Tuesday, April 15, 2025

Latest Posts

ಆರ್‍ಸಿಬಿಗೆ ಹ್ಯಾಟ್ರಿಕ್ ಗೆಲುವು: ಮುಂಬೈಗೆ ನಾಲ್ಕನೆ ಸೋಲು

- Advertisement -

ಅನೂಜ್ ರಾವತ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಆರ್‍ಸಿಬಿ ಬಲಿಷ್ಠ ಮುಂಬೈ ವಿರುದ್ಧ 7ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ಇಂಡಿಯನ್ಸ್ ತಂಡ ಸತತ ನಾಲ್ಕನೆ ಪಂದ್ಯವನ್ನು ಕೈಚೆಲ್ಲಿ ನಿರಾಸೆ ಅನುಭವಿಸಿದೆ.


ಟಾಸ್ ಗೆದ್ದ ಆರ್‍ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ (26) ಹಾಗೂ ಇಶನ್ ಕಿಶನ್ (26) ಮೊದಲ ವಿಕೆಟ್‍ಗೆ 50 ರನ್ ಸೇರಿಸಿದರು.

ನಾಯಕ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ನಂತರ ಬಂದ ಬ್ಯಾಟ್ಸ್‍ಮನ್‍ಗಳು ಬೇಗನೆ ಪೆವಲಿಯನ್ ಸೇರಿದರು. ಡೆವಾಲ್ಡ್ ಬ್ರೇವಿಸ್ 8, ತಿಲಕ್ ವರ್ಮಾ 0, ಕಿರಾನ್ ಪೊಲಾರ್ಡ್ 0, ರಮಣ್‍ದೀಪ್ ಸಿಂಗ್ 6 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ (ಅಜೇಯ 68) ಏಕಾಂಗಿ ಹೋರಾಟ ಮಾಡಿ ತಂಡದ ಮೊತ್ತ 150 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.ಮುಂಬೈ ಅಂತಿಮವಾಗಿ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿತು.

152 ರನ್‍ಗಳ ಟಾರ್ಗೆಟ್ ಬೆನ್ನತ್ತಿದ ಆರ್‍ಸಿಬಿಗೆ ನಾಯಕ ಫಾಫ್ ಡುಪ್ಲೆಸಿಸ್ (16) ಹಾಗೂ ಅನೂಜ್ ರಾವತ್ (66) ಮೊದಲ ವಿಕೆಟ್‍ಗೆ 50 ರನ್ ಸೇರಿಸಿದರು.

ವಿರಾಟ್ ಕೊಹ್ಲಿ 48,ದಿನೇಶ್ ಕಾರ್ತಿಕ್ ಅಜೇಯ 7, ಗ್ಲೆನ್ ಮ್ಯಾಕ್ಸ್‍ವೆಲ್ ಅಜೇಯ 8 ರನ್ ಕಲೆ ಹಾಕಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಆರ್‍ಸಿಬಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿತು.ಅಂಕಪಟ್ಟಿಯಲ್ಲಿ ಮೂರನೆ ಸ್ಥಾನಕ್ಕೆ ಏರಿತು.

- Advertisement -

Latest Posts

Don't Miss