ಮುಂಬೈ: ಐಪಿಎಲ್‍ನಲ್ಲಿ ಇಂದು ಮದಗಜಗಗಳ ಕಾದಾಟ ನಡೆಯಲಿವೆ.ಐಪಿಎಲ್‍ನಲ್ಲಿ ಆರ್‍ಸಿಬಿ ಹಾಗೂ ಮುಂಬೈ ಎರಡು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿವೆ. ಆರ್‍ಸಿಬಿ ಮುಂಬೈ ಕಾದಾಟ ಅಂದ್ರೆ ಅದು ಬದ್ಧ ವೈರಿಗಳ ಕಾದಾಟ ಎಂದೆ ಬಿಂಬಿತವಾಗಿದೆ. ಆರ್‍ಸಿಬಿ ತಂಡ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಇತ್ತ ಮುಂಬೈ ಇಂಡಿಯನ್ಸ್ ತಂಡ ಹ್ಯಾಟ್ರಿಕ್ ಸೋಲುಂಡು ಗೆಲುವಿನ ಹುಡುಕಾಟದಲ್ಲಿದೆ. ಅಂಕಪಟ್ಟಿಯಲ್ಲಿ ಆರ್‍ಸಿಬಿ ಮೇಲೆರೆಬೇÉಕೆಂದರೆ ಇಂದಿನ ಪಂದ್ಯವನ್ನು ಗೆಲ್ಲಬೇಕಾದ ಒತ್ತಡವೂ ಇದೆ.
ಆರ್‍ಸಿಬಿ ತಂಡಕ್ಕೆ ಹೊಡಿ ಬಡಿ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ವೇಗಿ ಜೋಶ್ ಹೆಜ್ಲವುಡ್ ಬಂದಿರುವುದರಿಂದ ತಂಡಕ್ಕೆ ಆನೆ ಬಲ ಬಂದಿದೆ.ಇಂದಿನ ಮಹತ್ವದ ಪಂದ್ಯದಲ್ಲಿ ಯಾರಿಗೆ ಪ್ಲೇಯಿಂಗ್ ಇಲೆವೆನ್‍ನಲ್ಲಿ ಅವಕಾಶ ಸಿಗುತ್ತೆ ಅನ್ನೋದು ಕತೂಹಲದ ವಿಷಯವಾಗಿದೆ. ಜೊತೆಗೆ ನಾಯಕ ಫಾಫ್ ಡುಪ್ಲೆಸಿಸ್‍ಗೆ ತಂಡದ ಆಯ್ಕೆ ತಲೆ ನೋವಾಗಿದೆ.
ನಾಯಕ ಫಾಫ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಅನೂಜ್ ರಾವತ್ ಒಳ್ಳೆಯ ಪ್ರದರ್ಶನ ನೀಡಿಲ್ಲ. ನಂತರ ಬರುವ ವಿರಾಟ್ ಕೊಹ್ಲಿ ಫಾರ್ಮ್‍ಗೆ ಮರಳಿಲ್ಲ. ನಾಲ್ಕು ಹಾಗೂ ಐದನೆ ಕ್ರಮಾಂಕದಲ್ಲಿ ಡೇವಿಡ್ ವಿಲ್ಲಿ ಹಾಗೂ ಶರ್ಫೆನ್ ರುದರ್‍ಫೋರ್ಡ್ ಇದ್ದಾರೆ. ಶೆರ್ಫಾನ್ ರುದರ್‍ಫೋರ್ಡ್ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಿಲ್ಲ. ಇವರ ಜಾಗದಲ್ಲಿ ಮ್ಯಾಕ್ಸ್‍ವೆಲ್ ಆಡುತ್ತಾರೆ.ಡೇವಿಡ್ ಆಲ್ರೌಂಡರ್ ಆಗಿರುವುದರಿಂದ ತಂಡದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಶಾಬಾಜ್ ಅಹ್ಮದ್ ಹಾಗೂ ದಿನೇಶ್ ಕರ್ತಿಕ್ ದೊಡ್ಡ ಜವಾಬ್ದಾರಿಯನ್ನು ಹೋರಲಿದ್ದಾರೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಹಸರಂಗ ಆಡೋದು ಪಕ್ಕಾ ಆಗಿದೆ. ಮೊಹ್ಮದ್ ಸಿರಾಜ್, ಹರ್ಷಲ್ ಪಟೇಲ್ ಖಾಯಂ ಆಟಗಾರರಾಗಿದ್ದಾರೆ.
ಕಳೆದ ಪಮದ್ಯದಲ್ಲಿ ಆಕಾಶ್ ದೀಪ್ ದುಬಾರಿ ಬೌಲರ್ ಆಗಿರುವುದರಿಂದ ಅವರ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ.