ಮುಂಬೈ:ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ಐಪಿಎಲ್‍ನ 24ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದು ನಂ1 ಪಟ್ಟಕ್ಕಾಗಿ ಹೋರಾಡಲಿವೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಿದ್ದಾಜಿದ್ದಿನ ಕದನ ನಡೆಸಲಿವೆ. ರಾಜಸ್ಥಾನ ತಂಡ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6 ಅಂಕಗಳೊಂದಿಗೆ ಮೊದಲ ಸ್ಥಾನನದಲ್ಲಿದ್ದರೆ ಗುಜರಾತ್ ತಂಡ 4 ಪಂದ್ಯಗಳಲ್ಲಿ 3ರಲ್ಲಿ ಜಯಿಸಿ 6 ಅಂಕ ಗಳಿಸಿದೆ. ಎರಡು ತಂಡಗಳ ನೆಟ್‍ರನ್‍ರೇಟ್‍ನಲ್ಲಿ ಅಂತರವಿದೆ.
ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟಾಸ್ ನಿರ್ಣಾಯಕವಾಗಿದೆ. ರಾಜಸ್ಥಾನ 3 ಪಂದ್ಯಗಳನ್ನು ಗೆದ್ದಿರೋದು ಮೊದಲು ಬ್ಯಾಟಿಂಗ್ ಮಾಡಿ. ಈ ಹಿನ್ನೆಲೆಯಲ್ಲಿ ರಾಜಸ್ಥಾನಕ್ಕೆ ಟಾಸ್ ತುಂಬ ಮುಖ್ಯವಾಗಿದೆ.
ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಒಳ್ಳಯ ಫಾರ್ಮ್‍ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೇಟ್ಮಯರ್ ತಂಡಕ್ಕೆ ನೆರವಾಗಲಿದ್ದಾರೆ. ದೇವದತ್ ಪಡೀಕಲ್ ಫಾರ್ಮ್‍ಗೆ ಮರಳಿರುವುದು ತಂಡಕ್ಕೆ ಪಸ್ಲ್ ಪಾಯಿಂಟ್ ಆಗಿದೆ. ಆದರೆ ಕೆಳ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಒಳ್ಳೆಯ ಬ್ಯಾಟಿಂಗ್ ಮಾಡಿಲ್ಲ.
ನಂ.7ರಲ್ಲಿ ಬ್ಯಾಟಿಂಗ್ ಮಾಡಲು ಅಶ್ವಿನ್ ಸೂಕ್ತ ಬ್ಯಾಟರ್ ಅಲ್ಲ.ಇನ್ನು ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್ ಮಿಂಚು ಹರಿಸಿದ್ದಾರೆ. ಚಹಲ್ ಹಾಗೂ ಅಶ್ವಿನ್ ಜೋಡಿ ವಿಕೆಟ್ ಕೀಳುತ್ತಿದ್ದಾರೆ. ಮೊನ್ನೆ ಪಾದರ್ಪಣೆ ಮಾಡಿದ ಕುಲದೀಪ್ ಸೇನ್ ಮಿಂಚಿದ್ದಾರೆ.
ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಸಮಸ್ಯೆ ಎದುರಿಸುತ್ತಿದೆ. ಬ್ಯಾಟಿಂಗ್‍ನಲ್ಲಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ ಹಾಗೂ ಡೇವಿಡ್ ಮಿಲ್ಲರ್ ಅವರಿಂದ ರನ್ ಬಂದಿಲ್ಲ.
ಶುಭಮನ್ ಗಿಲ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆ ಮಾಡಲಾಗಿದೆ.ಇನ್ನು ಬೌಲಿಂಗ್ ವಿಭಾಗದಲ್ಲಿ ಬೌಲರ್ಸ್‍ಗಳು ಆಕ್ರಮಣಕಾರಿ ಆಟ ಪ್ರದರ್ಶಿಸಬೇಕಿದೆ. ಮೊಹ್ಮದ್ ಶಮಿ ಹೊಸ ಚೆಂಡಿನಲ್ಲಿ ಮಾತ್ರ ಮಿಂಚುತ್ತಿದ್ದಾರೆ.
145 ಕಿ.ಮೀ ಬೌಲಿಂಗ್ ಹಾಕಿಯೂ ಲಾಕಿ ಫಗ್ರ್ಯೂಸನ್ ದುಬಾರಿ ಬೌಲರ್ ಆಗಿದ್ದಾರೆ.ಅರೆ ಕಾಲಿಕಾ ಬೌಲರ್‍ಗಳಾಗಿ ರಾಹುಲ್ ತೆವಾಟಿಯಾ ಹಾಗೂ ದರ್ಶನ್ ನಲಕಂಡೆ ಅವರುಗಳನ್ನ ಬಳಸಿಕೊಳ್ಳಬಹುದಾಗಿದೆ.