Wednesday, April 16, 2025

Latest Posts

ಸನರೈಸರ್ಸ್ಗೆ ರೋಚಕ 3 ರನ್ ಜಯ 

- Advertisement -

ಮುಂಬೈ:ರಾಹುಲ್ ತ್ರಿಪಾಠಿ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಸನ್ ರೈಸರ್ಸ್ ಹೈದ್ರಾಬಾದ್ ಮುಂಬೈ ವಿರುದ್ಧ 3 ರನ್ ಗಳ ರೋಚಕ ಗೆಲುವು ಪಡೆದಿದೆ. ಮುಂಬೈ ತಂಡ ಟೂರ್ನಿಯಲ್ಲಿ 10ನೇ ಸೋಲು ಕಂಡಿತು.

ಮುಂಬೈನ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್  ಆಯ್ದುಕೊಂಡಿತು.

ಸನ್ ರೈಸರ್ಸ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ (9ರನ್)ಆಘಾತ ಅನುಭವಿಸಿದರು.

ಪ್ರಿಯಮ್ ಗರ್ಗ್ (42) ಜೊತೆಗೂಡಿದ ರಾಹುಲ್ ತ್ರಿಪಾಠಿ ತಂಡದ ಕುಸಿತ ತಡೆದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಾಹುಲ್ ತ್ರಿಪಾಠಿ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಈ ವೇಳೆ ದಾಳಿಗಿಳಿದ ರಮಣದೀಪ್ ಸಿಂಗ್ ಇಬ್ಬರನ್ನು ಪೆವಿಲಿಯನ್ಗೆ ಅಟ್ಟಿದರು. ನಿಕೊಲೊಸ್ ಪೂರಾನ್ 38, ಏಡಿನ್ ಮಾರ್ಕರಾಮ್ 2, ಕೇನ್ ವಿಲಿಯಮ್ಸನ್ ಅಜೇಯ 8 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 8 ರನ್ ಗಳಿಸಿದರು.

ಸನ್ ರೈಸರ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆ ಹಾಕಿತು.

194 ರನ್ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಮೊದಲ ವಿಕೆಟ್ಗೆ 95 ರನ್ ಭರ್ಜರಿ ಆರಂಭ ನೀಡಿದರು. 48 ರನ್ ಗಳಿಸಿ ಮುನ್ನಗುತ್ತಿದ್ದ ನಾಯಕ ರೋಹಿತ್ ಶರ್ಮಾ, ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.

ನಂತರ ದಾಳಿಗಿಳಿದ ಉಮ್ರಾನ್ ಮಲ್ಲಿಕ್ ಇಶನ್ ಕಿಶನ್ (43), ಡೇನಿಯಲ್ ಸ್ಯಾಮ್ಸ್ (15), ತಿಲಕ್ ವರ್ಮಾ(8) ಅವರುಗಳನ್ನು ಬಲಿ ತೆಗೆದುಕೊಂಡರು.

ಟಿಮ್ ಡೇವಿಡ್ (46) ಹಾಗೂ ಸ್ಟಬ್ಸ್ (2) ರನೌಟ್ ಬಲೆಗೆ ಬಿದ್ದರು. ಕೊನೆಯಲ್ಲಿ ರಮಣದೀಪ್ ಸಿಂಗ್ 14 ರನ್ ಗಳಿಸಿದರಾದರೂ ಪ್ರಯೋಜನವಾಗಲಿಲ್ಲ. ಮುಂಬೈ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತು.

 

- Advertisement -

Latest Posts

Don't Miss