Political news: ಸಿಪಿಐ ಕಾರ್ಯದರ್ಶಿ ಸೀತಾರಾಂ ಯಚೂರಿ (72) ನಿಧನರಾಗಿದ್ದು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಿಕಿತ್ಸೆ ಫಲಿಸದೇ ಯಚೂರಿ ನಿಧನರಾಗಿದ್ದಾರೆ.
ರಾಜ್ಯದ ಹಲವು ರಾಜಕೀಯ ಗಣ್ಯರು ಯಚೂರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ ಯಚೂರಿ ಕುಟುಂಬಸ್ಥರು ಸಂಶೋಧನೆಗಾಗಿ ಯಚೂರಿ ಮೃತದೇಹವನ್ನು ಸಂಶೋಧನೆಗಾಗಿ ನವದೆಹಲಿಯ ಏಮ್ಸ್‌ಗೆ ದಾನ ಮಾಡಿದ್ದಾರೆ.
ಯಚೂರಿ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದು, ಐಸಿಯುನಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆಗಸ್ಟ್ 19ರಿಂದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ 3 ಗಂಟೆಯ ಬಳಿಕ, ಚಿಕಿತ್ಸೆ ಫಲಿಸದೇ ಯಚೂರಿ ನಿಧನರಾಗಿದ್ದಾರೆ.
ಸೀತಾರಾಂ ಯಚೂರಿ ಅವರ ಮೃತದೇಹ ಉಪಯೋಗವಾಗಲಿ, ಅವರ ನಿಧನದ ಬಳಿಕವೂ ಅವರ ದೇಹ ಉಪಯೋಗವಾಾಗಲಿ ಎಂದು ಏಮ್ಸ್ ಮೆಡಿಕಲ್ ಕೇಂದ್ರಕ್ಕೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಕಲಿಯುತ್ತಿರುವವರಿಗೆ, ಸಂಶೋಧನೆಗಾಗಿ ಶವವನ್ನು ಬಳಸಲಾಗುತ್ತದೆ. ಅಂಥ ಬಳಕೆಗೆ ಯಚೂರಿ ಮೃತದೇಹ ಉಪಯೋಗವಾಗಲಿ ಎಂದು ಕುಟುಂಬಸ್ಥರು ಆಸ್ಪತ್ರೆಗೆ ದೇಹ ದಾನ ಮಾಡಿದ್ದಾರೆ.