Wednesday, September 11, 2024

Latest Posts

ಇಂದು ಆರ್‍ಸಿಬಿಗೆ ರಾಜಸ್ಥಾನ ರಾಯಲ್ ಚಾಲೆಂಜ್

- Advertisement -

ಪುಣೆ: ಸೋಲಿನಿಂದ ಕಂಗೆಟ್ಟಿರುವ ಆರ್‍ಸಿಬಿ ತಂಡ ಇಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಎರಡೂ ಬಲಿಷ್ಠ ತಂಡಗಳ ಕದಾಟ ಪುಣೆಯ ಎಂಸಿಎ ಮೈದಾನದಲ್ಲಿ ನಡೆಯಲಿದೆ. ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿ ತಂಡ 8ಪಂದ್ಯಗಳಿಂದ 5ರಲ್ಲಿ ಗೆದ್ದು 3ರಲ್ಲಿ ಸೋತು 10 ಅಂಕಗಳೊಂದಿಗೆ ಐದನೆ ಸ್ಥಾನದಲ್ಲಿದೆ.


ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ 7 ಪಂದ್ಯಗಳಿಂದ 5ರಲ್ಲಿ ಗೆದ್ದು 2ರಲ್ಲಿ ಸೋತು 10 ಅಂಕಗಳೊಂದಿಗೆ ಮೂರನೆ ಸ್ಥಾನದಲ್ಲಿದೆ. ಇತ್ತಿಚೆಗಷ್ಟೆ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‍ಸಿಬಿ ಗೆದ್ದುಕೊಂಡಿತ್ತು.

ಕಳೆದ ಪಂದ್ಯದಲ್ಲಿ ಆರ್‍ಸಿಬಿ ಸನ್‍ರೈಸರ್ಸ್‍ಗೆ ಸುಲಭ ವಾಗಿ ಶರಣಾಗಿತ್ತು. ತಂಡಕ್ಕೆ ಬ್ಯಾಟಿಂಗ್ ವೈಫಲ್ಯ ದೊಡ್ಡ ತಲೆನೋವಾಗಿದೆ. ಅಗ್ರ ಕ್ರಮಾಂಕದಲ್ಲಿ ಅನೂಜ್ ರಾವತ್ ವಿಫಲರಾಗಿದ್ದಾರೆ. ಇವರ ಬದಲು ಮಹಿಪಾಲ್ ಲಾಮರೊರ್ ಕಣಕ್ಕಿಳಿಸಲು ಅವಕಾಶವಿದೆ. ವಿರಾಟ್ ಕೊಹ್ಲಿ ಸುಲಭವಾಗಿ ವಿಕೆಟ್ ಕೈಚೆಲ್ಲುತ್ತಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‍ವೆಲ್, ಸುಯೇಶ್ ಪ್ರಭುದೇಸಾಯಿ ಶಬಾಜ್ ಅಹಮದ್ ಜವಾಬ್ದಾರಿಯುತವಾಗಿ ಆಡಬೇಕಿದೆ. ದಿನೇಶ್ ಕಾರ್ತಿಕ್ ಎಂದಿನಂತೆ ಸೋಟಕ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಬೇಕಿದೆ.

ಬೌಲಿಂಗ್ ವಿಭಾಗಕ್ಕೆ ರಾಜಸ್ಥಾನ ಬ್ಯಾಟರ್‍ಗಳು ದೊಡ್ಡ ಸವಾಲಾಗಿದ್ದರೆ. ವೇಗಿಗಳಾದ ಜೋಶ್ ಹೆಜ್ಲ್‍ವುಡ್, ಮೊಹ್ಮದ್ ಸಿರಾಜ್, ಹರ್ಷಲ್ ಪಟೇಲ್ ರಾಜಸ್ಥಾನ ಬ್ಯಾಟರ್‍ಗಳನ್ನು ಬೇಗನೆ ಕಟ್ಟಿಹಾಕಬೇಕಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ವನಿಂದು ಹಸರಂಗ ಸ್ಪಿನ್ ಮ್ಯಾಜಿಕ್ ನಡೆಯುತ್ತಿಲ್ಲ. ಕರಿಣ್ ಶರ್ಮಾ ಅವರಿಗೆ ಅವಕಾಶ ನೀಡಬಹುದಾಗಿದೆ.

ಒಳ್ಳೆಯ ಜೋಶ್‍ನಲ್ಲಿದ್ದಾರೆ ಜೋಸ್ ಬಟ್ಲರ್
ಇನ್ನು ರಾಜಸ್ಥಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕವಾಗಿ ಗೆದ್ದಿತ್ತು. ಜೋಸ್ ಬಟ್ಲರ್ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ದೇವದತ್ ಪಡಿಕಲ್ ಅರ್ಧ ಶತಕ ಸಿಡಿಸಿದ್ದು ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಸಂಜು ಸ್ಯಾಮ್ಸನ್, ಶಿಮ್ರಾನ್ ಹೇಟ್ಮಯರ್, ರಿಯಾನ್ ಪರಾಗ್, ಕರುಣ್ ನಾಯರ್ ಆರ್‍ಸಿಬಿ ಬೌಲರ್‍ಗಳಿಂದ ಕಠಿಣ ಸವಾಲು ಎದುರಿಸಲಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಟ್ರಂಟ್ ಬೌಲ್ಟ್ ದುಬಾರಿಯಾಗುತ್ತಿದ್ದಾರೆ. ಪ್ರಸಿದ್ಧ ಕೃಷ್ಣ ಚಾಣಾಕ್ಷ ಬೌಲಿಂಗ್‍ನಿಂದ ಗಮನ ಸೆಳೆಯುತ್ತಿದ್ದಾರೆ. ಅಶ್ವಿನ್ ವಿಕೆಟ್ ಪಡೆಯುತ್ತಿರುವುದು ತಂಡದ ಬೌಲಿಂಗ್ ಉತ್ಸಾಹ ಹೆಚ್ಚಾಗಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಆರ್‍ಸಿಬಿ ತಂಡ: ಅನೂಜ್ ರಾವತ್, ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‍ವೆಲ್, ಸುಯೇಶ್ ಪ್ರಭುದೇಸಾಯಿ, ಶಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) , ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೆಜ್ಲವುಡ್.
ರಾಜಸ್ಥಾನ ರಾಯಲ್ಸ್‍: ಜೋಸ್ ಬಟ್ಲರ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೇಟ್ಮಯರ್, ರಿಯಾನ್ ಪರಾಗ್, ಕರುಣ್ ನಾಯರ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್‍ಘಿ, ಒಬೆಡ್ ಮೆಕೊಯೆ, ಪ್ರಸಿದ್ಧ ಕೃಷ್ಣ, ಯಜ್ವಿಂದರ್ ಚಾಹಲ್.

 

- Advertisement -

Latest Posts

Don't Miss