Hubli Political News: ಅನಂತ ಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ರೈತರ ಹೋರಾಟ ಯಾವುದು? ಖಲಿಸ್ತಾನಿ ಹೋರಾಟ ಯಾವುದು? ಅವರನ್ನೇ ಕೇಳ್ಬೇಕು ಸಂಪೂರ್ಣ ಮಾಹಿತಿ ಅವರಿಗೆ ಇದೆ, ಅವರನ್ನೇ ಕೇಳಿ ಎಂದು ಹರಿಹಾಯ್ದಿದ್ದಾರೆ.
ಹತ್ತು ವರ್ಷದಲ್ಲಿ ಮೋದಿ ಏನು ಮಾಡಿದ್ದಾರೆ ಅನ್ನೋದು ನನಗಂತೂ ಗೊತ್ತಿಲ್ಲ. ರೈತರ ಸಾಲ ಮನ್ನಾ, ಆದಾಯ ದುಗುಣಿ ಮಾಡ್ತೀನಿ ಅಂದಿದ್ರು ಇದೆಲ್ಲ ನನಗೆ ಕಂಡು ಬಂದಿಲ್ಲ. ರೈತರಿಗೆ ಸಂಬಂಧ ಪಟ್ಟ ಕಾರ್ಯಕ್ರಮ, ನದಿಗಳ ಜೋಡಣೆ ಅನ್ನೋ ಆಶ್ವಾಸನೆ ಕೊಟ್ಟಿದ್ರು. ನನಗೆ ಇವೆಲ್ಲ ಕಂಡು ಬಂದಿಲ್ಲ ಅದರ ಬಗ್ಗೆ ನನಗೆ ಮಾಹಿತಿ ಇದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಚುನಾವಣೆ ಬಂದಿದ್ದಕ್ಕೆ ಹಿಂದು ಮುಸ್ಲಿಂ ತರ್ತಾ ಇದ್ದಾರೆ. ಈ ದೇಶದಲ್ಲಿ ಆಸಿಂ ಪ್ರೇಮ್ ಜಿ ಹೆಚ್ಚು ದಾನಿಗಳು, ಅವರು ಮುಸ್ಲಿಂ ಸಮುದಾಯದವರು. 30 ಬಿಲಿಯನ್ ಡಾಲರ್ ಅವರು ಚಾರಿಟಿಗೆ ನೀಡಿದ್ದಾರೆ. ಚುನಾವಣೆ ಬಂದಾಗ ಹಿಂದು ಮುಸ್ಲಿಂ ಆಗುತ್ತೆ ಅಂತಾ ನಮಗೆ ಗೊತ್ತೇ ಇದೆ. ರಾಮ ಮಂದಿರ, ಹಿಂದು-ಮುಸ್ಲಿಂ, ಖಲಿಸ್ಥಾನ, ಪಾಕಿಸ್ತಾನ್ ಬರುತ್ತೆ. ನಾವು ಯಾವ ದೇಶಕ್ಕೆ ಹೋಲಿಕೆ ಮಾಡಬೇಕು..? ಎಲ್ಲಾ ಸರಕುಗಳು ಚೈನಾದಿಂದ ಬರ್ತಾ ಇದೆ, ಮೇಕ್ ಇನ್ ಇಂಡಿಯಾ ಎಲ್ಲಿದೆ? ಮೇಕ್ ಇನ್ ಇಂಡಿಯಾಗೆ 450 ಕೋಟಿ ಖರ್ಚ ಆಯ್ತು. ಇದರ ಬಗ್ಗೆ ಯಾವ ಬಿಜೆಪಿಯಾವರಾದ್ರೂ ಮಾತಾಡ್ತಾರಾ..? ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಭಾರತ ಪಾಸ್ ಪೋರ್ಟ್ ಪವರ್ 85ನೇ ಸ್ಥಾನಕ್ಕಿದೆ. ಪವರ್ ಫುಲ್ ಪ್ರಧಾನಿ ಇದ್ದಾರೆ ಆದ್ರೆ ಮೊದಲನೇ ಸ್ಥಾನದಲ್ಲಿ ಇರ್ಬೇಕಲ್ಲ. ಸರ್ದಾರ ವಲ್ಲಭಾಯಿ ಪಟೇಲ್ ಪ್ರತಿಮೆ ಕಟ್ಟಿದ್ಯಾರು? ಸರ್ದಾರ್ ವಲ್ಲಭಾಯಿ ಪಟೇಲ್ ರೇ ಆರ್ ಎಸ್ ಎಸ್ ಬ್ಯಾನ್ ಮಾಡಿದ್ದು. ಅವರೇ ಪ್ರತಿಮೆ ಮಾಡಿದ್ದು ಅವರ ಸಿದ್ಧಾಂತವೇ ತಿಳಿತಿಲ್ಲ. ಪ್ರತಿಮೆ ನಂತರ ಅವರ ಹೆಸರು ಎಲ್ಲಾದರೂ ಇದೆಯಾ? ಸಿದ್ದರಾಮಯ್ಯ ಅವರನ್ನ ಸಿದ್ದರಾಮುಲ್ಲಾ ಖಾನ್ ಅಂತಾರೆ. ಅದಕ್ಕೆ ಏನು ಕಾರಣ ಅವರು ಈ ದೇಶದವರಲ್ವಾ? ಕರ್ನಾಟಕದವರಲ್ವಾ? ಶಿಕ್ಷಣ, ಆರೋಗ್ಯದಲ್ಲಿ ಗುಜರಾತ್ ಮಾಡೆಲ್ ಎಷ್ಟಿದೆ ಗೊತ್ತ..? ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡಬೇಕು. ರಾಜಕೀಯ ಬಟ್ಟೆ ಹಾಕೊಂಡು ಬಂದು ಅದನ್ನೇ ಮಾತಾಡ್ತಾರೆ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ರೇಡ್: ಇದು ಬಿಜೆಪಿಗರ ಕುಟಿಲ ಕಾರಸ್ತಾನವೆಂದ ಸಿಎಂ ಸಿದ್ದರಾಮಯ್ಯ
ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ
ನಾನು ಕಾಣಿಸಿಕೊಳ್ಳದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು: ಭವಾನಿ ರೇವಣ್ಣ




