Tuesday, April 15, 2025

Latest Posts

ಗೆಲುವಿನ ಹುಡುಕಾಟದಲ್ಲಿ ರೋಹಿತ್ ಪಡೆ ಹ್ಯಾಟ್ರಿಕ್ ಗೆಲುವಿನ ಕನಸಲ್ಲಿ ಆರ್‍ಸಿಬಿ

- Advertisement -

ಪುಣೆ: ಇಂದು ವಾರಾಂತ್ಯ ಆಗಿರುವುದರಿಂದ ಐಪಿಎಲ್‍ನಲ್ಲಿಂದು ಎರಡು ಪಂದ್ಯಗಳು ನಡೆಯಲಿವೆ. ಆರ್‍ಸಿಬಿ ತಂಡ ಇಂದು ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದರೆ ಇದಕ್ಕೂ ಮುನ್ನ ನಡೆಯುವ ಮತ್ತೊಂದು ಪಂದ್ಯದಲ್ಲಿ ಚೆನ್ನೈ ತಂಡ ಸನ್‍ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ.


ಶನಿವಾರ ಪುಣೆಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡುಪ್ಲೆಸಿಸ್ ನೇತೃಥ್ವದ ಆರ್‍ಸಿಬಿ ತಂಡ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ. ಆರ್‍ಸಿಬಿ ತನ್ನ ಮೊದಲ ಪಂದ್ಯದಲ್ಲಿ ಸೋತಿತ್ತು. ನಂತರ ಕೋಲ್ಕತ್ತಾ ಹಾಗೂ ರಾಜಸ್ಥಾನ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತುಘಿ. ಇದೀಗ ರೋಹಿತ್ ಪಡೆ ಮೇಲೂ ಸವಾರಿ ಮಾಡಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದೆ.

ಆರ್‍ಸಿಬಿ ತಂಡದಲ್ಲಿ ನಾಯಕ  ಡುಪ್ಲೆಸಿಸ್ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಅನೂಜ್ ರಾವತ್‍ರಿಂದ ಒಳ್ಳೆಯ ಇನ್ನಿಂಗ್ಸ್ ಮೂಡಿ ಬಂದಿಲ್ಲಘಿ. ಮಾಜಿ ನಾಯಕ ವಿರಾಟ್ ಕೊಹ್ಲಿಘಿ, ಡೇವಿಡ್ ವಿಲ್ಲಿ ಫಾರ್ಮ್‍ಗೆ ಇನ್ನು ಮರಳಿಲ್ಲ.

ಇಂದು ಕಣಕ್ಕಿಳಿಯಲಿದ್ದಾರೆ ಗ್ಲೆನ್ ಮ್ಯಾಕ್ಸ್‍ವೆಲ್ 
ಇಂದಿನ ಪಂದ್ಯದಲ್ಲಿ ಹೊಡಿ ಬಡಿ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಆಡೋದು ಪಕ್ಕಾ ಆಗಿದ್ದು ಶೆರ್ನೆ ರುದರ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಕಳೆ ಕ್ರಮಾಂಕದಲ್ಲಿ ಶಾಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್ ಒಳ್ಳೆಯ ಫಾರ್ಮ್‍ನಲ್ಲಿದ್ದು ತಂಡಕ್ಕೆ ಒಳಿತಾಗಿದೆ.

ತಂಡದ ಬೌಲಿಂಗ್ ಚಿಂತೆಗೀಡು ಮಾಡಿದೆ. ವೇಗಿ ಹರ್ಷಲ್ ಪಟೇಲ್ ಹೊರತುಪಡಿಸಿ ವೇಗಿಗಳಾದ ಮೊಹ್ಮದ್ ಸಿರಾಜ್, ಡೇವಿಡ್ ವಿಲ್ಲಿಘಿ, ಆಕಾಶ್ ದೀಪ್ ಹೇಳಿಕೊಳ್ಳುವಂಥ ಬೌಲಿಂಗ್ ಪ್ರರ್ದಶನ ನೀಡುತ್ತಿಲ್ಲಘಿ. ಇನ್ನು ಸ್ಪಿನ್ನರ್ ಹಸರಂಗ ಸ್ಪಿನ್ ಮ್ಯಾಜಿಕ್ ನಡೆಯುತ್ತಿಲ್ಲ . ಡೆತ್ ಓವರ್‍ನಲ್ಲಿ ರನ್‍ಗೆ ಕಡಿವಾಣ ಹಾಕಬೇಕಿದೆ.

ಇದುವರೆಗೂ ಐಪಿಎಲ್‍ನಲ್ಲಿ ಆರ್‍ಸಿಬಿ ಹಾಗೂ ಮುಂಬೈ ತಂಡಗಳು 29 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 17 ಬಾರಿ ಗೆದ್ದರೆ ಆರ್‍ಸಿಬಿ 12 ಬಾರಿ ಸೋಲು ಕಂಡಿದೆ.

ಮುಂಬೈಗೆ ಬೇಕು ಸಾಂಘಿಕ ಹೋರಾಟ
ಇನ್ನು ಮುಂಬೈ ಇಂಡಿಯನ್ಸ್ ತಂಡ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಡೆಲ್ಲಿ ಎರಡನೆ ಪಂದ್ಯದಲ್ಲಿ ರಾಜಸ್ಥಾನ ಮೂರನೆ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋತಿದೆ. ಕಳೆದ ಆವೃತ್ತಿಯಲ್ಲೂ ಮುಂಬೈ  ಮೂರು ಪಂದ್ಯಗಳನ್ನು ಸೋತಿತ್ತುಘಿ. ನಂತರ ಆರ್‍ಸಿಬಿ ವಿರುದ್ಧ ಗೆಲ್ಲುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಈ ಆವೃತ್ತಿಯಲ್ಲೂ ಇದು ಮರುಕಳಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.ಮುಂಬೈ ತಂಡಕ್ಕೆ ವೈಯಕ್ತಿಕ ಪ್ರರ್ದಶನಕ್ಕಿಂತ ಸಾಂಘಿಕ ಹೋರಾಟ ಮುಖ್ಯವಾಗಿದೆ. ನಾಯಕ ರೋಹಿತ್ ಶರ್ಮಾ ಫಾರ್ಮ್‍ಗೆ ಮರಳಿದ್ದಾರೆ.

 

- Advertisement -

Latest Posts

Don't Miss