Dharwad News: ಧಾರವಾಡ: ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಮಹಿಳೆಯರಿಗೆ ಫ್ರೀ ಬಸ್ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಅದುವೇ ಈಗ ವಿದ್ಯಾರ್ಥಿಗಳ ಜೀವಕ್ಕೆ ಕಂಟಕವಾಗಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಸ್ಥಳೀಯ ಬಸ್ ನಿಲ್ದಾಣದಲ್ಲಿ ಶಾಲಾ ಕಾಲೇಜಿಗೆ ತೆರಳಲು ಅಥವಾ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಒಳಗೆ ಕೂಡಲು ಜಾಗವಿಲ್ಲದೆ ಬಸ್ಸಿನ ಬಾಗಿಲಿಗೆ ಜೊತು ಬಿದ್ದು ವಿದ್ಯಾರ್ಥಿಗಳು ಹೋಗುವ ದೃಶ್ಯ ಕಂಡುಬಂದಿದೆ. ಬಸ್ ಕಂಡಕ್ಟರ್ ಆಗ್ಲಿ ಅಥವಾ ಡಿಪೋ ಮ್ಯಾನೇಜರ್‌ಗಳಾಗಲಿ. ಇದರ ಬಗ್ಗೆ ಗಮನಹರಿಸಿದೇ ಇರುವುದು ಬೇಸರ ಸಂಗತಿ ಆಗಿದೆ. ಇನ್ನು ಬಸ್ ಹತ್ತಲು ಹೋಗಿ ಪ್ರಾಣ ಕಳೆದುಕೊಂಡ ಘಟನೆಗಳು ಹಲವಡೆ ನಡೆದಿವೆ.
ಇಷ್ಟೆಲ್ಲಾ ಘಟನೆಗಳು ಆದರೂ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇತ್ತ ಕಡೆ ಗಮನಹರಿಸದೇ ಇರುವದರಿಂದ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಒದಗಿಸಿ ಜನರ ಓಡಾಟಕ್ಕೆ ಅನುಕೂಲಕ್ಕೆ ಮಾಡಿಕೊಡುತ್ತಾರಾ ಕಾದು ನೋಡಬೇಕಾಗಿದೆ.
ವರದಿ: ಸಂಗಮೇಶ್ ಸತ್ತಿಗೇರಿ
‘ಇದೇನಿದು ಇಷ್ಟೊಂದು ಹೊಲಸು ವ್ಯವಸ್ಥೆ ಇದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ’
ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡ್ತಾ ಇದೆ: ಅಕ್ಕಿ ಭಾಗ್ಯದ ಬಗ್ಗೆ ಸಚಿವ ಲಾಡ್ ಮಾತು..

