Friday, November 22, 2024

Latest Posts

ಪೆಟ್ರೋಲ್ ಬಾಂಬ್ ಹಾಕುವುದು ಆಕಸ್ಮಿಕವೇ?ಕಾಗಕ್ಕ-ಗುಬ್ಬಕ್ಕ ಕಥೆ ನಂಬಲು ಆಗುತ್ತಾ?: ಗೃಹಸಚಿವರಿಗೆ ಯತ್ನಾಳ್ ಪ್ರಶ್ನೆ..?

- Advertisement -

Political News: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ಕಲ್ಲೆಸೆತವಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಗೃಹಸಚಿವ ಜಿ.ಪರಮೇಶ್ವರ್ ಈ ಘಟನೆ ನಡೆದಿದ್ದು ಆಕಸ್ಮಿಕ ಎಂದಿದ್ದಾರೆ.

ಈ ಹೇಳಿಕೆಗೆ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಮತ್ತು ಗೃಹಸಚಿವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮಾನ್ಯ ಗೃಹ ಸಚಿವರೇ, ನಿನ್ನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲೆಸೆತ, ಪೆಟ್ರೋಲ್ ಬಾಂಬ್ ಮಾಡಿದ್ದು ಉದ್ದೇಶಪೂರ್ವಕವಾದ ಘಟನೆಯೇ ಹೊರತು ಆಕಸ್ಮಿಕವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ತಾವು ನಿಷ್ಪಕ್ಷಪಾತವಾಗಿ ಮಾತನಾಡುವ ಬದಲಾಗಿ – ‘ಆಕಸ್ಮಿಕ’ ಎಂಬ ಪದ ಬಳಕೆ ಮಾಡುವುದರ ಮೂಲಕ ಆ ಕೋಮಿನವರಿಗೆ ನಿಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದೀರಿ.

ಒಂದು ವೇಳೆ ನಿಮ್ಮ ತರ್ಕವೇ ಸರಿಯಿದ್ದರೆ ಪೆಟ್ರೋಲ್ ಬಾಂಬ್ ಹೇಗೆ ಎಸೆದರು? ಇದನ್ನು ತಯಾರು ಮಾಡಲು ಸಮಯ ಬೇಡವೇ ? ಗಣಪತಿ ಮೆರವಣಿಗೆ ಹೋಗುವವರು ಯಾರ ಮೇಲೆ ಕಲ್ಲೆಸೆದರು ? ಶಾಂತಿಯುತವಾಗಿ ಹೋಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಚಪ್ಪಲಿ ಬಿಸಾಡುವುದು, ಕಲ್ಲೆಸೆಯುವುದು, ಪೆಟ್ರೋಲ್ ಬಾಂಬ್ ಹಾಕುವುದು ಆಕಸ್ಮಿಕವೇ ? ನಿಮ್ಮ ಕಾಗಕ್ಕ-ಗುಬ್ಬಕ್ಕ ಕಥೆ ನಂಬುವುದಕ್ಕೆ ಆಗುತ್ತಾ ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಕೋಮಿನ ಹೆಸರನ್ನು ಹೇಳಲು ನಿಮಗೆ ಧೈರ್ಯವಿಲ್ಲವೇ ? ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಹೋಗಬೇಕಾದರೆ ಸೂಕ್ತ ಬಂದೋಬಸ್ತ್ ಕಲ್ಪಿಸದೆ ಇರುವುದು ನಿಮ್ಮ ಗೃಹ ಇಲಾಖೆಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದೊಡ್ಡ ವೈಫಲ್ಯ…ನಿಮ್ಮ ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ…ನಿಮ್ಮ ಬೇಹುಗಾರಿಕೆನವರು ಹಾಗೂ ಜಿಲ್ಲಾ ಪೊಲೀಸ್ ಮುಂಚೆಯೇ ಈ ರೀತಿ ಆಗಬಹದು ಎಂದು ಎಚ್ಚರಿಸಬೇಕಿತ್ತು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು…ನಿಮ್ಮ ವೈಫಲ್ಯವನ್ನು ಮುಚ್ಚಿಡಲು ಹೊಸ ಕಥೆ ಸೃಷ್ಟಿಸಬೇಡಿ...ಯಾವುದೇ ಮುಲಾಜು ನೋಡದೆ ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆ ಹಾಕಿ..ಸರ್ಕಾರದಿಂದ ತೆಗೆದುಕೊಳ್ಳುತ್ತಿರುವ ಯೋಜನೆಗಳನ್ನು ಕೂಡಲೇ ನಿಲ್ಲಿಸಿ…ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss