Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಹಲವು ಬಗೆ ಬಗೆಯ ಕುರಿಗಳನ್ನು ತಂದಿದ್ದರು. ಇದರಲ್ಲಿ ಕೆಲವು ಕುರಿಗಳ ವಿಶೇಷತೆಯನ್ನು ಹೇಳಲಾಗಿದೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಾವೆಲ್ಲರೂ ಸಾಮಾನ್ಯವಾಗಿ ಮೇಕೆಗಳನ್ನು ನೋಡಿರ್ತೀವಿ. ಆದರೆ ನಾವಿವತ್ತು ನಿಮಗೆ ಪರಿಚಯ ಮಾಡಿಕೊಡುತ್‌ತಿರುವ ಮೇಲೆ ಸ್ವಲ್ಪ ಡಿಫ್ರೆಂಟ್ ಆಗಿದೆ. ಅದೇನಂದರೆ, ಈ ಮೇಕೆಗಳ ಕಿವಿ ಅತೀ ಉದ್ದವಾಗಿದೆ. ಸಾಮಾನ್ಯ ಮೇಕೆಗಳ ಕಿವಿ ಸಣ್ಣದಾಗಿರುತ್ತದೆ. ಆದರೆ ಈ ಮೇಕೆಯ ಕಿವಿ ಉದ್ದ ಇರುವುದೇ, ಇದರ ವಿಶೇಷತೆ.
ಈ ಮೇಕೆ ಬ್ರೀಡಿಂಗ್ ಗೆ ಉತ್ತಮ ಮೇಕೆಯಾಗಿದೆ. ಅಲ್ಲದೇ, ಈ ಮೇಕೆಯ ಹಾಲಿನಲ್ಲಿ ಆರೋಗ್ಯಕರ ಅಂಶಗಳಿದೆ. ಅಸ್ತಮಾ ಇದ್ದಾಗ, ಬ್ಲಡ್ ಪ್ಲೇಟ್ಲೇಟ್ಸ್ ಕಡಿಮೆ ಇದ್ದಾಗ, ಈ ಮೇಕೆಯ ಹಾಲಿನ ಸೇವನೆ ಮಾಡಬೇಕಂತೆ. ಹೀಗೆ ಮಾಡುವುದರಿಂದ, ಆರೋಗ್ಯ ಸುಧಾರಿಸುತ್ತದೆ ಅಂತಾರೆ, ಈ ಮೇಕೆಗಳ ಓನರ್.
ಇದನ್ನು ಉದ್ದ ಕಿವಿಯ ಮೇಕೆ ಅಂತಾನೇ ಕರಿಯಲಾಗುತ್ತದೆ. ಇದನ್ನು ಸೇವನೆ ಮಾಡುವುದಿಲ್ಲ. ಬದಲಾಗಿ ಹಾಲಿಗಾಗಿ ಅಥವಾ ಸುಮ್ಮನೆ ಸಾಕುವುದಕ್ಕಾಗಿ ಇದನ್ನು ಬಳಸಲಾಗುತ್ತದೆ. ನಿಮಗೂ ಇಂಥ ಮೇಕೆಗಳು ಬೇಕಿದ್ದಲ್ಲಿ, ನೀವು ಬೆಂಗಳೂರಿನ ಶಿವಾಜಿನಗರಕ್ಕೆ ಹೋಗಬಹುದು. ಅಲ್ಲಿ ಹಲವರ ಮನೆಯಲ್ಲಿ ಇಂಥ ಮೇಕೆಗಳನ್ನು ನೀವು ಕಾಣಬಹುದು. ಈ ಮೇಕೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..



