ್‍ಸಿಬಿ ಹಾಗೂ ಚೆನ್ನೈ ಇದುವರೆಗೂ 28 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 18 ಬಾರಿ ಗೆದ್ದು ಪಾರಮ್ಯ ಮೆರೆದರೆ ಆರ್‍ಸಿಬಿ 9 ಬಾರಿ ಮಾತ್ರ ಗೆಲುವು ದಾಖಲಿಸಿದೆ.

ಚೆನ್ನೆ ೈಗೆ ಬೇಕು ಗೆಲುವಿನ ಮಂದಹಾಸ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಕಾರಣವಾಗಿದೆ. ಆರಂಭಿಕ ಬ್ಯಾಟರ್‍ಗಳಾದ ರಾಬಿನ್ ಉತ್ತಪ್ಪ ಹಾಗೂ ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿಲ್ಲ.

ಮೊಯಿನ್ ಅಲಿ, ಶಿವಂ ದುಬೆ, ಅಂಬಾಟಿ ರಾಯ್ಡು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ನಾಯಕ ರವೀಂದ್ರ ಜಡೇಜಾ ಹಾಗೂ ಧೋನಿ ಕಠಿಣ ಸವಾಲನ್ನು ಎದುರಿಸಿ ತಂಡದ ಮೊತ್ತ ಹೆಚ್ಚಿಸಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಮುಕೇಶ್ ಚೌಧÀರಿ, ಶಿವಂ ದುಬೆ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ ವಿಕೆಟ್ ಕೀಳಲು ಪರದಾಡುತ್ತಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಆರ್‍ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ಅನೂಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್, ದಿನೇಶ್ ಕಾರ್ತಿಕ್, ಶಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಸಿದ್ದಾರ್ಥ್ ಕೌಲ್, ಮೊಹ್ಮದ್ ಸಿರಾಜ್, ಆಕಾಶ್ ದೀಪ್.

ಚೆನ್ನೈ ತಂಡ: ರಾಬಿನ್ ಉತ್ತಪ್ಪ, ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಾಟಿ ರಾಯ್ಡು, ಶಿವಂ ದುಬೆ, ರವೀಂದ್ರ ಜಡೇಜಾ (ನಾಯಕ), ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ಡ್ವೇನ್ ಪ್ರಿಟೋರಿಯಸ್, ಕ್ರಿಸ್ ಜೋರ್ಡನ್, ಮುಖೇಶ್ ಚೌಧÀರಿ.

 

 

- Advertisement -

Latest Posts

Don't Miss