Wednesday, April 16, 2025

Latest Posts

ಇಂದು ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಆರ್ಸಿಬಿ ?

- Advertisement -

ಮುಂಬೈ:ಐಪಿಎಲ್ ನ ಇಂದಿನ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ತಂಡಗಳು ಮುಖಾಮುಖಿಯಾಗುತ್ತಿವೆ.
ಲೀಗ್ ನ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ಸಿಬಿ ಸೋತಿತ್ತು.

ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಆರ್ಸಿಬಿ ಪಾಲಿಗೆ ಸೇಡಿನ ಕದನವಾಗಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್ಸಿಬಿ 12 ಪಂದ್ಯಗಳಲ್ಲಿ 7 ಪಂದ್ಯವನ್ನು ಗೆದ್ದು 5ರಲ್ಲಿ ಸೋತು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ.

ಇನ್ನು ಪಂಜಾಬ್ ತಂಡ 11 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 6ರಲ್ಲಿ ಸೋತು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪಂಜಾಬ್ ತಂಡ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ.

ಇನ್ನು 14 ಅಂಕಗಳಿಸಿರುವ ಆರ್ಸಿಬಿ ಈ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ ಕಳಪೆ ರನ್ ರೇಟ್ ಚಿಂತೆಗೀಡು ಮಾಡಿದೆ.
ನಾಯಕ ಫಾಫ್ ಡುಪ್ಲೆಸಿಸ್ ಪಂಜಾಬ್ ವಿರುದ್ಧ ಈವರೆಗೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಸನ್ ರೈಸರ್ಸ್ ವಿರುದ್ಧ ಆರ್ ಸಿಬಿ ತಂಡದ ಅಗ್ರ ಬ್ಯಾಟರ್ಗಳು ಸ್ಪೋಟಕ ಬ್ಯಾಟಿಂಗ್ ಮಾಡಿದರು. ರಜತ್ ಪಟಿಧಾರ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಒಟ್ಟಾರೆ ಇಂದಿನ ಪಂದ್ಯ ಪಂಜಾಬ್ ಬೌಲಿಂಗ್ ವರ್ಸಸ್ ಆರ್ಸಿಬಿ ಬ್ಯಾಟಿಂಗ್ ಎನ್ನುವಮತಾಗಿದೆ.

- Advertisement -

Latest Posts

Don't Miss