ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಅನುಶ್ರೀ ಪತಿ ಕೋಟ್ಯಾಧಿಪತಿಯಂತೆ ನಿಜಾನಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಷನ್, ನಾನು ಐಟಿಯಲ್ಲಿ ಕೆಲಸ ಮಾಡ್ತೀನಿ. ನಾನು ಕೋಟ್ಯಾಧಿಪತಿ ಅಲ್ಲ ಅಂತಾ ಸ್ಮೈಲ್ ಮಾಡಿದ್ರು.
ಜೊತೆಗೆ ಅನುಶ್ರೀಯಲ್ಲಿ ಇಷ್ಟ ಆಗಿದ್ದೇನು? ಅವರ ಪರಿಚಯ ಹೇಗಾಯ್ತು ಅನ್ನೋ ಬಗ್ಗೆ ಮನಬಿಚ್ಚಿ ಮಾತನಾಡಿದ್ರು. 5 ವರ್ಷದಿಂದ ನಮ್ಮಿಬ್ಬರಿಗೆ ಪರಿಚಯ ಇದೆ. ಕಳೆದ 3 ವರ್ಷಗಳಿಂದ ಪುನೀತ ಪರ್ವ ಮಾಡಿದ್ಮೇಲೆ ನಾವಿಬ್ಬರು ಕ್ಲೋಸ್ ಆಗಿದ್ವಿ. ಶ್ರೀದೇವಿ ಬೈರಪ್ಪ ನನ್ನ ಬಾಲ್ಯ ಸ್ನೇಹಿತೆ. ಅವರ ಮೂಲಕ ನಾನು ಅನುಶ್ರೀ ಭೇಟಿ ಮಾಡಿದ್ದೆ.
ಈಕೆ ಬಹಳ ಸಿಂಪಲ್ ಹುಡುಗಿ. ಈಕೆ ಸೆಲೆಬ್ರೆಟಿ ಅಂತಾ ನನಗೆ ಯಾವತ್ತೂ ಅನ್ನಿಸಿಯೇ ಇಲ್ಲ. ನಾನು ಚೆನ್ನಾಗಿ ಅಡುಗೆ ಮಾಡ್ತೀನಿ. ಚೆನ್ನಾಗಿ ತಿಂತಾಳೆ ಇಷ್ಟ ಪಡ್ತಾಳೆ. ಆಕೆ ತುಂಬಾ ಸರಳ. ಡೌನ್ ಟು ಅರ್ಥ್ ಅಂತಾ. ಪತ್ನಿ ಬಗ್ಗೆ ರೋಷನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.