ಪುಣೆ: ಹ್ಯಾಟ್ರಿಕ್ ಸೋಲು ಕಂಡಿರುವ ಆರ್ಸಿಬಿ ಡು ಆರ್ ಡೈ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ ಆರ್ಸಿಬಿಗೆ ಅಗ್ನಿ ಪರೀಕ್ಷೆಯಾಗಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ 10 ಪಂದ್ಯಗಳಿಂದ 5ರಲ್ಲಿ ಗೆದ್ದು 5ರಲ್ಲಿ ಸೋಲು ಕಂಡಿದೆ.ಇನ್ನು ಚೆನ್ನೈ ತಂಡ 9 ಪಂದ್ಯಗಳಿಂದ 3ರಲ್ಲಿ ಗೆದ್ದು 6ರಲ್ಲಿ ಸೋತು 9ನೇ ಸ್ಥಾನದಲ್ಲಿದೆ.
ಅಂಕಪಟ್ಟಿಯ ಮಧ್ಯದಲ್ಲಿರುವ ರಾಯಲ್ ಚಾಲೆಂಜರ್ಸ್ ಕಳೆದ 14 ದಿನಗಳಿಂದ ಒಂದೇ ಒಂದಯ ಪಂದ್ಯ ಗೆದ್ದಿಲ್ಲ. ತಂಡದ ಬೌಲಿಂಗ್ ವಿಭಾಗ ಚೆನ್ನಾಗಿದೆ. ವನಿಂದು ಹಸರಂಗ, ಜೋಶ್ ಹೆಜ್ಲ್ ವುಡ್, ಮೊಹ್ಮದ್ ಸಿರಾಜ್ ಹಾಗೂ ಹರ್ಷಲ್ ಪಟೇಲ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಚೆನ್ನಾಗಿ ಆಡುತ್ತಿದೆ. ಆದರೆ ಬ್ಯಾಟಿಂಗ್ ವಿಭಾಗ ಸಾಕಷ್ಟು ಸುಧಾರಿಸಬೇಕಿದೆ.
ನಾಯಕ ಫಾಫ್ ಡುಪ್ಲೆಸಿಸ್ ಕಳೆದ 10 ಇನ್ನಿಂಗ್ಸ್ ಗಳಿಂದ 5 ಬಾರಿ ಒಂದಂಕಿ ರನ್ಗೆ ಬಲಿಯಾಗಿದ್ದಾರೆ. ಮೊನ್ನೆ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲುವ ಮುನ್ನ ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಫಾರ್ಮಗೆ ಮರಳಿದ್ದಾರೆ. ರಜತ್ ಪಟಿದಾರ್ ಅರ್ಧ ಶತಕ ಸಿಡಿಸಿದ್ದು ಭರವಸೆ ಮೂಡಿಸಿದೆ.
https://www.youtube.com/results?search_query=karnataka+tv+
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಗ್ರ ನಾಲ್ಕು ಬ್ಯಾಟರ್ಗಳು ಅತ್ಯದ್ಬುತ್ ಬ್ಯಾಟಿಂಗ್ ಮಾಡಬೇಕಿದೆ.
ಇನ್ನು ಚೆನ್ನೈ ತಂಡಕ್ಕೆ ಹೇಗೆ ಆಡಬೇಕೆನ್ನುವುದು ಗೊತ್ತಿದೆ. ಮೊನ್ನೆ ಸನ್ ರೈಸರ್ಸ್ ವಿರುದ್ದದ ಪರೀಕ್ಷೆಯಲ್ಲಿ ಚೆನ್ನೈ ಬ್ಯಾಟರ್ಗಳು ಗೆದ್ದಿದ್ದಾರೆ. ನಿಧಾನಗತಿಯಲ್ಲಿ ಪಂದ್ಯ ಆರಂಭಿಸಿ ಮಧ್ಯಮ ಓವರ್ಗಳಲ್ಲಿ ರನ್ ವೇಗ ಹೆಚ್ಚಿಸಿ ಕೊನೆಗೆ ಡೆತ್ ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿತ್ತು. ಆರನೆ ಸ್ಥಾನದಲ್ಲಿರುವ ಆರ್ಸಿಬಿ ವಿರುದ್ಧವೂ ಗೆಲುವಿನ ಓಟ ಮುಂದುವರೆಸಲು ನಿರ್ಧರಿಸಿದೆ. ಒಂದು ವೇಳೆ ಆರ್ಸಿಬಿ ವಿರುದ್ಧ ಚೆನ್ನೈ ಸೋತರೆ ಪ್ಲೇಆಫ್ ಹಾದಿ ಕಠಿಣವಾಗಲಿದೆ.
ಸಂಭಾವ್ಯ ಪ್ಲೆಯಿಂಗ್ ಇಲೆವೆನ್
ಆರ್ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸವೆಲ್, ಶಬಾಜ್ ಅಹ್ಮದ್, ಮಹಿಪಾಲ್ ಲೊಮೊರೊರ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್, ಜೋಶ್ ಹೆಜ್ಲ ವುಡ್.
ಚೆನ್ನೈ ತಂಡ: ಋತುರಾಜ್ ಗಾಯಕ್ವಾಡ್, ಡೇವೊನ್ ಕಾನ್ವೆ, ರಾಬಿನ್ ಉತ್ತಪ್ಪ, ಅಂಬಾಟಿ ರಾಯ್ಡು, ಎಂ.ಎಸ್.ಧೋನಿ (ನಾಯಕ, ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಯಿನ್ ಅಲಿ/ಡ್ವೇನ್ ಬ್ರಾವೋ, ಡ್ವೇನ್ ಪ್ರಿಟೋರಿಯಸ್, ಮಹೇಶ್ ತೀಕ್ಷ್ಣ, ಸಿಮರ್ಜಿತ್ ಸಿಂಗ್, ಮುಖೇಶ್ ಚೌಧರಿ.